LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಶಿರೂರು ಗುಡ್ಡ ಕುಸಿತ: ಲಾರಿ ಮತ್ತು ಚಾಲಕ ಮೊಬೈಲ್ ಲೊಕೇಶನ್ ಪತ್ತೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಗುಡ್ಡ ಕುಸಿತವಾಗಿ ಇಂದಿಗೆ ನಾಲ್ಕು ದಿನವಾಗಿದೆ. ಧಾರಾಕಾರ ಮಳೆ ಮಧ್ಯೆ ತೆರುವು ಕಾರ್ಯಾಚರಣೆ ಮುಂದುವರೆದಿದೆ.

ಈ ಮಧ್ಯೆ ಮಣ್ಣು ಕುಸಿತ ಸ್ಥಳದಲ್ಲೇ ಚಾಲಕ ಸಮೇತ ಟಿಂಬರ್ ಲಾರಿ ಲೊಕೇಶನ್​ ಮತ್ತು ಮೊಬೈಲ್‌ ಲೊಕೇಶನ್ ಪತ್ತೆ ಆಗಿದೆ. ಚಾಲಕ ಅರ್ಜುನ ಬಗ್ಗೆ ಅಧಿಕೃತ ಮಾಹಿತಿ ದೊರೆಯುತ್ತಿದ್ದಂತೆ ಕಾರ್ಯಾಚರಣೆ ವೇಗ ಪಡೆದುಕೊಂಡಿದೆ.

ಘಟನೆಯಂದು ಬೆಳಿಗ್ಗೆ 11 ಗಂಟೆಗೆ ಲಾರಿ ಚಾಲಕ ಅರ್ಜುನ್​ನ ಮೊಬೈಲ್​ ಸ್ವಿಚ್ ಆಫ್ ಆಗಿತ್ತು. ಆದರೆ ಜಿಪಿಎಸ್​ನಲ್ಲಿ ಗುಡ್ಡ ಕುಸಿತದ ಸ್ಥಳದಲ್ಲೇ ಲಾರಿ ಇರುವುದಾಗಿ ತೋರಿಸಿದೆ. ಹೀಗಾಗಿ ಆತಂಕಗೊಂಡ ಲಾರಿ ಮಾಲೀಕ ಪೊಲೀಸರಿಗೆ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಅಬ್ಬರದ ಮಳೆಯಲ್ಲೂ ಜಿಲ್ಲಾಡಳಿತ ಕಾರ್ಯಾಚರಣೆ ಮುಂದುವರೆದಿದೆ.

ಲಾರಿ ಚಾಲಕ ಅರ್ಜುನ್ ಮೂಲತಃ ಕೇರಳ ಮೂಲದವರು. ಕೇರಳ ಮೂಲದ ಮುಬೀನ್ ಒಡೆತನದ KA-15-A7427 ವೈಟ್ ಕಲರ್ ಬೆಂಜ್ ಲಾರಿ. ಈಗಾಗಲೇ ಪಕ್ಕದ ಗುಡ್ಡ ಕುಸಿಯುವ ಹಂತದಲ್ಲಿರುವುದರಿಂದ ಘಟನಾ ಸ್ಥಳಕ್ಕೆ ಮಾಧ್ಯಮದವರನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಪ್ರಾಣ ಒತ್ತೆಯಿಟ್ಟು ಎನ್​ಡಿಆರ್​ಎಫ್​ ಮತ್ತು ಎಸ್​ಡಿಆರ್​ಎಫ್​ ತಂಡ ಕಾರ್ಯಾಚರಣೆ ಮಾಡುತ್ತಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುದ್ದಿನ ನಾಯಿಮರಿ ಹುಟ್ಟುಹಬ್ಬಕ್ಕೆ ಕೇಕ್ ಕಟ್ ಮಾಡಿ ಪಾರ್ಟಿ ಮಾಡಿದ ರಾಧಿಕಾ ಪಂಡಿತ್ ಫ್ಯಾಮಿಲಿ!ಬ್ಯಾಂಕುಗಳು ಕೆಲಸಕ್ಕೆ ಸ್ಥಳೀಯ ಭಾಷೆಯವರಿಗೆ ಆಧ್ಯತೆ: ನಿರ್ಮಲಾ ಸೀತಾರಾಮನ್.!ವಿವಿಧ ಯೋಜನೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ.!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ.! 07-11-2025.!ತಂದೆ ತಾಯಿ ಮಕ್ಕಳಿಗೆ ಈ ಮಂತ್ರಗಳನ್ನು ಕಲಿಸಿದರೆ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆಅಲ್ಲಮಪ್ರಭುದೇವರು ವಚನ.!ಸರಸ್ವತಿ ಕೆ.ಸಿ ವೀರೇಂದ್ರ  ಒಲಿದ ಗಿನ್ನಿಸ್ ರೆಕಾರ್ಡ್ .!ಮೊದಲ ಬಾರಿಗೆ ಕರ್ನಾಟಕ ರಾಜ್ಯ ಲಿಂಗ ಅಲ್ಪಸಂಖ್ಯಾತರ ಸಮೀಕ್ಷೆ ಪ್ರಾರಂಭಆಗ್ರಾ-ಲಕ್ನೋ ಎಕ್ಸ್​​ಪ್ರೆಸ್​ವೇನಲ್ಲಿ ಡಬಲ್ ಡೆಕ್ಕರ್ ಬಸ್ ಪಲ್ಟಿ - 20 ಮಂದಿಗೆ ಗಂಭೀರ ಗಾಯ60 ಕೋಟಿ ವಂಚನೆ ಪ್ರಕರಣ- ರಾಜ್‌ ಕುಂದ್ರಾ ಕಂಪನಿಯ ನಾಲ್ವರು ನೌಕರರಿಗೆ ಸಮನ್ಸ್‌