LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸಂಸದ ಬ್ರಿಜೇಶ್ ಚೌಟ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ: ಮಂಗಳೂರು – ಬೆಂಗಳೂರಿಗೆ ವಿಶೇಷ ರೈಲು ಸಂಚಾರ



ಮಂಗಳೂರು: ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕರಾವಳಿಯನ್ನು ಹೊರ ಜಿಲ್ಲೆಗಳ ಜತೆಗೆ ಬೆಸೆಯುವ ಎಲ್ಲ ಘಾಟಿ ರಸ್ತೆಗಳಲ್ಲಿ ಗುಡ್ಡ ಕುಸಿತ ಉಂಟಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಮತ್ತು ಮೈಸೂರು ಡಿಆರ್‌ಎಮ್ ಅವರಿಗೆ ಮಂಗಳೂರು- ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆಯನ್ನು ತುರ್ತಾಗಿ ಪ್ರಾರಂಭಿಸುವಂತೆ ಪತ್ರ ಬರೆದು ವಿನಂತಿಸಿದ್ದಾರೆ.



ಕರಾವಳಿಯ ಬಹಳಷ್ಟು ಜನ ಮಂಗಳೂರು-ಬೆಂಗಳೂರು ನಗರಗಳ ನಡುವೆ ನಿತ್ಯ ಪ್ರಯಾಣಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಇತರ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣದಿಂದ ಹೆಚ್ಚುವರಿ ರೈಲು ಸೇವೆಯನ್ನು ಒದಗಿಸುವ ಅಗತ್ಯತೆಯಿದೆ. ಹೀಗಾಗಿ, ಶೀಘ್ರದಲ್ಲಿ ಹೆಚ್ಚುವರಿ ರೈಲ್ವೆ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಪತ್ರದಲ್ಲಿ ಮನವಿ ಮಾಡಿದ್ದರುಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಮನವಿಗೆ ಸ್ಪಂದಿಸಿದ ರೈಲ್ವೆ ಅಧಿಕಾರಿಗಳು ಬೆಂಗಳೂರು ಮಂಗಳೂರು ನಡುವೆ ವಿಶೇಷ ರೈಲು ಓಡಿಸಲು ನಿರ್ಧರಿಸದ್ದಾರೆ.



ಸಂಚರಿಸಲಿರುವ ರೈಲುಗಳು
ಜು. 19ರಂದು ರೈಲು ಸಂಖ್ಯೆ 06547 ಎಸ್‌ಬಿಸಿ ಬೆಂಗಳೂರಿನಿಂದ ಹೊರಡಲಿದೆ.
ಜು.20ರಂದು ರೈಲು ಸಂಖ್ಯೆ 06548 ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳಲಿದೆ.
ಜು.21 ಹಾಗೂ 22ರಂದು ರೈಲು ಸಂಖ್ಯೆ 06549 ಯಶವಂತಪುರದಿಂದ ಮಂಗಳೂರು ಜಂಕ್ಷನ್‌ಗೆ ಬರಲಿದೆ.
ಜು.21 ಹಾಗೂ 22 ರಂದು ರೈಲು ಸಂಖ್ಯೆ 06550 ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳಲಿವೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ಮೆಟ್ರೋ ದರ ಏರಿಕೆ ಸಂಬಂಧ ಸಿಎಂ ಪತ್ರ ಬರೆದರೆ ನಾಳೆಯೇ ಸಮಿತಿ ರಚನೆ'- ತೇಜಸ್ವಿ ಸೂರ್ಯ‘ಆತ್ಮಹತ್ಯೆ ಭಾಗ್ಯ’ ಖಂಡಿಸಿ ವಿಪಕ್ಷ ನಾಯಕರ ಪ್ರತಿಭಟನೆಆಸ್ಪತ್ರೆಯ ಮಹಿಳಾ ಶೌಚಾಲಯಕ್ಕೆ ನುಗ್ಗಿದ ವ್ಯಕ್ತಿ, ಹಿಡಿಯಲು ಹೋದವರ ಮೇಲೆ ಗುಂಡಿನ ದಾಳಿಎಟಿಎಂಗಳಲ್ಲಿ ದಿನದ 24 ಗಂಟೆ ಸೆಕ್ಯೂರಿಟಿ ಗಾರ್ಡ್‌ಗಳ ಅಗತ್ಯವಿಲ್ಲ- ಸುಪ್ರೀಂ ಕೋರ್ಟ್SSLC ಪೂರ್ವಸಿದ್ಧತಾ ಪರೀಕ್ಷೆ ಸಮಯ ಬದಲುಚಿನ್ನಾಭರಣ ಪ್ರಿಯರಿಗೆ ಗುಡ್‌ ನ್ಯೂಸ್‌- ಬೆಲೆಯಲ್ಲಿ ಇಳಿಕೆಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬದಲಾವಣೆಗೆ ದಿನಾಂಕ ಫಿಕ್ಸ್ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು ?ಮಹಿಳಾ ಉದ್ಯೋಗಿಗಳಿಗೆ ವರ್ಕ್​ ಫ್ರಂ ಹೋಂ ನಿಯಮ ಜಾರಿಗೆ ಮುಂದಾದ ಆಂದ್ರಪ್ರದೇಶಪ್ರಧಾನಿ ಮೋದಿ ವಿಮಾನದ ಮೇಲೆ ದಾಳಿ ಮಾಡುವುದಾಗಿ ಉಗ್ರರ ಎಚ್ಚರಿಕೆ..!ರೇಷನ್‌ ಕಾರ್ಡ್‌ ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ