LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ: ನಗರದ ಸಂಚಾರಿ ಮಾರ್ಗಗಳಲ್ಲಿ ಭಾರಿ ಬದಲಾವಣೆ.!

 

 ದಾವಣಗೆರೆ; ;  ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಯು ಅಕ್ಟೋಬರ್ 5 ರಂದು ನಡೆಯಲಿರುವುದರಿಂದ ಬೆಳಗ್ಗೆ 10 ರಿಂದ ರಾತ್ರಿ 11 ಗಂಟೆಯವರೆಗೆ ನಗರದಲ್ಲಿನ ವಾಹನ ಸಂಚಾರಿ ಮಾರ್ಗದಲ್ಲಿ ಭಾರಿ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ

ಬದಲಾವಣೆಯ ಮಾರ್ಗಗಳ ವಿವರ; ಹರಿಹರ ಕಡೆಯಿಂದ ಬಾತಿ ಮೂಲಕ ಹಳೇ ಪಿ.ಬಿ ರಸ್ತೆಯಲ್ಲಿ ಬರುವ ಎಲ್ಲಾ ತರಹದ ಭಾರಿ ವಾಹನಗಳು ಮತ್ತು ಖಾಸಗಿ ಬಸ್ಸುಗಳು ಹರಿಹರ ನಗರದಿಂದ ನೇರವಾಗಿ ಶಿವಮೊಗ್ಗ ಬೈಪಾಸ್ ಮೂಲಕ ಚಲಿಸಿ ಬಾಡಾ ಕ್ರಾಸ್ ಮೂಲಕ ದಾವಣಗೆರೆ ನಗರಕ್ಕೆ ಆವರಗೆರೆ ಮಾರ್ಗವಾಗಿ ಬಂದು ಎ.ಪಿ.ಎಂ.ಸಿ ದನದ ಮಾರ್ಕೇಟ್ ಆವರಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸಿ ಅದೇ ಮಾರ್ಗವಾಗಿ ಮರಳಿ ಬಾಡಾ ಕ್ರಾಸ್ ಮೂಲಕ ತೆರಳುವುದು.

ಹರಿಹರ ಕಡೆಯಿಂದ ಬಾತಿ ಮೂಲಕ ಹಳೇ ಪಿ.ಬಿ ರಸ್ತೆಯಲ್ಲಿ ಬರುವ ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಹರಿಹರ ನಗರದಿಂದ ನೇರವಾಗಿ ಶಿವಮೊಗ್ಗ ಬೈಪಾಸ್ ಮೂಲಕ ಚಲಿಸಿ ಬಾಡಾ ಕ್ರಾಸ್ ಮೂಲಕ ದಾವಣಗೆರೆ ನಗರಕ್ಕೆ ಆವರಗೆರೆ ಮಾರ್ಗವಾಗಿ ಬಂದು ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸಿ ಅದೇ ಮಾರ್ಗವಾಗಿ ಮರಳಿ ಬಾಡಾ ಕ್ರಾಸ್ ಮೂಲಕ ಕಾರ್ಯನಿರ್ವಹಿಸುವುದು.

ಚಿತ್ರದುರ್ಗ ಮತ್ತು ಸಂತೆಬೆನ್ನೂರು (ಬೀರೂರು-ಸಮ್ಮಸಗಿ ರಸ್ತೆ) ಮಾರ್ಗವಾಗಿ ಬರುವ ವಾಹನಗಳು ಮತ್ತು ಖಾಸಗಿ ಬಸ್ಸುಗಳು ಬಾಡಾ ಕ್ರಾಸ್ ಮೂಲಕ ದಾವಣಗೆರೆ ನಗರಕ್ಕೆ ಆವರಗೆರೆ ಮಾರ್ಗವಾಗಿ ಬಂದು ಎ.ಪಿ.ಎಂ.ಸಿ ಯ ದನದ ಮಾರ್ಕೇಟ್ ಆವರಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸಿ ಅದೇ ಮಾರ್ಗವಾಗಿ ಮರಳಿ ಬಾಡಾ ಕ್ರಾಸ್ ಮೂಲಕ ಸಾಗುವುದು.

ಚಿತ್ರದುರ್ಗ ಮತ್ತು ಸಂತೆಬೆನ್ನೂರು (ಬೀರೂರು-ಸಮ್ಮಸಗಿ ರಸ್ತೆ) ಮಾರ್ಗವಾಗಿ ಬರುವ ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಬಾಡಾ ಕ್ರಾಸ್ ಮೂಲಕ ದಾವಣಗೆರೆ ನಗರಕ್ಕೆ ಬಂದು ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಅದೇ ಮಾರ್ಗವಾಗಿ ಮರಳಿ ಬಾಡಾ ಕ್ರಾಸ್ ಮಾರ್ಗವಾಗಿ ಕಾರ್ಯನಿರ್ವಹಿಸುವುದು.

ಜಗಳೂರು ಮತ್ತು ಕಂಚಿಕೆರೆ ಮಾರ್ಗವಾಗಿ ಬರುವ ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ವೆಂಕಟೇಶ್ವರ ಸರ್ಕಲ್‍ನಿಂದ ಬಂಬೂಬಜಾರ್ ರಸ್ತೆ ಮಾರ್ಗವಾಗಿ ಆರ್.ಎಂ.ಸಿ ಫೈ ಓವರ್ ಮುಖಾಂತರ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸಿ ವಾಪಾಸ್ ಅದೇ ಮಾರ್ಗವಾಗಿ ಕಾರ್ಯ ನಿರ್ವಹಿಸುವುದು.

ಚನ್ನಗಿರಿ ಕಡೆಯಿಂದ ಹದಡಿ ರಸ್ತೆ ಮೂಲಕ ಬರುವ ಎಲ್ಲಾ ತರಹದ ವಾಹನಗಳು ಮತ್ತು ಖಾಸಗಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಹದಡಿ ಅಂಡರ್ ಪಾಸ್ ಮೂಲಕ ಹದಡಿ ರಸ್ತೆಯ ಮಾಗನೂರು ಬಸಪ್ಪ ಮೈದಾನದಲ್ಲಿ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದಲೇ ವಾಪಾಸ್ ಹೊರಡುವುದು.

ಶಾಮನೂರು ಬೈಪಾಸ್ ಮೂಲಕ ಬರುವ ಎಲ್ಲಾ ತರಹದ ಭಾರಿ ವಾಹನಗಳು ಶಾರದಾಂಭ ಸರ್ಕಲ್ ಮೂಲಕ ಬಾಲಾಜಿ ಸರ್ಕಲ್ ಕಡೆ ಚಲಿಸುವುದು, ಸಂಗೊಳ್ಳಿ ರಾಯಣ್ಣ ಸರ್ಕಲ್ ಕಡೆ ಬಾರದೇ ಜಿ.ಎಂ.ಐ.ಟಿ ಕಾಲೇಜ್ ಕಡೆ ಚಲಿಸುವುದು.

ಕೊಂಡಜ್ಜಿ ಮಾರ್ಗವಾಗಿ ಬರುವ ವಾಹನಗಳು, ಖಾಸಗಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಆರ್.ಟಿ.ಓ ಸರ್ಕಲ್ ವರೆಗೆ ಬಂದು ಪ್ರಯಾಣಿಕರನ್ನು ಇಲ್ಲಿಯೇ ಇಳಿಸಿ ಅಲ್ಲಿಂದಲೇ ವಾಪಾಸ್ ಹೋಗಬೇಕು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕುಂಭಮೇಳದಲ್ಲಿ ಸನಾತನ ಧರ್ಮ ಸ್ವೀಕರಿಸಿದ 200 ಮಂದಿ ವಿದೇಶಿಗರುಕೇಂದ್ರ ಸರ್ಕಾರದಿಂದ ರೈತರ ಖಾತೆಗೆ 10,000 ರೂ. ಜಮೆಪಡಿತರ ಚೀಟಿ ಫಲಾನುಭವಿಗಳಿಗೆ ಬಿಗ್‌ ಶಾಕ್‌..!! ಇನ್ಮುಂದೆ ಇವರಿಗೆ ಉಚಿತ ರೇಷನ್‌ ಸಿಗಲ್ಲ..!10 ಲಕ್ಷ ಲಂಚಕ್ಕೆ ಬೇಡಿಕೆ : ಗ್ರಾಪಂ‌ಅಧ್ಯಕ್ಷೆ ಪತಿ,ಉಪಾಧ್ಯಕ್ಷ ಲೋಕಾಯುಕ್ತ ಬಲೆಗೆಜಮ್ಮು-ಕಾಶ್ಮೀರದ ಗಡಿಯಲ್ಲಿ ಭಾರಿ ಗುಂಡಿನ ಚಕಮಕಿ; ಪಾಕ್‌ನ 7 ಮಂದಿ ನುಸುಳುಕೋರರ ಹತ್ಯೆಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ- ಫೆ.10ರಿಂದ 12ರವರೆಗೆ ಮೂರು ದಿನಗಳ ಕಾಲ ಪವಿತ್ರ ತೀರ್ಥ ಸ್ನಾನಮೈಕ್ರೋ ಫೈನಾನ್ಸ್ ಕುರಿತಾದ ರಾಜ್ಯ ಸರ್ಕಾರದ ಸುಗ್ರೀವಾಜ್ಞೆ ವಾಪಸ್ ಕಳುಹಿಸಿದ ರಾಜ್ಯಪಾಲರುಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ- ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!ಅತ್ಯಾಚಾರ ವಿರೋಧಿಸಿದ್ದಕ್ಕೆ ಗರ್ಭಿಣಿ ಮಹಿಳೆಯನ್ನು ಚಲಿಸುವ ರೈಲಿನಿಂದ ಹೊರಗೆಸೆದ ಕಿರಾತಕ..!!ಅರ್ಚಕನೊಂದಿಗೆ ಅಶ್ಲೀಲ ಚ್ಯಾಟ್ ಮಾಡಿ 10 ಲಕ್ಷ ದೋಖಾ - ಯಕ್ಷಗಾನದ ಸ್ತ್ರೀವೇಷಧಾರಿ ಯುವಕ ಅರೆಸ್ಟ್