LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಮಧ್ಯಮವರ್ಗದವರಿಗೆ ಸ್ನೇಹಪೂರಿತ ಬಜೆಟ್' - ಪ್ರಧಾನಿ ಮೋದಿ

ನವದೆಹಲಿ : ಕೇಂದ್ರ ಬಜೆಟ್‌ನ್ನು ಟೀಕಿಸಿದ ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿಯು ತಿರುಗೇಟು ನೀಡಿದ್ದಾರೆ. 2025ರ ಬಜೆಟ್‌ನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಇದನ್ನು ದೇಶದ ಮಧ್ಯಮವರ್ಗದವರಿಗೆ ಅತ್ಯಂತ ಸ್ನೇಹಪೂರಿತ ಬಜೆಟ್ ಎಂದು ಬಣ್ಣಿಸಿದ್ದಾರೆ.

ದೆಹಲಿಯ ಆರ್.ಕೆ. ಪುರಂನಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಮೋದಿ, ಬಜೆಟ್‌ನಲ್ಲಿ ಆದಾಯ ತೆರಿಗೆ ಇಳಿಕೆಯನ್ನು ಪ್ರಸ್ತಾಪಿಸಿ, ಭಾರತದೆಲ್ಲಾ ಕಾಲಘಟ್ಟಗಳಲ್ಲಿಯೂ ತೆರಿಗೆ ರಚನೆಯಲ್ಲಿ ಆದ ಬದಲಾವಣೆಗಳನ್ನು ವಿವರಿಸಿದರು. "ನಾವು 12 ಲಕ್ಷ ರೂ ಆದಾಯ ಗಳಿಸಿದವರಿಗೆ ತೆರಿಗೆ ಹಾಕದೇ ಇದ್ದೇವೆ. ಆದರೆ ನೆಹರೂ ಕಾಲಘಟ್ಟದಲ್ಲಿ ಈ ಆದಾಯಕ್ಕೆ ಸಂಬಳದ ಬಹುಭಾಗ ತೆರಿಗೆಗೆ ಒಳಪಡುತ್ತಿತ್ತ್ತು. ಇಂದಿರಾ ಗಾಂಧಿ ಸರ್ಕಾರದಲ್ಲಿ, ಪ್ರತೀ 12 ಲಕ್ಷ ರೂ ಆದಾಯಕ್ಕೆ 10 ಲಕ್ಷ ರೂ ತೆರಿಗೆ ಪಾವತಿಸಬೇಕಿತ್ತು. 10-12 ವರ್ಷಗಳ ಹಿಂದೆ, ಕಾಂಗ್ರೆಸ್ ಸರ್ಕಾರದಲ್ಲಿ 12 ಲಕ್ಷ ರೂ ಆದಾಯಕ್ಕೆ 2.60 ಲಕ್ಷ ರೂ ತೆರಿಗೆ ಹಾಕಬೇಕಿತ್ತು. ಆದರೆ ಇದೀಗ ನೀವು 12 ಲಕ್ಷ ರೂ ಆದಾಯ ಗಳಿಸಿದರೆ, ಒಂದೇ ರೂಪಾಯಿಯೂ ತೆರಿಗೆಯಾಗಿ ಪಾವತಿಸಬೇಕಾಗಿಲ್ಲ," ಎಂದು ಮೋದಿ ವಿವರಿಸಿದರು.

"ಮಧ್ಯಮವರ್ಗದವರು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅವರನ್ನು ಗೌರವಿಸುವ ಮತ್ತು ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಉತ್ತೇಜನ ನೀಡುವ ಏಕೈಕ ಪಕ್ಷ ಬಿಜೆಪಿ," ಎಂದು ಪ್ರಧಾನಿ ಹೇಳಿದರು. "ವಿಕಸಿತ ಭಾರತದ ಕನಸು ಸಾಕಾರಗೊಳಿಸಲು, ನಮ್ಮ ನಾಲ್ಕು ಪ್ರಮುಖ ಸ್ತಂಭಗಳನ್ನು ಗಟ್ಟಿಗೊಳಿಸಲು ನಾವು ನಿರ್ಧರಿಸಿದ್ದೇವೆ. ಅವು ರೈತರು, ಮಹಿಳೆಯರು, ಬಡವರು ಮತ್ತು ಯುವಜನರು. ಈ ನಾಲ್ಕು ಸ್ತಂಭಗಳನ್ನು ಬಲಪಡಿಸುವ ದಾರಿಯಲ್ಲಿಯೇ ನಿನ್ನೆಯ ಬಜೆಟ್‌ ಹೆಜ್ಜೆಹಾಕಿದೆ," ಎಂದು ಮೋದಿ ತದನಂತರ ದೇಶದ ಜನತೆಯ ಬಗೆಗಿನ ತಮ್ಮ ದೃಷ್ಟಿಯನ್ನು ಸ್ಪಷ್ಟಪಡಿಸಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಳ್ಳಕೆರೆ: ಆನ್ ಲೈನ್ ಬೆಟ್ಟಿಂಗ್ : ಮತ್ತೆ ಇಡಿ ಅಧಿಕಾರಿಗಳ ದಾಳಿ.!ಹೊಸಕೋಟೆ , ದೇವನಹಳ್ಳಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ತಾತ್ಕಲಿಕ ಆಯ್ಕೆ ಪಟ್ಟಿ ಪ್ರಕಟ.!ಬುಧವಾರ ನಿನ್ನೆ ಚಿತ್ರದುರ್ಗ ಜಿಲ್ಲೆಯ ಯಾವ ಭಾಗಗಳಲ್ಲಿ ಎಷ್ಟು ಮಳೆ ಆಗಿದೆ.?ಶ್ವಾನಗಳು 24 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ.!ಕಾಂತಾರ ಚಾಪ್ಟರ್ 1 ಚಿತ್ರದ ವಿರುದ್ಧ ಗಂಭೀರ ಆರೋಪ ಏನು.?540 ಗಸ್ತು ಅರಣ್ಯ ಪಾಲಕ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ.!ವಿಪಕ್ಷನಾಯಕ ಆರ್ ಅಶೋಕ್ ಬೆಂಗಾವಲು ವಾಹನ ಚಾಲಕ ಆತ್ಮಹತ್ಯೆ.!ಕೆಮ್ಮಿನ ಸಿರಪ್ ಸೇವಿಸಿ ಹಲವಾರು ಮಕ್ಕಳು ಸಾವುಗೆ ಕಾರಣರಾದ ಕಂಪನಿಯ ಮಾಲೀಕ ಅರೆಸ್ಟ್..!ಶ್ರೀ ಹಾಸನಾಂಬ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ವೇಳಾ ಪಟ್ಟಿ.!ಬಂಗಾಳಕೊಲ್ಲಿಯಲ್ಲಿ ಮಳೆ ಮಾರುತಗಳು ಚುರುಕು ಮೂರುದಿನ ಈ ಜಿಲ್ಲೆಗಳಲ್ಲಿ ಭಾರೀ ಮಳೆ.!