LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರುಚಿಕರವಾದ ಬ್ರೆಡ್ ಮಂಚುರಿ ಮಾಡುವ ವಿಧಾನ




ಬೇಕಾಗುವ ಪದಾರ್ಥಗಳು






  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು

  • ಜೋಳದ ಹಿಟ್ಟು- 2 ಚಮಚ

  • ಮೈದಾ ಹಿಟ್ಟು - 4 ಚಮಚ

  • ಉಪ್ಪು-ರುಚಿಗೆ ತಕ್ಕಷ್ಟು

  • ಕಾಳುಮೆಣಸಿನ ಪುಡಿ- ಅರ್ಧ ಚಮಚ

  • ಶುಂಠಿ, ಬೆಳ್ಳುಳ್ಳಿ ಪೇಸ್ಟ್- ಅರ್ಧ ಚಮಚ

  • ಶುಂಠಿ, ಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು ಸ್ವಲ್ಪ

  • ಹಸಿಮೆಣಸಿನ ಕಾಯಿ- 1

  • ಹಸಿರು ಈರುಳ್ಳಿ- ಸ್ವಲ್ಪ

  • ಕ್ಯಾಪ್ಸಿಕಂ- ಸ್ವಲ್ಪ

  • ವಿನೇಗರ್- 2 ಚಮಚ

  • ಸೋಯಾ ಸಾಸ್- 2 ಚಮಚ

  • ರೆಡ್ ಚಿಲ್ಲಿ ಸಾಸ್- 2 ಚಮಚ

  • ಟೊಮೆಟೊ ಕೆಚಪ್- 4 ಚಮಚ

  • ಕಾಳು ಮೆಣಸಿನ ಪುಡಿ - ಅರ್ಧ ಚಮಚ







ಮಾಡುವ ವಿಧಾನ...

  • ಒಂದು ಪಾತ್ರೆಗೆ ಜೋಳದ ಹಿಟ್ಟು, ಮೈದಾ ಹಿಟ್ಟು, ಉಪ್ಪು, ಕಾಳುಮೆಮಸಿನ ಪುಡಿ ಹಾಗೂ ಅರ್ಧ ಚಮಚ ಶುಂಟಿ, ಬೆಳ್ಳುಳ್ಳಿ ಪೇಸ್ಟ್, ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ಇದಕ್ಕೆ ಕತ್ತರಿಸಿಕೊಂಡ ಬ್ರೆಡ್ ತುಂಡುಗಳನ್ನು ಅದ್ದಿ, ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೂ ಕರಿಯಬೇಕು.

  • ನಂತರ ಒಲೆಯ ಮೇಲೆ ಬಾಣಲೆ ಇಟ್ಟು, ಅದಕ್ಕೆ 2-3 ಚಮಚ ಎಣ್ಣೆ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಕ್ಯಾಪ್ಸಿಕಂ, ಹರಿರು ಈರುಳ್ಳಿ ಎಲ್ಲವನ್ನೂ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.

  • ನಂತರ ವಿನೇಗರ್, ಸೊಯಾ ಸಾಸ್, ರೆಡ್ ಚಿಲ್ಲಿ ಸಾಸ್, ಟೊಮೆಟೋ ಕೆಚಪ್ ಹಾಕ ಮಿಶ್ರಣ ಮಾಡಿ. ನಂತರ ಕಾಳುಮೆಣಸಿನ ಪುಡಿ ಹಾಕಿ ಈಗಾಗಲೇ ಎಣ್ಣೆಯಲ್ಲಿ ಕರಿದ ಬ್ರೆಡ್ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾಗ ಬ್ರೆಡ್ ಮಂಚುರಿ ಸವಿಯಲು ಸಿದ್ಧ.


ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.


Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST