ಮತ್ತೊಂದು ಭಯಾನಕ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಬೆಳಗಾವಿ: ಜಗತ್ತಿನಲ್ಲಿ ರೋಗ ದಿನಗಳು ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಪ ಆಯಸ್ಸು ಕಡಿಮೆಯಾಗುತ್ತಿದೆ. ಹೆಣ್ಣು, ಗಂಡು ಮಾನಸಿಕ ಸ್ಥೈರ್ಯ ಕಳೆದುಕೊಳ್ಳಲಿದ್ದಾರೆ. ಬರುವ ದಿನಗಳು ಅಷ್ಟು ಶುಭವಿಲ್ಲ ಎಂದು ಕೋಡಿಮಠದ ಶ್ರೀ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭಯಾನಕ ಭವಿಷ್ಯ ನುಡಿದರು. ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವ ದಿನಗಳಲ್ಲಿ ಒಳ್ಳೆಯ ದಿನಗಳು ಸಹ ಇವೆ. ವಿಶೇಷವಾಗಿ ಕಪ್ಪು, ಬೆಳಕಿನಲ್ಲಿ ಕಪ್ಪು ಹೆಚ್ಚಾಗಿದೆ. ರಾಜಕಾರಣದ ಬಗ್ಗೆ ಹೇಳಬೇಕಾದರೆ ಎಚ್ಚರಿಕೆಯಿಂದ ಹೇಳಬೇಕಾಗುತ್ತದೆ. ರಾಜ್ಯದಲ್ಲಿ ಭೀಕರ ಮಳೆಯಾಗುತ್ತದೆ. ಗುಡ್ಡ ಕುಸಿತವಾಗುತ್ತದೆ. ಸಾವು, ನೋವು ಸಂಭವಿಸುತ್ತದೆ ಎಂದು ಹೇಳಿದ್ದೆ. ಅದು ಅಮವಾಸ್ಯೆಯವರೆಗೂ ಇರುತ್ತದೆ. ಪ್ರಕೃತಿಯಲ್ಲಿ ಒಳ್ಳೆಯದು ಕೆಟ್ಟದ್ದು ಇದೆ. ಅದು ಪ್ರಕೃತಿಯ ಧೋಷ. ಒಳ್ಳೆಯದಕ್ಕಿನ ಕೆಟ್ಟದ್ದೆ ಹೆಚ್ಚಾಗುತ್ತದೆ. ಅಮವಾಸ್ಯೆ ನಂತರ ಈ ಸಮಸ್ಯೆ ಮುಂದಿನ ಭಾಗದಲ್ಲಿ ಆಗುತ್ತದೆ. ಅನಿಷ್ಟ ಜಾಸ್ತಿ ಇರುತ್ತದೆ ಎಂದು ಭವಿಷ್ಯ ನುಡಿದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.