LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರುಚಿಯಾದ ಹಾಲು – ಬಾಳೆಹಣ್ಣಿನ ಶೀರಾ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು : 

ಗೋಧಿ ರವಾ 1 ಕಪ್‌, ಹೆಚ್ಚಿದ ಬಾಳೆ ಹಣ್ಣು 1/2 ಕಪ್‌, ಸಕ್ಕರೆ 2 ಕಪ್‌, ಹಾಲು 2 ಕಪ್‌, ತುಪ್ಪ 1 ಕಪ್‌, ಏಲಕ್ಕಿ ಪೌಡರ್‌ ಚಿಟಿಕೆ, ಒಣ ದ್ರಾಕ್ಷಿ, ಗೋಡಂಬಿ, ಬದಾಮ್‌

ಮಾಡುವ ವಿಧಾನ :

ಮೊದಲು ಬಾಣಲೆಗೆ ಎರಡು ಚಮಚ ತುಪ್ಪ ಸುರಿದು ಸಣ್ಣ ಉರಿಯಲ್ಲಿ ಒಣ ದ್ರಾಕ್ಷಿ, ಗೋಡಂಬಿ ಹಾಗೂ ಹೆಚ್ಚಿದ ಬದಾಮ್‌ನ್ನು ಹುರಿದು ತೆಗೆದಿಟ್ಟುಕೊಳ್ಳಿ. ನಂತರ ಗೋಧಿ ರವಾವನ್ನು ಬಾಣಲೆಗೆ ಸುರಿದುಕೊಂಡು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ರವಾ ಹುರಿದ ಪರಿಮಳ ಬಂದು ಅದು ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಅದಕ್ಕೆ ಹೆಚ್ಚಿದ ಬಾಳೆಹಣ್ಣನ್ನು ಹಾಕಿ ಮತ್ತೆ ಹುರಿಯಿರಿ. ಬಾಳೆ ಹಣ್ಣಿನ ಚೂರುಗಳನ್ನು ಸೌಟಿನಲ್ಲಿ ನುರಿಯುತ್ತಾ ಹುರಿಯಿರಿ.

ನಂತರ ಆ ಮಿಶ್ರಣಕ್ಕೆ ಸಕ್ಕರೆ ಸೇರಿಸಿ ಎರಡು ಕಪ್‌ ಕುದಿಯುವ ಹಾಲು ಹಾಕಿ ತಿರುವುತ್ತಾ ಇರಿ. ರವಾ ಮತ್ತು ಬಾಳೆಹಣ್ಣಿನ ಮಿಶ್ರಣದಲ್ಲಿ ಸಕ್ಕರೆ ಕರಗಿದ ತಕ್ಷಣ ತುಪ್ಪ ಸುರಿದು ಮತ್ತೆ ಸರಿಯಾಗಿ ತಿರುವಿ. ರವಾ ಬೇಯಲು ಸ್ವಲ್ಪ ನೀರು ಬೇಕು ಅಂತ ನಿಮಗೆ ಅನ್ನಿಸಿದರೆ ಕುದಿಯುವ ನೀರನ್ನ ಅಷ್ಟಷ್ಟಾಗಿ ಸೇರಿಸಿ ತಿರುವುತ್ತಿರಿ. ರವಾದೊಂದಿಗಿದ್ದ ದ್ರವವೆಲ್ಲ ಆರಿ ಮಡ್ಡಿಯಂತಾದರೆ ಶೀರಾ ಸಿದ್ಧ ಎಂದು ಅರ್ಥ. ನಂತರ ಮೊದಲೇ ಹುರಿದು ಇಟ್ಟುಕೊಂಡಿದ್ದ ಡ್ರೈಫ್ರುಟ್ಸ್‌ ಹಾಕಿ ಶೃಂಗರಿಸಿದರೆ ಬಿಸಿ ಬಿಸಿ ಹಾಲು- ಬಾಳೆಹಣ್ಣಿನ ಶೀರಾ ಸವಿಯಲು ಸಿದ್ಧ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ಮಧ್ಯಮ ವರ್ಗವು ಯಾವಾಗಲೂ ಪ್ರಧಾನಿ ಮೋದಿಯವರ ಹೃದಯದಲ್ಲಿದ್ದಾರೆ'- ಅಮಿತ್‌ ಶಾಐಎಎಸ್ ಸಂಜೀತಾ ಮೋಹಪಾತ್ರ ಯಶಸ್ಸಿನ ಪಯಣದ ಕಥನಬ್ಲಾಕ್‌ ಟೀ, ಬ್ಲಾಕ್‌ ಕಾಫಿ ಆರೋಗ್ಯಕ್ಕೆ ಉತ್ತಮ ಯಾವುದು..?ಬೆಳಿಗ್ಗೆ ಎದ್ದ ತಕ್ಷಣ ಏನನ್ನು ನೋಡಬೇಕು, ಏನನ್ನು ನೋಡಬಾರದು?ವಚನ-ಮನಸಂದ ಮಾರಿತಂದೆ !ಶಿಕ್ಷಣ ವೃತ್ತಿ ಬಿಟ್ಟು ಬೇರೆ ವ್ಯವಹಾರ ತೊಡಗಿದ ಶಿಕ್ಷಕರಿಗೆ ಶಿಸ್ತು ಕ್ರಮ.!ನಿಮ್ಮ ಮನೆಯಲ್ಲಿ ನಿಮ್ಮ ಪತಿ ಅಥವಾ ಪತ್ನಿ ನೀವು ಹೇಳಿದ ಮಾತು ಕೇಳುತ್ತಿಲ್ವಾ ಈ ಒಂದು ಕಡ್ಡಿಯಿಂದ ಹೀಗೆ ಮಾಡಿ ಸಾಕು ಆಮೇಲೆ ನೀವು ಹೇಳಿದ್ದನ್ನು ಎಲ್ಲವನ್ನು ಕೂಡ ಕೇಳುತ್ತಾರೆ .!ಕೇಂದ್ರ ಬಜೆಟ್‌ ಬಗ್ಗೆ ರಾಹುಲ್‌ ಗಾಂಧಿ ಪ್ರತಿಕ್ರಿಯೆ!ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ಶಾಸಕ ಬಿ.ಆರ್ ಪಾಟೀಲ್ ರಾಜೀನಾಮೆಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ: ಮತ್ತೊಂದು ಶೂಟೌಟ್