
ಏ .20 ರಂದು ನಡೆದ ಶ್ರೀಹರಿ ಭಜನೆ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳಾದ ಕುಮಾರಿ- ಧೃತಿ ಆತ್ರೇಯಸ್, ಕುಮಾರಿ- ಧನ್ವಿ ಆತ್ರೇಯಸ್ ಎಂಬ ಮಕ್ಕಳು ವಿಶೇಷವಾಗಿ ಶ್ರೀ ಗುರು ರಾಯರ ಸನ್ನಿಧಿಯಲ್ಲಿ "ನರ್ತನ ಸೇವೆ"ಯನ್ನು ಸಲ್ಲಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು, ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್, ಕೆ ವಾದಿಂದ್ರಾಚಾರ್ಯರು ಮಾತನಾಡುತ್ತಾ ಇಂದಿನ ಮಕ್ಕಳಿಗೆ ಸಂಸ್ಕಾರವೇ ಮುಖ್ಯ ಆ ಸಂಸ್ಕಾರ ದಿಂದಲೇ ಮಕ್ಕಳಿಗೆ ಶ್ರೇಯೋಭಿ ವೃದ್ಧಿ ಆಗಲಿದೇ ಎಂದು ತಿಳಿಸಿ ಆಶೀರ್ವದಿಸುತ್ತ ಫಲ ಮಂತ್ರಾಕ್ಷತೆ ಕೊಟ್ಟು ಅನುಗ್ರಹಿಸಿದರು ಹಾಗೂ ಭಕ್ತರು ಸಹ ಮಕ್ಕಳ ನರ್ತನ ಸೇವೆಯನ್ನು ವೀಕ್ಷಿಸಿ ಸಂತೋಷವನ್ನು ವ್ಯಕ್ತ ಪಡಿಸುತ್ತಾ ಮಕ್ಕಳನ್ನು ಪ್ರೋತ್ಸಾಹಿಸಿ ಹಾರೈಸಿದರು.