ಮಳೆ ವರದಿ: ನಿನ್ನೆ ಚಿತ್ರದುರ್ಗ ಜಿಲ್ಲೆಯಲ್ಲಿ 6.4 ಮಿ.ಮೀ ಮಳೆ.! ಎಲ್ಲಿ ಎಷ್ಟು ವಿವರ.!
ಚಿತ್ರದುರ್ಗ : ಶುಕ್ರವಾರ ರಾತ್ರಿ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 6.4 ಮಿ.ಮೀ ಮಳೆಯಾಗಿದೆ.ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 7.1 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 11.3 ಮಿ.ಮೀ, ಹಿರಿಯೂರು ತಾಲ್ಲೂಕು 0.3 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 3.6 ಮಿ.ಮೀ, ಹೊಸದುರ್ಗ ತಾಲ್ಲೂಕಿನಲ್ಲಿ 4.3 ಮಿ.ಮೀ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 17.8 ಮಿ.ಮೀ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 2.8 ಮಿ.ಮೀ, ನಾಯಕನಹಟ್ಟಿ 13.3 ಮಿ.ಮೀ, ಪರಶುರಾಂಪುರ 4.4 ಮಿ.ಮೀ, ತಳಕು 9.8 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 2 ಮಿ.ಮೀ, ಭರಮಸಾಗರ 25.7 ಮಿ.ಮೀ, ಹಿರೇಗುಂಟನೂರು 10.8 ಮಿ.ಮೀ, ತುರುವನೂರು 12.4 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 3 ಮಿ.ಮೀ, ಬಿ.ದುರ್ಗ 7.8 ಮಿ.ಮೀ, ರಾಮಗಿರಿ 1.4 ಮಿ.ಮೀ, ತಾಳ್ಯ 2.7 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 4.2 ಮಿ.ಮೀ, ಮಾಡದಕೆರೆ 6 ಮಿ.ಮೀ, ಮತ್ತೋಡು 7 ಮಿ.ಮೀ, ಶ್ರೀರಾಂಪುರ 2.5 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 14.6 ಮಿ.ಮೀ ಹಾಗೂ ದೇವಸಮುದ್ರದಲ್ಲಿ 21.4 ಮಿ.ಮೀ ಮಳೆಯಾಗಿದೆ.
15 ಮನೆಗಳಿಗೆ ಹಾನಿ: ಮಳೆಯಿಂದಾಗಿ ಜಿಲ್ಲೆಯಾದ್ಯಂತ 13 ಮನೆಗಳು ಭಾಗಶಃ ಹಾಗೂ 2 ಮನೆಗಳು ಸಂಪೂರ್ಣ ಹಾನಿಯಾಗಿವೆ. 2 ದೊಡ್ಡಜಾನುವಾರು ಹಾನಿ, 24.7 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಹಾಗೂ 4.5 ಹೆಕ್ಟೇರ್ ಕೃಷಿ ಬೆಳೆಹಾನಿಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ 4 ಭಾಗಶಃ ಮನೆ ಹಾನಿ, ಚಳ್ಳಕೆರೆ ತಾಲ್ಲೂಕಿನಲ್ಲಿ 1 ದೊಡ್ಡ ಜಾನುವಾರು, ತಲಾ 3 ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕೆ ಬೆಳೆ, ಹೊಳಲ್ಕೆರೆ ತಾಲ್ಲೂಕಿನಲ್ಲಿ 2.5 ಹೆಕ್ಟೇರ್ ತೋಟಗಾರಿಕೆ ಬೆಳೆ, ಹೊಸದುರ್ಗ ತಾಲ್ಲೂಕಿನಲ್ಲಿ 14 ಹೆಕ್ಟೇರ್ ತೋಟಗಾರಿಕೆ ಬೆಳೆ, ಹಿರಿಯೂರು ತಾಲ್ಲೂಕಿನಲ್ಲಿ 5 ಭಾಗಶಃ 2 ಪೂರ್ಣ ಮನೆ ಹಾಗೂ 4.7 ಹೆಕ್ಟೇರ್ ತೋಟಗಾರಿಕೆ ಹಾಗೂ 1 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 2 ಭಾಗಶಃ ಮನೆ ಹಾನಿಯಾಗಿದೆ, 1 ದೊಡ ಜಾನುವಾರು ಮೃತಪಟ್ಟಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.