LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಯೋಗಿ ಆದಿತ್ಯನಾಥ್ ಭಯ - ಪೊಲೀಸರಿಗೆ ಶರಣಾದ 74 ರೌಡಿಶೀಟರ್‌ಗಳು

ಸಿಎಂ ಯೋಗಿ ಆದಿತ್ಯನಾಥ್ ಉತ್ತರಪ್ರದೇಶದಲ್ಲಿ ರೌಡಿಶೀಟರ್‌ ಹಾಗೂ ಗ್ಯಾಂಗ್‌ಸ್ಟರ್‌ಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಯೋಗಿ ಆದಿತ್ಯನಾಥ್ ನಾಡಿನಲ್ಲಿ ನಡೆಯುತ್ತಿರೋ ಸಾಲು, ಸಾಲು ಎನ್‌ಕೌಂಟರ್‌ಗಳಿಗೆ ಹೆದರಿ ರೌಡಿಶೀಟರ್‌ಗಳು ಪೊಲೀಸರಿಗೆ ಶರಣಾಗಿದ್ದಾರೆ.

74 ರೌಡಿಶೀಟರ್‌ಗಳು ಕೈಯಲ್ಲಿ ಬೋರ್ಡ್‌ ಹಿಡಿದು ಪೊಲೀಸ್ ಠಾಣೆಗೆ ಬಂದಿರೋದು ಮತ್ತೊಂದು ವಿಶೇಷವಾಗಿದೆ. ಉತ್ತರಪ್ರದೇಶಧ ಹರ್ದೋಯ್ ಜಿಲ್ಲೆಯ ಅತ್ರೌಲಿ ಪೊಲೀಸ್ ಠಾಣೆಯಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದೆ. ಕೈಯಲ್ಲಿ ಬೋರ್ಡ್ ಹಿಡಿದ ಕ್ರಿಮಿನಲ್ಸ್‌ಗಳು ನಾವು ಇನ್ಮುಂದೆ ಅಪರಾಧಗಳನ್ನು ಮಾಡುವುದಿಲ್ಲ ಎಂದು ಪೊಲೀಸರ ಮುಂದೆ ಪ್ರಮಾಣ ಮಾಡಿದ್ದಾರೆ.

ನಾವು ಅಪರಾಧ ಮಾಡೋದಿಲ್ಲ ಎಂದು ಪ್ರಮಾಣ ಮಾಡಿರುವ ಕ್ರಿಮಿನಲ್‌ಗಳು ಮತ್ತೊಂದು ಮಾತನ್ನು ಹೇಳಿದ್ದಾರೆ. ನಾವು ತಪ್ಪು ಮಾಡದಿರುವ ಜೊತೆಗೆ ನಮ್ಮ ಸುತ್ತಮುತ್ತಾ ಯಾವುದೇ ಅಪರಾಧ ನಡೆದರೆ ಪೊಲೀಸರಿಗೆ ತಿಳಿಸುತ್ತೇವೆ ಅನ್ನೋ ಭರವಸೆ ನೀಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST