ಮಹಿಳೆಯನ್ನು ಕೊಚ್ಚಿ 6 ತುಂಡು ಮಾಡಿ ಹಿತ್ತಲ್ಲಲ್ಲಿ ಹೂತಿಟ್ಟವ ನಾಪತ್ತೆ..!
ಜೈಪುರ : ರಾಜಸ್ಥಾನದ ಜೋಧಪುರದಲ್ಲಿ ಮಹಿಳೆಯನ್ನ ತುಂಡು, ತುಂಡಾಗಿ ಕತ್ತರಿಸಿ ಮನೆಯ ಹಿತ್ತಲಲ್ಲಿ ಹೂತಿಟ್ಟ ಪಾಪಿ ತಲೆ ಮರೆಸಿಕೊಂಡಿದ್ದಾನೆ. ಜೋಧಪುರದ ಅನಿತಾ ಚೌಧರಿ ಮೃತ ಮಹಿಳೆ. 50 ವರ್ಷದ ಅನಿತಾ ಚೌಧರಿ ಕಳೆದ 2 ದಿನಗಳಿಂದ ನಾಪತ್ತೆಯಾಗಿದ್ದರು. ಅನಿತಾ ಪತಿ ಪೊಲೀಸರಿಗೆ ನಾಪತ್ತೆಯಾಗಿದ್ದ ದೂರು ಸಲ್ಲಿಕೆ ಮಾಡಿದ್ದರು. ಅನಿತಾ ಚೌಧರಿ ನಾಪತ್ತೆ ಕೇಸ್ ದಾಖಲಿಸಿಕೊಂಡ ಪೊಲೀಸರಿಗೆ ಗುಲ್ ಮೊಹಮ್ಮದ್ ಎಂಬಾತನ ಮೇಲೆ ಅನುಮಾನ ಬಂದಿದೆ. ಈ ಅನುಮಾನ ನಿಜವಾಗಿದ್ದು, ಆರೋಪಿ ಮೊಹಮ್ಮದ್ ಮಹಿಳೆಯನ್ನು ಹತ್ಯೆಗೈದು 6 ತುಂಡುಗಳಾಗಿ ಕತ್ತರಿಸಿ ಹೂತಿದ್ದು ಮೃತದೇಹವನ್ನು ಹೊರ ತೆಗೆಯಲಾಗಿದೆ. ಮಹಿಳೆಯ ನಾಪತ್ತೆ ಕೇಸ್ ತನಿಖೆ ನಡೆಸಿದ ಪೊಲೀಸರಿಗೆ ಅನಿತಾ ಚೌಧರಿಯ ಮೊಬೈಲ್ ನೆಟ್‌ವರ್ಕ್ ಕೊನೆಯ ಬಾರಿ ಗುಲ್ ಮೊಹಮ್ಮದ್ ಮನೆಯಲ್ಲೇ ಇದ್ದ ಮಾಹಿತಿ ಸಿಕ್ಕಿದೆ. ಕೂಡಲೇ ಆತನ ಮನೆಗೆ ಹೋಗಿ ಪರಿಶೀಲಿಸಿದಾಗ ಮೊಹಮ್ಮದ್ ನಾಪತ್ತೆ ಆಗಿದ್ದ. ಅನುಮಾನ ಮತ್ತಷ್ಟು ಹೆಚ್ಚಾಗಿ ಆತನ ಪತ್ನಿಯನ್ನು ವಿಚಾರಣೆ ನಡೆಸಿದಾಗ ಮನೆ ಹಿತ್ತಲಲ್ಲಿ ಶವ ಹೂತಿಟ್ಟಿರುವುದು ಬೆಳಕಿಗೆ ಬಂದಿದೆ. ಸದ್ಯ ಮೊಹಮ್ಮದ್ ಎಂಬಾತನ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಪತ್ತೆಯಾಗಿರುವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅನಿತಾ ಚೌಧರಿ ಶವವನ್ನು ಜೋಧಪುರದ ಏಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.