LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು..!

ಬೆಂಗಳೂರು: ಮುಡಾ ಪ್ರಕರಣ ಇನ್ನೂ ಕೋರ್ಟ್‌ ನಲ್ಲಿರುವಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ನೀಡಲಾಗಿದೆ. ಮೈಸೂರಿನ ಪಿ.ಎಸ್. ನಟರಾಜ್ ಎಂಬುವರು ರಾಜ್ಯಪಾಲರಿಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದಾರೆ. ಆಗಸ್ಟ್ 27ರಂದು ದೂರು ನೀಡಿರುವ ನಟರಾಜ್, ದೂರಿನಲ್ಲಿ ಮಾನ್ಯ ಮುಖ್ಯಮಂತ್ರಿಯವರ ಮೌಖಿಕ ನಿರ್ದೇಶನದ ಅನ್ವಯ ಮುಖ್ಯಮಂತ್ರಿಗಳ ಮತಕ್ಷೇತ್ರ ವರುಣಾದಲ್ಲಿ ಮತ್ತು ಶ್ರೀರಂಗಪಟ್ಟ ಕ್ಷೇತ್ರದ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿ, ಈ ಕಾಮಗಾರಿ ಕರ್ನಾಟಕ ನಗರಾಭಿವೃದ್ಧಿ ವಿಧೇಯಕ, 1987ರ ಸೆಕ್ಷನ್ 15 ಮತ್ತು 25ರ ವಿರುದ್ಧ ಕಾಮಗಾರಿ ಎಂದು ದೂರಿನಲ್ಲಿ ನಾಟರಾಜ್ ಉಲ್ಲೇಸಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 387 ಕೋಟಿಗಳ ಕಾಮಗಾರಿಗಳನ್ನು ನಿಯಮಬಾಹಿರವಾಗಿ ಕೈಗೊಳ್ಳಲಾಗಿದೆ.ಪ್ರಾಧಿಕಾರದಲ್ಲಿ ಹಣವಿಲ್ಲದಿದ್ದರೂ ಮಾನ್ಯ ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಕಾಮಗಾರಿ ಕೈಗೊಳ್ಳಲಾಗಿದೆ ಇದರಿಂದಾಗಿ ಅಧಿಕಾರ ದುರುಪಯೋಗವಾಗಿದ್ದು, ಈ ಬಗ್ಗೆ ಸಿ.ಬಿ.ಐ ತನಿಖೆ ಕೈಗೊಳ್ಳುವಂತೆ ರಾಜ್ಯಪಾಲರಿಗೆ ನಟರಾಜ್ ದೂರಿನಲ್ಲಿ ಮನವಿ ಮಾಡಿದ್ದಾರೆ. ನಟರಾಜ್ ಎಂಬವರು ಸಿಎಂ ಸಿದ್ದರಾಮಯ್ಯನವರ ವಿರುದ್ಧ ದೂರು ನೀಡಿದ್ದರ ಬಗ್ಗೆ ಸೆಪ್ಟೆಂಬರ್ 5 ರಂದು ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು ರಾಜ್ಯಪಾಲರು ವಿವರಣೆ ಕೇಳಿದ್ದಾರೆ. ಮೈಸೂರಿನ ಪಿ.ಎಸ್. ನಟರಾಜ್ ಸಲ್ಲಿಸಿರುವ ದೂರಿನಲ್ಲಿರುವ ಅಂಶಗಳು ಬಹಳ ಗುರುತರವಾಗಿದೆ. ಈ ಬಗ್ಗೆ ಪರಿಶೀಲಿಸಿ ದಾಖಲೆಗಳ ಸಮೇತ ಶೀಘ್ರವಾಗಿ ವಿವರವಾದ ವರದಿ ಸಲ್ಲಿಸಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯಪಾಲರು ಸೂಚಿಸಿದ್ದಾರೆ. ರಾಜ್ಯಪಾಲರು ವರದಿ ಸಲ್ಲಿಸಿ ಎಂಬ ಸೂಚನೆ ಹಿನ್ನೆಲೆಯಲ್ಲಿ ರಾಜ್ಯಪಾಲರಿಂದ ಸ್ವೀಕೃತ ದಾಖಲೆಗಳನ್ನು ಒಳಗೊಂಡಂತೆ ನಗರಾಭಿವೃದ್ಧಿ ಇಲಾಖೆ ವರದಿ ಕೇಳಿದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್. ಈ ಮೂಲಕ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಮತ್ತೆ ಸಂಘರ್ಷ ಏರ್ಪಾಡಲಿದ್ಯಾ ಎಂಬ ಪ್ರಶ್ನೆ ಶುರುವಾಗಿದೆ.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಾಕುಂಭದಲ್ಲಿ ಕಾಲ್ತುಳಿತದ ಹಿಂದೆ ಪಿತೂರಿ..? 16 ಸಾವಿರ ಮೊಬೈಲ್‌ ಸಂಖ್ಯೆಗಳ ವಿವರ ಪರಿಶೀಲನೆಬಿರಿಯಾನಿ, ಚಿಕನ್ ಫ್ರೈಗೆ ಬೇಡಿಕೆಯಿಟ್ಟ ಮಗುವಿನ ವಿಡಿಯೋ ವೈರಲ್; ಅಂಗನವಾಡಿ ಮೆನು ಬದಲಾವಣೆ ಸಾಧ್ಯತೆಕುಂಭ ಮೇಳ ಕಾಲ್ತುಳಿತ : ಮೃತಪಟ್ಟವರ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲವೇಕೆ?: ಅಖಿಲೇಶ್ ಯಾದವ್ ಪ್ರಶ್ನೆಮದುವೆಗೆ ಸಿಗಲಿದೆ 60,000 ಸಹಾಯಧನ | ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?ಮುಸ್ಲಿಂ ಸಮುದಾಯ ವಕ್ಫ್ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿದೆ – ಅಸಾದುದ್ದೀನ್ ಓವೈಸಿಬೆಂಗಳೂರು: 30ಕ್ಕೂ ಹೆಚ್ಚು ಐಷಾರಾಮಿ ಕಾರುಗಳ ಜಪ್ತಿ..!!ಬೆಳ್ಳಂಬೆಳಗ್ಗೆ ಶೂಟ್‌ ಔಟ್‌ : ಇಬ್ಬರ ಬಂಧನಮೈಕ್ರೋ ಫೈನಾನ್ಸ್ ಕಿರುಕುಳ: ಶಿಕ್ಷೆಯ ಪ್ರಮಾಣ 10 ವರ್ಷಕ್ಕೆ ಹೆಚ್ಚಳ- ಜಿ.ಪರಮೇಶ್ವರ್ಜಾನುವಾರುಗಳ ಕಳವು, ಹತ್ಯೆ, ಮಾಡುವವರನ್ನು ಸಾರ್ವಜನಿಕವಾಗಿ ಗುಂಡಿಕ್ಕಬೇಕು- ಮಂಕಾಳ ವೈದ್ಯದೆಹಲಿ ಚುನಾವಣೆಗೂ ಮುನ್ನ ಸಿಎಂ ಅತಿಶಿ ವಿರುದ್ಧ ಪ್ರಕರಣ ದಾಖಲು