LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮುಂಬೈನಲ್ಲಿ ಎಲ್ಲಾ ಹಗುರ ಮೋಟಾರು ವಾಹನಗಳಿಗೆ ಟೋಲ್ ಇಲ್ಲ- ಮಹಾರಾಷ್ಟ್ರ ಸರ್ಕಾರದಿಂದ ಘೋಷಣೆ

ಮುಂಬೈ : ಮಹಾರಾಷ್ಟ್ರದ ರಾಜಧಾನಿಯಾದ ವಾಣಿಜ್ಯ ನಗರಿ ಮುಂಬೈಗೆ ಹೋಗುವ ಕಾರುಗಳು ಇನ್ಮುಂದೆ ಟೋಲ್ ಕಟ್ಟಬೇಕಿಲ್ಲ. ಎಲ್ಲಾ ಹಗುರ ಮೋಟಾರು ವಾಹನಗಳಿಗೆ ಟೋಲ್​ನಿಂದ ವಿನಾಯಿತಿ ನೀಡಲಾಗುತ್ತಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆ ಘೋಷಿಸಿದ್ದಾರೆ.

ರಾಜ್ಯ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಂದು ಮಧ್ಯ ರಾತ್ರಿಯಿಂದಲೇ ಈ ಕ್ರಮ ಜಾರಿಗೆ ಬರಲಿದೆ. ಮಹಾರಾಷ್ಟ್ರದಲ್ಲಿ ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಅದರ ಹೊಸ್ತಿಲಲ್ಲೇ ಸರ್ಕಾರ ತೆಗೆದುಕೊಂಡಿರುವ ಈ ಟೋಲ್ ವಿನಾಯಿತಿ ನಿರ್ಧಾರವನ್ನು ಎಲೆಕ್ಷನ್ ಗಿಮಿಕ್ ಎಂದು ವಿಪಕ್ಷಗಳು ಟೀಕಿಸಿವೆ.

ಮುಂಬೈ ನಗರವನ್ನು ಪ್ರವೇಶಿಸಲು ಇರುವ ಆರು ರಸ್ತೆಗಳಲ್ಲಿ ಟೋಲ್ ಬೂತ್​ಗಳಿವೆ. ದಹಿಸಾರ್, ಆನಂದ್ ನಗರ್, ವೈಶಾಲಿ, ಐರೋಲಿ ಮತ್ತು ಮುಲುಂದ್​ನಲ್ಲಿರುವ ಟೋಲ್​ಗಳಲ್ಲಿ ನಾಳೆಯಿಂದ ಲೈಟ್ ಮೋಟಾರು ವಾಹನಗಳು ಟೋಲ್ ಕಟ್ಟುವ ಅಗತ್ಯ ಇರುವುದಿಲ್ಲ. ಮುಕ್ತವಾಗಿ ಸಂಚರಿಸಬಹುದಾಗಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ಗುಜರಾತ್ ಕಾಂಗ್ರೆಸ್‌ನಲ್ಲಿ ಎರಡು ಬಣಗಳಿವೆ'- ರಾಹುಲ್ ಗಾಂಧಿನಿಮಗೆ ಗೊತ್ತಿಲ್ಲದೇ ಯಾರಾದರೂ ನಿಮ್ಮ aadhar card ಬಳಸುತ್ತಿದ್ದಾರೆಯೇ.? ತಿಳಿದುಕೊಳ್ಳುವುದು ಹೇಗೆ.?? ಇಲ್ಲಿದೆ ಮಾಹಿತಿಬಜೆಟ್ ಎಫೆಕ್ಟ್: ಅಬಕಾರಿ ಇಲಾಖೆಗೆ 36,500 ಕೋಟಿ ಗುರಿ ನಿಗದಿ..!! ಮದ್ಯ ಪ್ರಿಯರಿಗೆ ಬೆಲೆ ಏರಿಕೆಯ ಆಘಾತಸೊಳ್ಳೆ ಓಡಿಸಲು ಕಾಯಿಲ್ ಬಳಸುವ ಮುನ್ನ ಈ ಅಪಾಯಗಳನ್ನು ತಿಳಿದುಕೊಳ್ಳಿಮಂಗಳೂರು: ವಿದ್ಯಾರ್ಥಿ ನಾಪತ್ತೆ ಪ್ರಕರಣ- ಕೂಂಬಿಂಗ್ ಕಾರ್ಯ ಆರಂಭ‘ಒಂದು ದೇಶ ಒಂದು ಚುನಾವಣೆ'ಯಿಂದ ರಾಷ್ಟ್ರಾಭಿವೃದ್ಧಿಗೆ ನೆರವು'- ವೆಂಕಯ್ಯ ನಾಯ್ಡು‘ನಾರಿ ಶಕ್ತಿ’ಗೆ ನಮೋ ನಮನ: ತನ್ನ ಎಕ್ಸ್ ಖಾತೆಯನ್ನು ಸಾಧಕ ಮಹಿಳೆಯರಿಗೆ ವಹಿಸಿದ ಪ್ರಧಾನಿ ಮೋದಿಗಣಿತದ ಮೂಲ ಇಸ್ಲಾಂ: ಕಾಂಗ್ರೆಸ್ ನಾಯಕಿ ಶಮಾರವರ ವಿವಾದಾತ್ಮಕ ಹೇಳಿಕೆ25 ಸಾವಿರ ಅಲ್ಪಸಂಖ್ಯಾತ ಬಾಲಕಿಯರಿಗೆ ಆತ್ಮರಕ್ಷಣಾ ತರಬೇತಿ'ಈ ಬಾರಿಯ ಬಜೆಟ್ ದೇಶಕ್ಕೆ ಮಾದರಿ'- ಡಿಕೆಶಿ ಸಮರ್ಥನೆ