LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಯುದ್ಧ ಕೊನೆಗೊಳಿಸಲು ಬದ್ಧ; ವಿಜಯೋತ್ಸದಲ್ಲಿ ಟ್ರಂಪ್‌ ಘೋಷಣೆ





ನ್ಯೂಯಾರ್ಕ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಡೊನಾಲ್ಡ್‌ ಟ್ರಂಪ್‌, ಯುದ್ಧದ ನಿಲ್ಲಿಸುವ ಪ್ರಸ್ತಾವವನ್ನು ಮಾಡಿದ್ದಾರೆ.

“ನಾನು ಯುದ್ಧ ಆರಂಭ ಮಾಡಲು ಹೋಗಲಾರೆ, ಯುದ್ಧವನ್ನು ಕೊನೆಗೊಳಿಸಲು ಮುಂದಾಗುತ್ತೇನೆ’ ಎಂದು ಘೋಷಣೆ ಮಾಡಿದ್ದಾರೆ.








ಜತೆಗೆ ಜು.13ರಂದು ಪ್ರಚಾರದ ವೇಳೆ ತಮ್ಮ ಮೇಲೆ ನಡೆದಿದ್ದ ದಾಳಿ ಸ್ಮರಿಸಿದ ಅವರು “ಮಹತ್ವವಾಗಿರುವ ಯಾವುದೋ ಉದ್ದೇಶಕ್ಕೆ ದೇವರು ನನ್ನನ್ನು ಬದುಕಿಸಿದ್ದಾನೆ’ ಎಂದರು.

ಫ್ಲೋರಿಡಾದಲ್ಲಿ ವಿಜಯೋತ್ಸವ ಭಾಷಣ ಮಾಡಿದ ಟ್ರಂಪ್‌, ರಷ್ಯಾ- ಉಕ್ರೇನ್‌ ಹಾಗೂ ಇಸ್ರೇಲ್‌-ಹಮಾಸ್‌-ಲೆಬೆನಾನ್‌ ನಡುವಿನ ಯುದ್ಧದ ಬಗ್ಗೆ ಪರೋಕ್ಷವಾಗಿ ಪ್ರಸ್ತಾವಿಸಿ,”ನಾನು ಯುದ್ಧವನ್ನು ಆರಂಭಿಸುವುದಿಲ್ಲ, ನಿಲ್ಲಿಸುತ್ತೇನೆ” ಎಂದಿದ್ದಾರೆ. ಇನ್ನು ಅಮೆರಿಕದ ಗಡಿ ಭಾಗವನ್ನು ಕೂಡಲೇ ಬಂದ್‌ ಮಾಡಲಾಗುವುದು. ಯಾವುದೇ ಕಾರಣಕ್ಕೂ ಅಕ್ರಮ ವಲಸಿಗರು ಪ್ರವೇಶಿಸದಂತೆ ನೋಡಿಕೊಳ್ಳಲಾಗುವುದು. ತೆರಿಗೆಗಳ ಹೊರೆ ಇಳಿಸುತ್ತೇನೆ’ ಎಂದು ಘೋಷಿಸಿದರು.

ಉಸಿರಿರುವರೆಗೂ ಹೋರಾಟ: ಕಳೆದ 4 ವರ್ಷ ದಲ್ಲಾಗಿರುವ ವಿಭಜನೆಯನ್ನು ಸರಿಪಡಿಸುವ ಕಾಲ ಇದಾಗಿದ್ದು, ಒಂದಾಗುವ ಸಮಯ ಬಂದಿದೆ. ಕೆಲವು ಸಮಯದವರೆಗೆ ನಾವು ದೇಶವನ್ನು ಒಟ್ಟಾಗಿ ಮುನ್ನಡೆಸಬೇಕಿದೆ. ನಾವಿಂದು ಇತಿಹಾಸ ವನ್ನು ರಚಿಸಿದ್ದೇವೆ. ಸುರಕ್ಷಿತ-ಸಮೃದ್ಧ ಅಮೆರಿಕವನ್ನಾಗಿ ರೂಪಿಸುವವರೆಗೆ ನಾನು ವಿಶ್ರಮಿಸಲಾರೆ. ನನ್ನ ದೇಹದಲ್ಲಿ ಉಸಿರಿರುವವರೆಗೂ ನಿಮಗಾಗಿ ಹೋರಾಡುತ್ತೇನೆ ಎಂದರು.



Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
-ಜೇಡರ ದಾಸಿಮಯ್ಯ ಅವರ  ವಚನ.!ಧರ್ಮಸ್ಥಳ ಪ್ರಕರಣಕ್ಕೆ ಹೊಸ ತಿರುವು: “ಸುಳ್ಳು ಹೇಳುವಂತೆ ನನ್ನನ್ನು ಬಲವಂತಪಡಿಸಿದ್ದರು” – ಎಸ್ಐಟಿ ಮುಂದೆ ಮುಸುಕುಧಾರಿ ಸ್ಫೋಟಕ ಮಾಹಿತಿದೂರುದಾರ, ದೂರುದಾರನ ಹಿಂದಿರುವ ವ್ಯಕ್ತಿಗಳ ಕುರಿತು ಸಮಗ್ರ ತನಿಖೆಗೆ ವಿಜಯೇಂದ್ರ ಆಗ್ರಹಸದನದಲ್ಲೂ ‌ಸುದ್ದಿಯಾದ ಧರ್ಮಸ್ಥಳ ಪ್ರಕರಣ: ಗೃಹ ಸಚಿವರು ಹೇಳಿದ್ದೇನು ಗೊತ್ತಾ?'ಧರ್ಮಸ್ಥಳದಲ್ಲಿ ಶವ ಶೋಧ ತಾತ್ಕಾಲಿಕ ಸ್ಥಗಿತ'- ಪರಮೇಶ್ವರ್'ವಿಧಾನ ಮಂಡಲದ ಅಧಿವೇಶನ ಮುಗಿದ ಬಳಿಕ ಅನರ್ಹ ಬಿಪಿಎಲ್ ಕಾರ್ಡ್ ಪರಿಷ್ಕರಣೆ'- ಮುನಿಯಪ್ಪಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಸಣ್ಣ ತಪ್ಪುಗಳಿಗೆ ಜೈಲು ಶಿಕ್ಷೆ ವಿಧಿಸುವಂತಿಲ್ಲ, ತಿದ್ದುಪಡಿಗೆ ಮುಂದಾದ ಕೇಂದ್ರ ಸರ್ಕಾರ!!540 ಅರಣ್ಯ ರಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಗತಿ: ಈಶ್ವರ ಖಂಡ್ರೆ.!ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಗೃಹ ಸಚಿವ ಪರಮೇಶ್ವರ್ ಸೂಚನೆ