LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ವಾಲ್ಮೀಕಿ ನಿಗಮದಲ್ಲಿ ಹಗರಣ ಮತ್ತೊಬ್ಬ ಕಿಂಗ್ ಪಿನ್ ಎಸ್‌ಐಟಿಯಿಂದ ಅರೆಸ್ಟ್‌

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಮತ್ತೊಬ್ಬ ಕಿಂಗ್ ಪಿನ್‌ನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಆಂಧ್ರ ಮೂಲದ ಶ್ರೀನಿವಾಸ್ ರಾವ್ ಬಂಧಿತ ಆರೋಪಿ. ಈತ ಪ್ರಕರಣದ ಕಿಂಗ್ ಪಿನ್ ಸತ್ಯನಾರಾಯಣ ರಾವ್ ಅತ್ಯಾಪ್ತನಾಗಿದ್ದ. ವಾಲ್ಮೀಕಿ ನಿಗಮ ಹಗರಣದಲ್ಲಿ ಪ್ರಮುಖ ಪಾತ್ರವಹಿಸಿರೋ ಆರೋಪಿ ಶ್ರೀನಿವಾಸ್ ರಾವ್ ಬಿಎಸ್‌ಎನ್‌ಎಲ್ ಮಹಿಳಾಧಿಕಾರಿಯೊಬ್ಬರ ಪತಿಯಾಗಿದ್ದು, ಆರೋಪಿ ಶ್ರೀನಿವಾಸ್ ರಾವ್ ಕಂಪ್ಯೂಟರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ. ಸತ್ಯ ನಾರಾಯಣ ವರ್ಮಾ ಜೊತೆ ಸತತ ಕಾಂಟ್ಯಾಕ್ಟ್ ನಲ್ಲಿದ್ದ ಆರೋಪಿ ಶ್ರೀನಿವಾಸ್, ವಾಲ್ಮೀಕಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆ ಮಾಡಲು ಸಹಕಾರ ಮಾಡಿದ್ದು ಹಣ ವರ್ಗಾವಣೆಗೆ ಈತನೆ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ. ಇದೇ ರೀತಿ ಈ ಹಿಂದೆಯೂ ಛತ್ತೀಸ್ಗಢದಲ್ಲಿ ಸತ್ಯನಾರಾಯಣ ವರ್ಮಾ ಹಾಗೂ ಶ್ರೀನಿವಾಸ ರಾವ್ ಸೇರಿ ಕೃತ್ಯ ನಡೆಸಿದ್ರು. ಅದೇ ರೀತಿ ನಿಗಮದ ಅಕೌಂಟ್‌ನಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರೋದು ತನಿಖೆಯಿಂದ ಬೆಳಕಿಗೆ ಬಂದಿದೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಎಸ್ಕೇಪ್ ಆಗಿದ್ದ ಶ್ರೀನಿವಾಸ ರಾವ್‌ನನ್ನು ಎಸ್‌ಐಟಿ ನಿನ್ನೆ ಬಂಧನ ಮಾಡಿ 9 ದಿನ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST