ರತನ್ ಟಾಟಾ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ಭಾರತ ಕಂಡ ಶ್ರೇಷ್ಟ ಕೈಗಾರಿಕೋದ್ಯಮಿ, ಕಲಿಯುಗದ ಕರ್ಣ ಅಂತಾನೇ ಕರೆಸಿಕೊಳ್ಳುತ್ತಿದ್ದ ಟಾಟಾ ಸನ್ಸ್‌ನ ಗೌರವ ಅಧ್ಯಕ್ಷ ರತನ್ ಟಾಟಾ ನಮ್ಮನ್ನಗಲಿರುವುದು ತೀವ್ರ ದುಃಖ ತಂದಿದೆ. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಸಲ್ಮಾನ್ ಖಾನ್, ಗೌತಮ್ ಅದಾನಿ, ಆನಂದ ಮಹೀಂದ್ರಾ, ಗೂಗಲ್ ಸಿಇಓ ಸುಂದರ್ ಪಿಚ್ಛೈ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಪ್ರಧಾನಿ ಮೋದಿ, 'ರತನ್ ಟಾಟಾ ದೂರದೃಷ್ಟಿಯ ಉದ್ಯಮಿ. ಸಹಾನುಭೂತಿಯುಳ್ಳ ಆತ್ಮ ಮತ್ತು ಅಸಾಧಾರಣ ಮನುಷ್ಯ. ಅವರು ಭಾರತದ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರತಿಷ್ಠಿತ ವ್ಯಾಪಾರ ಸಂಸ್ಥೆಗಳಿಗೆ ಸ್ಥಿರ ನಾಯಕತ್ವ ನೀಡಿದರು' ಎಂದು ಸ್ಮರಿಸಿದ್ದಾರೆ. ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, 'ರತನ್ ಟಾಟಾ ದೂರದೃಷ್ಟಿ ಹೊಂದಿದ ವ್ಯಕ್ತಿ. ಅವರು ವ್ಯಾಪಾರ ಮತ್ತು ಲೋಕೋಪಕಾರ ಎರಡರಲ್ಲೂ ಶಾಶ್ವತವಾದ ಗುರುತು ಬಿಟ್ಟಿದ್ದಾರೆ. ಅವರ ಕುಟುಂಬ ಮತ್ತು ಟಾಟಾ ಸಮುದಾಯಕ್ಕೆ ನನ್ನ ಸಂತಾಪಗಳು' ಎಂದು ತಿಳಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.