LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

 ಸರೋವರದಲ್ಲಿ ಯುವ ಪತ್ರಕರ್ತೆ ಶವವಾಗಿ ಪತ್ತೆ.!

ಢಾಕಾ: 32 ವರ್ಷದ ಟಿವಿ ಪತ್ರಕರ್ತೆಯ ಶವವು ಬಾಂಗ್ಲಾದೇಶದ ರಾಜಧಾನಿ ಢಾಕಾದ ಹತಿರ್‌ಜೀಲ್ ಸರೋವರದಲ್ಲಿ ಪತ್ತೆಯಾಗಿದೆ. ಮೃತ ಪತ್ರಕರ್ತೆಯನ್ನು ಗಾಝಿ ಟಿವಿ ಸುದ್ದಿ ವಾಹಿನಿಯ ಸುದ್ದಿ ಸಂಪಾದಕಿ ಸಾರಾ ರೆಹನುಮಾ ಎಂದು ಗುರುತಿಸಲಾಗಿದೆ.

ಸಾರಾ ಸಾಯುವ ಮುನ್ನಾದಿನ ಫೇಸ್‌ಬುಕ್‌ ನಲ್ಲಿ ಫಾಹಿಮ್‌ ಫೈಸಲ್‌ ಎನ್ನುವವರ ಬಗ್ಗೆ ‘ನಿಮ್ಮಂತಹ ಗೆಳೆಯನನ್ನು ಹೊಂದಿರುವುದು ಖುಷಿಯ ಸಂಗತಿ. ದೇವರು ಒಳ್ಳೆಯದು ಮಾಡಲಿ. ಆದಷ್ಟು ಬೇಗ ನಿಮ್ಮ ಕನಸುಗಳು ನನಸಾಗಿ. ನಾವಿಬ್ಬರು ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದೆವು. ಅದನ್ನು ನೆರವೇರಿಸಲು ಸಾಧ್ಯವಿಲ್ಲ. ಸತ್ತಂತೆ ಬದುಕುವುದಕ್ಕಿಂತ ಸಾಯುವುದೇ ಒಳಿತು’ ಎಂದು ಬರೆದುಕೊಂಡು ಪೋಸ್ಟ್‌ ಹಂಚಿಕೊಂಡಿದ್ದರು ಎಂದು ವರದಿಯಾಗಿದೆ.

ಸಾರಾ ಅವರ ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಅದಾಗ್ಯೂ, ಸಾರಾ ಅವರ ಸಾವಿಗೆ ರಾಜಕೀಯ ಬಣ್ಣ ಬಳಿದಿರುವ ಶೇಖ್‌ ಹಸೀನಾ ಪುತ್ರ ಸಾಜೀಬ್‌ ವಾಝಿದ್‌, ‘ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮತ್ತೊಂದು ಭೀಕರ ದಾಳಿಯಾಗಿದೆ’ ಎಂದಿದ್ದಾರೆ. ‘ಬೆಳಿಗ್ಗೆ ಕಚೇರಿಗೆ ತೆರಳಿದ್ದ ಸಾರಾ ಮನೆಗೆ ವಾಪಸ್ಸಾಗಲಿಲ್ಲ. ಅಲ್ಲದೆ ನನ್ನಿಂದ ವಿಚ್ಛೆದನ ಬಯಸಿದ್ದರು. ದೇಶದಲ್ಲಿ ಪರಿಸ್ಥಿತಿ ಸರಿಯಿಲ್ಲದ ಕಾರಣ ವಿಚ್ಛೇದನ ಪಡೆಯುವ ಪ್ರಕ್ರಿಯೆ ಸಾಧ್ಯವಾಗಿರಲಿಲ್ಲ. ಈ ನಡುವೆ ಸಾರಾ ಮೃತಪಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ’ ಎಂದು ಸಾರಾ ಪತಿ ಸಯ್ಯದ್ ಶುವ್ರೊ ಹೇಳಿದ್ದಾರೆ.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST