LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಸೇರಿ 11,558 ಹುದ್ದೆಗಳಿಗೆ ಅರ್ಜಿ ಆಹ್ವಾನ

ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಸೂಕ್ತ ಮಾಹಿತಿಗಳಾದ ಅಭ್ಯರ್ಥಿಗಳ ಆಯ್ಕೆ, ವಯಸ್ಸು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ನೀವೂ  ಈ ಲೇಖನದಲ್ಲಿ ಪಡೆಯಬಹುದಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.


ರೈಲ್ವೆ ನೇಮಕಾತಿ ಮಂಡಳಿ (RRB) ನೇಮಕಾತಿ 2024 ಕೆಳಗೆ ನೀಡಲಾದ ಎಲ್ಲಾ ವಿವರಗಳನ್ನು ಈಗ ಪರಿಶೀಲಿಸಿ :





ಇಲಾಖೆ ಹೆಸರು : ರೈಲ್ವೆ ನೇಮಕಾತಿ ಮಂಡಳಿ (RRB).
ಹುದ್ದೆಗಳ ಸಂಖ್ಯೆ : 11,558.
ಹುದ್ದೆಗಳ ಹೆಸರು : ಸ್ಟೇಷನ್ ಮಾಸ್ಟರ್, ಟ್ರೈನ್ಸ್ ಕ್ಲರ್ಕ್.
ಉದ್ಯೋಗ ಸ್ಥಳ : ಅಖಿಲ ಭಾರತ.
ಅಪ್ಲಿಕೇಶನ್ ಮೋಡ್ : ಆಫ್‌ಲೈನ್ ಮೋಡ್.



ಹುದ್ದೆಗಳ ವಿವರ :
• ಸರಕು ರೈಲು ನಿರ್ವಾಹಕ : 3,144.
• ಸ್ಟೇಷನ್ ಮಾಸ್ಟರ್ : 994.
• ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕರು : 1,736.
• ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್ : 1,507.
• ಹಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ : 732.
• ಅಕೌಂಟ್ಸ್ ಕ್ಲರ್ಕ್ ಮತ್ತು ಟೈಪಿಸ್ಟ್ : 361.
• ವಾಣಿಜ್ಯ ಮತ್ತು ಟಿಕೆಟ್ ಗುಮಾಸ್ತ : 2,022.
• ಜೂನಿಯರ್ ಕ್ಲರ್ಕ್ ಮತ್ತು ಟೈಪಿಸ್ಟ್ : 990.
• ರೈಲು ಗುಮಾಸ್ತ : 72.



ವೇತನ ಶ್ರೇಣಿ :
ರೈಲ್ವೆ ನೇಮಕಾತಿ ಮಂಡಳಿ ( RRB ) ನೇಮಕಾತಿ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.19900-35400/- ಸಂಬಳ ನೀಡಲಾಗುವುದು.




ವಯಸ್ಸಿನ ಮಿತಿ :
• ಸರಕು ರೈಲು ನಿರ್ವಾಹಕ , ಸ್ಟೇಷನ್ ಮಾಸ್ಟರ್, ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕರು, ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್, ಹಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ : 18-36 ವರ್ಷ ಗಳು
• ಅಕೌಂಟ್ಸ್ ಕ್ಲರ್ಕ್ ಮತ್ತು ಟೈಪಿಸ್ಟ್, ವಾಣಿಜ್ಯ ಮತ್ತು ಟಿಕೆಟ್ ಗುಮಾಸ್ತ, ಜೂನಿಯರ್ ಕ್ಲರ್ಕ್ ಮತ್ತು ಟೈಪಿಸ್ಟ್ & ರೈಲು ಗುಮಾಸ್ತ 18-33 ವರ್ಷಗಳು



ಅರ್ಜಿ ಶುಲ್ಕ :
• SC/ST/ಮಾಜಿ ಸೈನಿಕರು/EBC/PwBD/ಮಹಿಳೆ/ಅಲ್ಪಸಂಖ್ಯಾತರು/ಟ್ರಾನ್ಸ್ಜೆಂಡರ್ ಅಭ್ಯರ್ಥಿಗಳಿಗೆ : ರೂ.250/-
• ಎಲ್ಲಾ ಇತರ ಅಭ್ಯರ್ಥಿಗಳಿಗೆ : ರೂ.500/-
• ಪಾವತಿ ವಿಧಾನ : ಆನ್‌ಲೈನ್  ಮೋಡ್.

ವಿದ್ಯಾರ್ಹತೆ  :


• ಸರಕು ರೈಲು ನಿರ್ವಾಹಕ , ಸ್ಟೇಷನ್ ಮಾಸ್ಟರ್, ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕರು, ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್, ಹಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ : ಪದವಿ(Degree)̤
• ಅಕೌಂಟ್ಸ್ ಕ್ಲರ್ಕ್ ಮತ್ತು ಟೈಪಿಸ್ಟ್, ವಾಣಿಜ್ಯ ಮತ್ತು ಟಿಕೆಟ್ ಗುಮಾಸ್ತ, ಜೂನಿಯರ್ ಕ್ಲರ್ಕ್ ಮತ್ತು ಟೈಪಿಸ್ಟ್ & ರೈಲು ಗುಮಾಸ್ತ : 12 ನೇ



ಆಯ್ಕೆ ವಿಧಾನ :
• CBT ಲಿಖಿತ ಪರೀಕ್ಷೆ (ಟೈರ್-1 ಮತ್ತು ಟೈರ್-2)
• ಕೌಶಲ್ಯ ಪರೀಕ್ಷೆ (ಪೋಸ್ಟ್ ಅವಶ್ಯಕತೆಗೆ ಅನುಗುಣವಾಗಿ)
• ಡಾಕ್ಯುಮೆಂಟ್ ಪರಿಶೀಲನೆ
• ವೈದ್ಯಕೀಯ ಪರೀಕ್ಷೆ




ಅರ್ಜಿ ಸಲ್ಲಿಸುವುದು ಹೇಗೆ?


1. ಕೆಳಗಿನ ಲಿಂಕ್/ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್‌ಲೋಡ್ ಮಾಡಿ.
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್‌ಲೈನ್/ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
4. ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (If Necessary)̤
6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
8. ಅಂತಿಮವಾಗಿ, ಅದನ್ನು ಮುದ್ರಿಸಲು (Print) ಮರೆಯಬೇಡಿ.

ಪ್ರಮುಖ ದಿನಾಂಕಗಳು :


• ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಸಪ್ಟೆಂಬರ್‌ 14, 2024.
• ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 13, 2024 (ಕೆಲವು ಹುದ್ದೆಗಳಿಗೆ ಅಕ್ಟೋಬರ್ 20, 2024)

ಪ್ರಮುಖ ಲಿಂಕ್‌ಗಳು :
• ಅಧಿಕೃತ ಅಧಿಸೂಚನೆ ಪಿಡಿಎಫ್ : ಇಲ್ಲಿ ಕ್ಲಿಕ್ ಮಾಡಿ
• ಅರ್ಜಿ ಸಲ್ಲಿಸುವ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
• ಅಧಿಕೃತ ವೆಬ್‌ಸೈಟ್ : indianrailways.gov.in
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ರಮ ಗಣಿಗಾರಿಕೆ ಕೇಸ್: ಶಾಸಕ ಜನಾರ್ದನ ರೆಡ್ಡಿ ಅಪರಾಧಿ ಎಂದು ತೀರ್ಪು-7 ವರ್ಷ ಜೈಲುಭದ್ರತಾ ಪಡೆಗಳ ಕಾರ್ಯಾಚರಣೆ: ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕ ವಶಕ್ಕೆಮಂಗಳೂರು ಹೈ ಅಲರ್ಟ್: ವೈರಲ್‍ ಪೋಸ್ಟ್ ನಿಂದ ರಾತ್ರಿ 9:30ರೊಳಗೆ ವ್ಯಾಪಾರಗಳು ಬಂದ್‍ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಪಾಕಿಸ್ಥಾನಕ್ಕೆ ಮುಖಭಂಗಯುದ್ಧದ ಭೀತಿಯಿಂದ ಪಾಕಿಸ್ತಾನ ಸೇನೆಯಲ್ಲಿ ಹೆಚ್ಚಿದ ಬಂಡಾಯ :ಪಾಕ್ ಸೇನೆಗೆ 800 ಬಲೂಚ್ ಸೈನಿಕರು ಸಾಮೂಹಿಕ ರಾಜೀನಾಮೆಕರ್ನಾಟಕದ ಮೂರು ಜಿಲ್ಲೆಗಳಲ್ಲಿ ನಾಳೆ ಮಾಕ್​ ಡ್ರಿಲ್​​ಜಾತಿ ಜನಗಣತಿ ಕುರಿತು ಪ್ರಧಾನಿಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆಜೇಮ್ಸ್, ಜೆಲ್ಲಿಸ್‌ಗಳಲ್ಲಿ ಹಾನಿಕಾರಕ ರಾಸಾಯನಿಕ ಬಳಕೆ ಆರೋಪ- ಟೆಸ್ಟ್​​ಗೆ ಮುಂದಾದ ಆಹಾರ ಇಲಾಖೆಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಬೇಬಿ ಬಂಪ್‌ನೊಂದಿಗೆ 'ಮೆಟ್ ಗಾಲಾ'ದಲ್ಲಿ ಮಿಂಚಿದ ನಟಿ ಕಿಯಾರಾ ಅಡ್ವಾಣಿ