LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರುಚಿಕರವಾದ ಮೊಸರಿನ ಕೇಕ್ ಮಾಡುವ ವಿಧಾನ | Curd cake




ಬೇಕಾಗುವ ಪದಾರ್ಥಗಳು






  • ಮೊಟ್ಟೆ- 3

  • ಮೊಸರು- ಒಂದು ಬಟ್ಟಲು

  • ಮೈದಾ ಹಿಟ್ಟು- 1/4 ಬಟ್ಟಲು

  • ವೆನಿಲ್ಲಾ- ಒಂದು ಚಮಚ

  • ನಿಂಬೆ ರಸ- ಸ್ವಲ್ಪ

  • ಸಕ್ಕರೆ- 1/3 ಬಟ್ಟಲು

  • ಐಸಿಂಗ್ ಶುಗರ್- ಸ್ವಲ್ಪ







ಮಾಡುವ ವಿಧಾನ..






  • ಮೊದಲಿಗೆ ಪಾತ್ರೆಯೊಂದನ್ನು ತೆಗೆದುಕೊಂಡು ಮೊಟ್ಟೆಯ ಹಳದಿ ಭಾಗವನ್ನು ಮಾತ್ರ ಹಾಕಿಕೊಳ್ಳಿ. ನಂತರ ಇದಕ್ಕೆ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮೈದಾ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

  • ಮತ್ತೊಂದು ಪಾತ್ರೆಗೆ ಮೊಟ್ಟೆಯ ಬಿಳಿ ಭಾಗ ಹಾಗೂ ನಿಂಬೆ ರಸವನ್ನು ಹಾಕಿ ಚೆನ್ನಾಗಿ 1 ನಿಮಿಷ ಬೀಟ್ ಮಾಡಿಕೊಳ್ಳಿ. ಬಳಿಕ ಸ್ವಲ್ಪ ಸ್ವಲ್ಪವೇ ಸಕ್ಕರೆ ಸೇರಿಸಿ ಚೆನ್ನಾಗಿ ಬೀಟ್ ಮಾಡಿ. ಇದು ಫೋಮ್ ರೀತಿ ಆಗುತ್ತದೆ.

  • ಬಳಿಕ ಈಗಾಗಲೇ ಮಾಡಿಟ್ಟುಕೊಂಡ ಮೊಟ್ಟೆ ಹಾಗೂ ಮೈದಾ ಹಿಟ್ಟಿನ ಮಿಶ್ರಣಕ್ಕೆ ಇದನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

  • ನಂತರ ಮೌಲ್ಡ್'ಗೆ ಹಾಕಿ ತಮತಟ್ಟಾಗಿಸಿ, ಟ್ರೇ ವೊಂದಕ್ಕೆ ಬಿಸಿ ನೀರು ಹಾಕಿ ಅದರಲ್ಲಿ ಈ ಮೌಲ್ಡ್ ಇರಿಸಿ 150 ಡಿಗ್ರಿ ಬಿಸಿಯಲ್ಲಿ ಸುಮಾರು 45-55 ನಿಮಿಷ ಬೇಸಿಯಿಸಿಕೊಳ್ಳಿ. ಈಗ ಓವನ್‌ನಿಂದ ಕೇಕ್ ಅನ್ನು ತೆಗೆದು, ಆರಲು ಬಿಡಿ. ನಿಧಾನವಾಗಿ ಕೇಕ್ ಅನ್ನು ಪಾತ್ರೆಯಿಂದ ಬೇರ್ಪಡಿಸಿ. ಈಗ ಐಸಿಂಗ್ ಶುಗರ್ ನ್ನು ಕೇಕ್ ಮೇಲೆ ಸಿಂಪಡಿಸಿದರೆ ರುಚಿಕರವಾದ ಯೋಗರ್ಟ್ ಕೇಕ್ ಸವಿಯಲು ಸಿದ್ಧ.



Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST