LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಭಯೋತ್ಪಾದಕರಿಗೆ ಸೇರಿದ ಭಾರಿ ಪ್ರಮಾಣದ ಸ್ಫೋಟಕ, ಶಸ್ತ್ರಾಸ್ತ್ರಗಳು ವಶಕ್ಕೆ

ಪೂಂಚ್ : ಭಯೋತ್ಪಾದಕರಿಗೆ ಸೇರಿದ ಭಾರಿ ಪ್ರಮಾಣದ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸೇನೆಯ ರೋಮಿಯೊ ಪಡೆಯು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಜುಲಾಸ್‌ನಲ್ಲಿ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೇನೆಯು ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆ ನಡೆಸಿದ್ದು, ಭಯೋತ್ಪಾದಕರಿಗೆ ಸೇರಿದ ಭಾರಿ ಪ್ರಮಾಣದ ಸ್ಫೋಟಕ ಇರುವ ಚೀಲಗಳನ್ನು ವಶಕ್ಕೆ ಪಡೆದಿದೆ. ವಶಕ್ಕೆ ಪಡೆದ ಈ ಚೀಲದಲ್ಲಿ ಎಕೆ 47, ಪಾಕಿಸ್ತಾನದಲ್ಲಿ ತಯಾರಿಸಿರುವ ಪಿಸ್ತೂಲ್ ಮತ್ತು ಅತ್ಯಾಧುನಿಕ ಸ್ಫೋಟಕಗಳು, ಚೀನಾ ಗ್ರೆನೇಡ್‌ಗಳು ಸೇರಿದಂತೆ ಅಪಾರ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ.

ಅಕ್ಟೋಬರ್ 5ರಂದು, ವಿಶ್ವಾಸಾರ್ಹ ಮೂಲಗಳ ಮಾಹಿತಿಯ ಆಧಾರದ ಮೇಲೆ ಜುಲಾಸ್ ಪ್ರದೇಶದಲ್ಲಿ ಭಾರತೀಯ ಸೇನೆಯ ರೋಮಿಯೊ ಪಡೆ ಪ್ರಮುಖ ಶೋಧ ಕಾರ್ಯಾಚರಣೆಯನ್ನು ನಡೆಸಿತು. ಶೋಧದ ಸಮಯದಲ್ಲಿ ಶಂಕಿತ ಭಯೋತ್ಪಾದಕರ ಬ್ಯಾಗ್ ಪತ್ತೆಯಾಗಿದ್ದು, ಎಕೆ 47 ಗನ್‌ಗಳು, ಪಾಕಿಸ್ತಾನದ ಪಿಸ್ತೂಲ್, ಹಲವು ಸುತ್ತುಗಳ ಗುಂಡು, ಅತ್ಯಾಧುನಿಕ ಸ್ಫೋಟಕಗಳಾದ ಆರ್‌ಸಿಐಇಡಿ, ಟೈಮ್ಸ್ ಡಿಸ್ಟ್ರಿಕ್ಷನ್ ಐಇಡಿ, ಸ್ಟವ್ ಐಇಡಿ, ಐಇಡಿ ಸ್ಫೋಟಕಗಳು ಮತ್ತು ಚೈನೀಸ್ ಗ್ರೆನೇಡ್‌ಗಳು ಪತ್ತೆಯಾಗಿವೆ. ಎಲ್ಲವೂ ಬಳಸಲು ಸಿದ್ಧ ಸ್ಥಿತಿಯಲ್ಲಿವೆ ಎಂದು ಸೇನೆ ಪ್ರಕಟಣೆಯಲ್ಲಿ ಹೇಳಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ಭೂಮಿಯ ಸಮೀಪ ಹಾದು ಹೋಗಲಿದೆ 67 ಅಡಿಯ ಕ್ಷುದ್ರಗ್ರಹ …!ಬೆಂಗಳೂರು: ಅಣ್ಣನ ನೋಡಲು ಜೈಲಿಗೆ ಹೋದಾಗ ತಲೆ ಮರೆಸಿಕೊಂಡಿದ್ದ ಆರೋಪಿ AI ಕ್ಯಾಮರಾದಿಂದ ಸೆರೆನಂದಿನಿ ಹಾಲಿನ‌ ದರ ಶೀಘ್ರದಲ್ಲಿಯೇ ಏರಿಕೆ..?ಅಲ್ಪಸಂಖ್ಯಾತ ಸಮುದಾಯದ ಮುಖಂಡರನ್ನು ಹೊರಗಿಟ್ಟು ಬಜೆಟ್ ಪೂರ್ವಭಾವಿ ಸಭೆ- ವ್ಯಾಪಕ ಆಕ್ರೋಶ.ಲ್ಯಾಡಿಂಗ್ ವೇಳೆ ರನ್‌ ವೇಯಲ್ಲೇ ತಲೆ ಕೆಳಗಾಗಿ ಬಿದ್ದ ವಿಮಾನಚಾಮರಾಜನಗರ ವಿಶ್ವವಿದ್ಯಾಲಯಕ್ಕೆ ಬೀಗ : ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳುಚಲಿಸುತ್ತಿದ್ದ ರೈಲಿನಿಂದ ಕಾಲು ಜಾರಿ 70 ಅಡಿ ಆಳದ ನದಿಗೆ ಬಿದ್ದ ವಿದ್ಯಾರ್ಥಿ..!ಕುಡಿಯುವ ನೀರು ಅನಗತ್ಯ ಪೋಲು ಮಾಡಿದರೆ 5000 ದಂಡನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕಕೇವಲ 22 ವರ್ಷಕ್ಕೇ ಮೊದಲ ಪ್ರಯತ್ನದಲ್ಲೇ IFS ಅಧಿಕಾರಿಯಾದ ಮುಸ್ಕಾನ್ ಜಿಂದಾಲ್