LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸೈಬರ್ ಅಪರಾಧ: ಶ್ರೀಲಂಕಾದಲ್ಲಿ 60 ಮಂದಿ ಭಾರತೀಯರು ಅರೆಸ್ಟ್

ಕೊಲೊಂಬೊ: ಸೈಬರ್ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪದ ಮೇರೆಗೆ ಕನಿಷ್ಠ 60 ಮಂದಿ ಭಾರತೀಯರನ್ನು ಶ್ರೀಲಂಕಾದ ಅಪರಾಧ ತನಿಖಾ (ಸಿಐಡಿ) ಇಲಾಖೆ ಅಧಿಕಾರಿಗಳು ಬಂಧಿಸಿರುತ್ತಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಇಲಾಖೆ ವಕ್ತಾರ ಎಸ್‌ಎಸ್‌ಪಿ ನಿಹಾಲ್ ತಲ್ಲುವಾ ಅವರು, ಕೊಲೊಂಬೊ ಉಪನಗರಗಳಾದ ಮಡಿವೇಲಾ, ಬತ್ತರಮುಲ್ಲಾ ಹಾಗೂ ಪಶ್ಚಿಮ ಕರಾವಳಿ ಪಟ್ಟಣ ನೆಗೊಂಬೊದಲ್ಲಿ ಸಿಐಡಿ ಏಕಕಾಲಕ್ಕೆ ದಾಳಿ ನಡೆಸಿದ್ದು, ಸುಮಾರು 60 ಮಂದಿ ಆರೋಪಿಗಳನ್ನು ಬಂಧಿಸಿದೆ. ದಾಳಿ ವೇಳೆ 135 ಮೊಬೈಲ್‌ಗಳು ಹಾಗೂ 57 ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಸಂವಾದ ಮಾಡಿ ಹಣ ಸಂಪಾದನೆ ಮಾಡಬಹುದೆಂದು ವಾಟ್ಸ್ಆ್ಯಪ್ ಮೂಲಕ ಆರೋಪಿಗಳು ಆಮಿಷವೊಡಿದ್ದಾರೆ. ಈ ಆಮಿಷಕ್ಕೆ ತುತ್ತಾಗಿ ವ್ಯಕ್ತಿಯೊಬ್ಬರು ವಚನೆಗೊಳಗಾಗಿ ದೂರು ದಾಖಲಿಸಿದ್ದಾರೆ. ಸಂತ್ರಸ್ತರೊಬ್ಬರು ನೀಡಿದ್ದ ದೂರಿನ ಮೇರೆಗೆ ತನಿಖೆ ಕೈಗೊಂಡು, ಅದರ ಬೆನ್ನಲ್ಲೇ ಸಿಐಡಿ ಈ ದಾಳಿ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಗಳು ದುಬೈ ಹಾಗೂ ಅಫ್ಘಾನಿಸ್ತಾನ ಸಂಪರ್ಕ ಹೊಂದಿದ್ದಾರೆ. ಇವರೆಲ್ಲ ಹಣಕಾಸು ವಂಚನೆ, ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್ ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ಹಾಗೂ ವಿದೇಶಿ ಪ್ರಜೆಗಳು ಸಹ ಇವರಿಂದ ವಂಚನೆಗೊಳಗಾಗಿರುವ ಸಾಧ್ಯತೆ ಇದೆ. ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕುಂಭಮೇಳದಲ್ಲಿ ಜೀವಂತ ಸಮಾಧಿಯಾದ ಪರಮಹಂಸ ಪೀಠಾಧೀಶ್ವರ ಶಿವಯೋಗಿ ಮೌನಿ ಮಹಾರಾಜರು !!ಇದೆ ಮೊದಲಬಾರಿಗೆ ಮದುವೆ ಸಮಾರಂಭಕ್ಕೆ ಸಜ್ಜಾಗುತ್ತಿದೆ ರಾಷ್ಟ್ರಪತಿ ಭವನ!!ಒಂದೇ ಒಂದು ಚುಂಬನಕ್ಕೆ 37 ರೀಟೇಕ್ ತೆಗೆದುಕೊಂಡ ನಟ - ಆ್ಯಕ್ಷನ್ ಕಟ್ ಹೇಳಿ ಸುಸ್ತಾದ ನಿರ್ದೇಶಕ!ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಮೃತ್ಯುಬಂಡುಕೋರರ ಗುಂಡಿನ ದಾಳಿಗೆ 18 ಸೈನಿಕರು ಮೃತ; 23 ಉಗ್ರರು ಹತಕಾರು ನಿಯಂತ್ರಣ ತಪ್ಪಿ ಕೊಳಕ್ಕೆ ಬಿದ್ದು ಇಬ್ಬರು ಹೈಕೋರ್ಟ್ ವಕೀಲರು ಸಾವು.!'ಮಧ್ಯಮ ವರ್ಗವು ಯಾವಾಗಲೂ ಪ್ರಧಾನಿ ಮೋದಿಯವರ ಹೃದಯದಲ್ಲಿದ್ದಾರೆ'- ಅಮಿತ್‌ ಶಾಐಎಎಸ್ ಸಂಜೀತಾ ಮೋಹಪಾತ್ರ ಯಶಸ್ಸಿನ ಪಯಣದ ಕಥನಬ್ಲಾಕ್‌ ಟೀ, ಬ್ಲಾಕ್‌ ಕಾಫಿ ಆರೋಗ್ಯಕ್ಕೆ ಉತ್ತಮ ಯಾವುದು..?ಬೆಳಿಗ್ಗೆ ಎದ್ದ ತಕ್ಷಣ ಏನನ್ನು ನೋಡಬೇಕು, ಏನನ್ನು ನೋಡಬಾರದು?