LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರುಚಿಯಾದ ಬಿಸ್ಕೂಟ್ ರೊಟ್ಟಿ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು:

ಮೈದಾ – 1 ಕಪ್, ಕಾಯಿತುರಿ – 3/4 ಕಪ್, ಬಾಂಬೆ ರವಾ – ಅರ್ಧ ಕಪ್, ಕಡಲೇಹಿಟ್ಟು – 3 ಟೀ ಸ್ಪೂನ್, ಖಾರದ ಪುಡಿ – ಸ್ವಲ್ಪ, ಅರಶಿನ – ಸ್ವಲ್ಪ, ಉಪ್ಪು, ಕರಿಯಲು ಎಣ್ಣೆ, ಉದ್ದಿನ ಕಾಳು – ಸ್ವಲ್ಪ, ಸಾಸಿವೆ – ಸ್ವಲ್ಪ, ಕರಿಬೇವುಸೊಪ್ಪು, ಇಂಗು – ಚಿಟಿಕೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ:

ಒಂದು ಕಪ್ ಮೈದಾಗೆ ಸ್ವಲ್ಪ ಉಪ್ಪು, ಖಾರದ ಪುಡಿ ಹಾಕಿ. ನಂತರ 2 ಟೀ. ಚಮಚ ಬಿಸಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿ ಗಟ್ಟಿಯಾದ ಹಿಟ್ಟು ತಯಾರಿಸಿ ಚೆನ್ನಾಗಿ ನಾದಿ, 10 ನಿಮಿಷ ಮುಚ್ಚಿಟ್ಟು ಬಿಡಿ. ನಂತರ ಒಂದು ಬಾಣಲೆಯಲ್ಲಿ 2 ಟೀ ಸ್ಪೂನ್ ಎಣ್ಣೆ ಹಾಕಿ, ನಂತರ ಸಾಸಿವೆ, ಉದ್ದಿನಕಾಳು, ಕರಿಬೇವುಸೊಪ್ಪು, ಚಿಟಿಕೆಯಷ್ಟು ಇಂಗು ಹಾಕಿ. ನಂತರ ಇದಕ್ಕೆ ಕಡಲೇಹಿಟ್ಟು, ಬಾಬೆ ರವಾ ಹಾಕಿ ಫ್ರೈ ಮಾಡಿ. ಬಳಿಕ ತೆಂಗಿನಕಾಯಿತುರಿ ಹಾಕಿ. ನಂತರ ಸ್ವಲ್ಪ ಖಾರದ ಪುಡಿ, ಅರಶಿನ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಇದನ್ನು ತಣ್ಣಗಾಗಲು ಬಿಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ಉಂಡೆ ಮಾಡಿಟ್ಟುಕೊಳ್ಳಿ. ಮೈದಾ ಹಿಟ್ಟಿನ ಮಿಶ್ರಣವನ್ನು ಚಿಕ್ಕದಾಗಿ ಲಟ್ಟಿಸಿ, ಮಾಡಿಟ್ಟ ಉಂಡೆಯನ್ನು ಇದರ ಮಧ್ಯಕ್ಕೆ ಇಡಿ. ನಂತರ ಪೂರಿ ತರಹ ಲಟ್ಟಿಸಿ ಬಿಸಿ ಎಣ್ಣೆಯಲ್ಲಿ ಫ್ರೈ ಮಾಡಿದರೆ ಸವಿಯಲು ರುಚಿಯಾದ ಬಿಸ್ಕೂಟ್ ರೊಟ್ಟಿ ರೆಡಿ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆಳವಾದ ಕಂದಕಕ್ಕೆ ಉರುಳಿಬಿದ್ದ ಬಸ್, 5 ಮಂದಿ ಯಾತ್ರಿಕರು ಸಾವು, 35 ಮಂದಿಗೆ ಗಾಯಎಚ್ಚರ ಯುವಕರೇ: ಕನ್ಯಾ ತೋರಿಸುವ ನೆಪದಲ್ಲಿ ಯುವಕನನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿ ಸುಲಿಗೆ..!!ಉಡುಪಿ: ನಕ್ಸಲ್ ತೊಂಬಟ್ಟು ಲಕ್ಷ್ಮಿ ಉಡುಪಿ ಎಸ್ಪಿ ಕಚೇರಿಯಲ್ಲಿ ಶರಣಾಗತಿಸಿಎಂ ಸಿದ್ದರಾಮಯ್ಯಗೆ ಅನಾರೋಗ್ಯ : ಮಣಿಪಾಲ್ ಆಸ್ಪತ್ರೆಗೆ ದಾಖಲು'NTPC' ಯಲ್ಲಿ 475 ಹುದ್ದೆಗಳಿಗೆ ಅರ್ಜಿ ಆಹ್ವಾನಕುಂಭಮೇಳದಲ್ಲಿ ಜೀವಂತ ಸಮಾಧಿಯಾದ ಪರಮಹಂಸ ಪೀಠಾಧೀಶ್ವರ ಶಿವಯೋಗಿ ಮೌನಿ ಮಹಾರಾಜರು !!ಇದೆ ಮೊದಲಬಾರಿಗೆ ಮದುವೆ ಸಮಾರಂಭಕ್ಕೆ ಸಜ್ಜಾಗುತ್ತಿದೆ ರಾಷ್ಟ್ರಪತಿ ಭವನ!!ಒಂದೇ ಒಂದು ಚುಂಬನಕ್ಕೆ 37 ರೀಟೇಕ್ ತೆಗೆದುಕೊಂಡ ನಟ - ಆ್ಯಕ್ಷನ್ ಕಟ್ ಹೇಳಿ ಸುಸ್ತಾದ ನಿರ್ದೇಶಕ!ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಮೃತ್ಯುಬಂಡುಕೋರರ ಗುಂಡಿನ ದಾಳಿಗೆ 18 ಸೈನಿಕರು ಮೃತ; 23 ಉಗ್ರರು ಹತ