ಸರಣಿ ಬಾಂಬ್ ಸ್ಫೋಟ: 18 ಮಂದಿ ಸಾವು.!
ನೈಜೀರಿಯಾ: ನೈಜೀರಿಯಾದ ಈಶಾನ್ಯ ರಾಜ್ಯ ಬಾರ್ನೊದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿದ್ದು, 48 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ತುರ್ತು ಸೇವೆಗಳ ನಿರ್ವಹಣಾ ಸಂಸ್ಥೆಯನ್ನು(ಎಸ್‌ಇಎಂಎ) ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ.
ಮದುವೆ ಸಮಾರಂಭ ನಡೆಯುತ್ತಿದ್ದ ಸಂದರ್ಭ ಶನಿವಾರ 3 ಗಂಟೆ ಸುಮಾರಿಗೆ ಮೊದಲ ಸ್ಪೋಟ ಸಂಭವಿಸಿದೆ. ಗ್ವೋಜಾ ಸರ್ಕಾರಿ ಆಸ್ಪತ್ರೆಯಲ್ಲಿ ಎರಡನೇ ಸ್ಟೋಟ ಮತ್ತು ಅಂತ್ಯಸಂಸ್ಕಾರದ ವೇಳೆ 3ನೇ ಸ್ಫೋಟ ಸಂಭವಿಸಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.