LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

2024ರ ವಿಶ್ವ ಸುಂದರಿ ಕಿರೀಟ ಡೆನ್ಮಾರ್ಕ್‌ನ ವಿಕ್ಟೋರಿಯಾ ಕ್ಜೇರ್ ಮುಡಿಗೆ

ಡೆನ್ಮಾರ್ಕ್‌ : ಡೆನ್ಮಾರ್ಕ್‌ನ ವಿಕ್ಟೋರಿಯಾ ಕ್ಜೇರ್ ಅವರು 73 ನೇ ವಿಶ್ವ ಸುಂದರಿ 2024 ರ ವಿಜೇತರಾಗಿದ್ದಾರೆ. ಡೆನ್ಮಾರ್ಕ್‌ಗೆ ಮೊದಲ ವಿಶ್ವ ಸುಂದರಿ ಕಿರೀಟ ಇದು. ಮೆಕ್ಸಿಕೋದ ಮರಿಯಾ ಫೆರ್ನಾಂಡಾ ಬೆಲ್ಟ್ರಾನ್ ಮತ್ತು ನೈಜೀರಿಯಾದ ಸಿನಿದಿಮ್ಮಾ ಅಡೆಟ್ಶಿನಾ ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿದ್ದಾರೆ. ಭಾರತದ ರಿಯಾ ಸಿಂಘಾ ಅಂತಿಮ ಸುತ್ತಿಗೆ ತಲುಪುವಲ್ಲಿ ವಿಫಲರಾದರು.

ಇಂಟರ್‌ನ್ಯಾಷನಲ್ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಡೆನ್ಮಾರ್ಕ್ ಮೊದಲ ಬಾರಿಗೆ ಕಿರೀಟವನ್ನು ಪಡೆದುಕೊಳ್ಳುವ ಮೂಲಕ ಇದೀಗ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಡೆನ್ಮಾರ್ಕ್ ನ 21 ವರ್ಷದ ವಿಕ್ಟೋರಿಯಾ ಕ್ಜೇರ್ ವಿಜೇತರಾಗಿ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು, ಮೆಕ್ಸಿಕೋದ ಮರಿಯಾ ಫೆರ್ನಾಂಡಾ ಬೆಲ್ಟ್ರಾನ್ ಮೊದಲ ರನ್ನರ್ ಅಪ್ ಆಗಿ, ನೈಜೀರಿಯಾದ ಸಿನಿದಿಮ್ಮಾ ಅಡೆಟ್ಶಿನಾ ಎರಡನೇ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿದ್ದಾರೆ.

73ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿವಿಧ ದೇಶಗಳಿಂದ 130 ಸುಂದರಿಯರು ಸ್ಪರ್ಧಿಸಿದ್ದರು. ತೀರ್ಪುಗಾರರ ಸಮಿತಿಯು ಫ್ಯಾಷನ್, ಮನರಂಜನೆ, ಕಲೆ ಮತ್ತು ಲೋಕೋಪಕಾರಿ ಉದ್ಯಮಗಳಿಂದ ಪ್ರಸಿದ್ಧ ಮತ್ತು ಪ್ರಭಾವಶಾಲಿ ಜನರನ್ನು ಒಳಗೊಂಡಿತ್ತು. ಅವರಲ್ಲಿ ಎಮಿಲಿಯೊ ಎಸ್ಟೆಫಾನ್, ಮೈಕೆಲ್ ಸಿಂಕೊ, ಇವಾ ಕವಾಲ್ಲಿ, ಜೆಸ್ಸಿಕಾ ಕ್ಯಾರಿಲ್ಲೊ, ಜಿಯಾನ್ಲುಕಾ ವಾಚಿ, ನೋವಾ ಸ್ಟೀವನ್ಸ್, ಫರೀನಾ, ಗ್ಯಾರಿ ನಾಡರ್, ಗೇಬ್ರಿಯೆಲಾ ಗೊನ್ಜಾಲೆಜ್ ಮತ್ತು ಕ್ಯಾಮಿಲಾ ಗೈರಿಬಿಟೆ ಮೊದಲಾದವರಿದ್ದರು

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಯುಭಾರ ಕುಸಿತ : ಆಗಸ್ಟ್ 19 ಮತ್ತು 20ರಂದು ರಾಜ್ಯಾದ್ಯಂತ ವ್ಯಾಪಕ ಮಳೆ.!ಆಗಸ್ಟ್ 19 ಮಳೆ ಅಬ್ಬರ ಮುಂದುವರೆದಿದ್ದು ಮುನ್ನೆಚ್ಚರಿಕೆ ಕ್ರಮ ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ರಜೆ.!ಗ್ರಾಮಾಂತರ ಪ್ರದೇಶ ಹಾಗೂ ದಾವಣೆಗರೆ ಈ ಭಾಗಗಳಲ್ಲಿ ಕರಂಟ್ ಇರಲ್ಲ.!ಒಳ ಮೀಸಲಾತಿ : ನಾಗಮೋಹನ್ದಾಸ್ ಆಯೋಗ ದತ್ತಾಂಶ ಸರಿ: ಜೆ.ಯಾದವರೆಡ್ಡಿಸರ್ಪಸಂಸ್ಕಾರ ಒಂದೇ ಸಾಕು ಮದುವೆ ಸಂತಾನ ಆರೋಗ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಸರ್ಪ ಸಂಸ್ಕಾರದ ಮಹತ್ವ ತಿಳಿದು ಪರಿಹಾರ ಮಾಡಿಕೊಳ್ಳಿ....!ದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ.! 19-08-2025..!-ಜೇಡರ ದಾಸಿಮಯ್ಯ ಅವರ  ವಚನ.!ಧರ್ಮಸ್ಥಳ ಪ್ರಕರಣಕ್ಕೆ ಹೊಸ ತಿರುವು: “ಸುಳ್ಳು ಹೇಳುವಂತೆ ನನ್ನನ್ನು ಬಲವಂತಪಡಿಸಿದ್ದರು” – ಎಸ್ಐಟಿ ಮುಂದೆ ಮುಸುಕುಧಾರಿ ಸ್ಫೋಟಕ ಮಾಹಿತಿದೂರುದಾರ, ದೂರುದಾರನ ಹಿಂದಿರುವ ವ್ಯಕ್ತಿಗಳ ಕುರಿತು ಸಮಗ್ರ ತನಿಖೆಗೆ ವಿಜಯೇಂದ್ರ ಆಗ್ರಹಸದನದಲ್ಲೂ ‌ಸುದ್ದಿಯಾದ ಧರ್ಮಸ್ಥಳ ಪ್ರಕರಣ: ಗೃಹ ಸಚಿವರು ಹೇಳಿದ್ದೇನು ಗೊತ್ತಾ?