LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಹಿಜ್ಬುಲ್ಲಾ ಸದಸ್ಯರ ಅಂತ್ಯಕ್ರಿಯೆ ವೇಳೆ ಮತ್ತೊಂದು ಸ್ಫೋಟ

ಲೆಬನಾನ್ : ಇಸ್ರೇಲಿ ಗುಪ್ತಚರ ಸಂಸ್ಥೆಯು ಸಿರಿಯಾ ಹಾಗೂ ಲೆಬನಾನ್ ನಗರಗಳಲ್ಲಿ ಹಿಜ್‌ಬುಲ್ಲಾ ಭಯೋತ್ಪಾದಕರ ತಾಣಗಳ ಮೇಲೆ ಬಾಂಬ್ ದಾಳಿ ಮಾಡಿದ ಪರಿಣಾಮ ಸುಮಾರು ಎರಡು ಸಾವಿರ ಉಗ್ರರು ಗಾಯಗೊಂಡಿದ್ದಾರೆ. ಸಾಕಷ್ಟು ಸಾವು ಸಂಭವಿಸಿದೆ ಇನ್ನು ಈ ದಾಳಿಯಲ್ಲಿ ಸತ್ತ ಹಿಜ್‌ಬುಲ್ಲಾ ಭಯೋತ್ಪಾದಕರ ಅಂತ್ಯಕ್ರಿಯೆ ಸಂದರ್ಭದಲ್ಲಿ ಮತ್ತೊಂದು ಸ್ಫೋಟ ಗೊಂಡಿದೆ. ಹೌದು ಲೆಬನಾನ್​ನಲ್ಲಿ ಹಿಜ್ಬುಲ್ಲಾಗಳು ಬಳಸುತ್ತಿದ್ದ ಪೇಜರ್​ಗಳ ಸ್ಫೋಟ ಬೆನ್ನಲ್ಲೇ ಅವರ ವಾಕಿ-ಟಾಕಿಗಳು ಕೂಡ ಸ್ಫೋಟಗೊಂಡಿದ್ದು 20ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲೆಬನಾನ್​ನಲ್ಲಿ ಹಿಜ್ಬುಲ್ಲಾ ಬಳಸುತ್ತಿದ್ದ ಪೇಜರ್​ಗಳ ಸರಣಿ ಸ್ಫೋಟದಿಂದ 9ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಹಿಜ್ಬುಲ್ಲಾ ಸದಸ್ಯರ ಅಂತ್ಯಕ್ರಿಯೆಗೆ ತೆರಳಿದ್ದ ವೇಳೆ ವಾಕಿ-ಟಾಕಿಗಳು ಕೂಡ ಸ್ಫೋಟಗೊಂಡಿವೆ. ದಾಳಿಗಳ ಹಿಂದೆ ಇಸ್ರೇಲ್ ಕೈವಾಡವಿರುವ ಬಗ್ಗೆ ಆರೋಪ ಕೇಳಿಬಂದಿದೆ. ಇಸ್ರೇಲ್ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಎಚ್ಚರಿಕೆ ನೀಡಿದೆ. ಕಳೆದ ಅಕ್ಟೋಬರ್‌ನಿಂದ ಹಿಜ್ಬುಲ್ಲಾ ನಾಯಕರ ಮೇಲೆ ಗುರಿಯಿಟ್ಟು ಇಸ್ರೇಲ್‌ ದಾಳಿ ನಡೆಸುತ್ತಿತ್ತು. ಸ್ಮಾರ್ಟ್‌ಫೋನ್‌ ಬಳಕೆಯಿಂದ ನಮ್ಮ ಮಾಹಿತಿಗಳು ಸೋರಿಕೆಯಾಗಿ ಇಸ್ರೇಲ್‌ ದಾಳಿ ಮಾಡುತ್ತಿದೆ ಎಂದು ಅರಿತ ಹಿಜ್ಬುಲ್ಲಾ ಫೋನ್‌ ಬಳಸದೇ ಸಂವಹನಕ್ಕಾಗಿ ಪೇಜರ್‌ ಬಳಸುತ್ತಿತ್ತು.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'NTPC' ಯಲ್ಲಿ 475 ಹುದ್ದೆಗಳಿಗೆ ಅರ್ಜಿ ಆಹ್ವಾನಕುಂಭಮೇಳದಲ್ಲಿ ಜೀವಂತ ಸಮಾಧಿಯಾದ ಪರಮಹಂಸ ಪೀಠಾಧೀಶ್ವರ ಶಿವಯೋಗಿ ಮೌನಿ ಮಹಾರಾಜರು !!ಇದೆ ಮೊದಲಬಾರಿಗೆ ಮದುವೆ ಸಮಾರಂಭಕ್ಕೆ ಸಜ್ಜಾಗುತ್ತಿದೆ ರಾಷ್ಟ್ರಪತಿ ಭವನ!!ಒಂದೇ ಒಂದು ಚುಂಬನಕ್ಕೆ 37 ರೀಟೇಕ್ ತೆಗೆದುಕೊಂಡ ನಟ - ಆ್ಯಕ್ಷನ್ ಕಟ್ ಹೇಳಿ ಸುಸ್ತಾದ ನಿರ್ದೇಶಕ!ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಮೃತ್ಯುಬಂಡುಕೋರರ ಗುಂಡಿನ ದಾಳಿಗೆ 18 ಸೈನಿಕರು ಮೃತ; 23 ಉಗ್ರರು ಹತಕಾರು ನಿಯಂತ್ರಣ ತಪ್ಪಿ ಕೊಳಕ್ಕೆ ಬಿದ್ದು ಇಬ್ಬರು ಹೈಕೋರ್ಟ್ ವಕೀಲರು ಸಾವು.!'ಮಧ್ಯಮ ವರ್ಗವು ಯಾವಾಗಲೂ ಪ್ರಧಾನಿ ಮೋದಿಯವರ ಹೃದಯದಲ್ಲಿದ್ದಾರೆ'- ಅಮಿತ್‌ ಶಾಐಎಎಸ್ ಸಂಜೀತಾ ಮೋಹಪಾತ್ರ ಯಶಸ್ಸಿನ ಪಯಣದ ಕಥನಬ್ಲಾಕ್‌ ಟೀ, ಬ್ಲಾಕ್‌ ಕಾಫಿ ಆರೋಗ್ಯಕ್ಕೆ ಉತ್ತಮ ಯಾವುದು..?