K2kannadanews.in
Lizard in breakfast ರಾಯಚೂರು : ಬೆಳಗಿನ ಉಪಹಾರದಲ್ಲಿ ಹಲ್ಲಿ ಬಿದ್ದು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ ಗೊಂಡ ಘಟನೆ ರಾಯಚೂರು ನಗರದ ಚಂದ್ರಬಂಡ ರಸ್ತೆಯಲ್ಲಿರುವ ಮುರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ.
https://youtu.be/Wx43TfOKYtM?si=PPcfvVBYud9w-6Fs
ರಾಯಚೂರಿನ ಚಂದ್ರಬಂಡ ಮೊರಾರ್ಜಿ ದೇಸಾಯಿ ವಸತಿ ಶಾಲಾ ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದಾರೆ. ಇಂದು ಬೆಳಗ್ಗೆ ಪಲಾವ್ ಉಪಹಾರ ಮಾಡಿದ್ದ ಮಕ್ಕಳು. ಪಾಲವ್ ರೈಸ್ ನಲ್ಲಿ ಕಂಡಿದ್ದ ಹಲ್ಲಿಯ ಚಿಕ್ಕಚಿಕ್ಕ ಮಾಂಸ ತುಂಡುಗಳಿಂದ ಅಸ್ವಸ್ಥರಾಗಿದ್ದಾರೆ. ಉಪಹಾರ ಮಾಡಿದ ಕೆಲ ಹೊತ್ತಲ್ಲೇ ವಾಂತಿ ಭೇದಿ ಕಾಣಿಸಿಕೊಂಡು ತೀವ್ರ ಅಸ್ವಸ್ಥರಾಗಿದ್ದಾರೆ.
ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ, ಸಮಾರು 50 ವಿದ್ಯಾರ್ಥಿಗಳು ಅಸ್ವಸ್ಥ, ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ರಾಯಚೂರು ಡಿಹೆಚ್ಓ ಡಾ ಸುರೇಂದ್ರ ಬಾಬು. ಒಟ್ಟು 350 ಮಕ್ಕಳಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿರುವ ಘಟನೆ..