
ಜೈ ಲಲಿತಾ ಧಾರವಾಹಿಯ ಒಟ್ಟಾರೆ ಹಿಂದಿರುವ ಕಥೆ
ಧಾರಾವಾಹಿಯ ಒಟ್ಟಾರೆ ಕಥೆಯ ಕುರಿತು ಹೇಳುವುದಾದರೆ ಭೈರವಪುರ ಹಳ್ಳಿಯ ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದಿರೋ ಲಲಿತಾ, ಅಪ್ಪನಿಗೆ ಮುದ್ದಿನ ಪುತ್ರಿಯಾದರೆ, ಊರಿನವರಿಗೆ ಮನೆ ಮಗಳು. ಅದೇ ಊರಿನ ರಾಜಕಾರಣಿ ದೇವರಾಜ್ ಚಕ್ರವರ್ತಿ ಎರಡನೇ ಮಗ ಜೈರಾಜ್ ತನಗನಿಸಿದನ್ನೇ ಮಾಡೋ ಶೂರ. ಅಚಾನಕ್ ಆಗಿ ರಾಜಕೀಯಕ್ಕೆ ಎಂಟ್ರಿ ಕೊಡುವ ಲಲಿತಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷೆಯಾಗುತ್ತಾಳೆ.
ಮುಂದೆ ದೇವರಾಜ್ ಚಕ್ರವರ್ತಿ ಮಗನಿಗೆ ಇಷ್ಟವಿಲ್ಲದಿದ್ದರೂ ಸ್ವಾರ್ಥಕ್ಕಾಗಿ ಲಲಿತಾಳನ್ನು ಸೊಸೆಯನ್ನಾಗಿ ಮಾಡಿಕೊಳ್ತಾನೆ. ನಂತರ ಆಕೆಯ ನಡೆ ಎಲ್ಲಿಗೆ ಕರೆದುಕೊಂಡು ಹೋಗುತ್ತದೆ. ಮದುವೆಯೇ ಕನಸಾಗಿದ್ದವಳಿಗೆ ಮದುವೆಯ ಜೀವನ ಮುಳ್ಳಿನಂತಾಗುತ್ತಾ? ಊರನ್ನೇ ಗೆದ್ದವಳು ಅತ್ತೆಯ ಮನಸ್ಸನ್ನು ಗೆದ್ದು ಚಕ್ರವರ್ತಿ ಮನೆತನದ ಸೊಸೆ ಸ್ಥಾನವನ್ನು ಪಡೆದುಕೊಳ್ತಾಳ? ಆಕೆಯ ಮುಗ್ದತೆಗೆ ಕರಗಿ ಜೈರಾಜ್ ಮನಸೋಲ್ತಾನಾ? ಎಂಬುದು ಸೀರಿಯಲ್ ಸಾರಾಂಶವಾಗಿದೆ.
https://youtu.be/2THEJcf9494?si=74lEMtCw_LCAK7eA
ದಾರವಾಹಿಯಲ್ಲಿ ಹೊಸಬರ ಅಳಬರ ಆಟ:
ಜೈರಾಜ್ ಆಗಿ ಶಿವಾಂಕ್ ನಾಯಕ. ಲಲಿತಾ ಪಾತ್ರದಲ್ಲಿ ಮನಸ್ವಿ ನಾಯಕಿ. ಮಾವನಾಗಿ ಸುನಿಲ್ ಪುರಾಣಿಕ್, ಅತ್ತೆಯಾಗಿ ಸ್ಪಂದನ. ಉಳಿದಂತೆ ರೋಹಿತ್, ನಿರಂಜನ್, ರಶ್ಮಿತಾ, ಶ್ವೇತಾರಾವ್ ಸೇರಿದಂತೆ ಅನೇಕ ಅನುಭವಿ ಕಲಾವಿದರು ಅಭಿಯಿಸುತ್ತಿದ್ದಾರೆ. ಧಾರವಾಹಿ ಪೇಟ ಸಿನಿಮಾದ ರೀತಿಯಲ್ಲಿಯೇ ಪ್ರತಿ ದಿನ ಮುಂದುವರಿಯಲಿದೆ ಸೋತ್ರಗಳು ಹಾಗೂ ಕುಟುಂಬಸ್ಥರೆಲ್ಲರೂ ಸೇರಿಕೊಂಡು ನೋಡುವ ವಿಭಿನ್ನ ಧಾರವಾಹಿ ಆಗಿದೆ.

ಇದೇ ಸೋಮವಾರದಿಂದ (ಡಿಸೆಂಬರ್ 8) ಪ್ರತಿದಿನ ರಾತ್ರಿ 9.30ಕ್ಕೆ ’ಸ್ಟಾರ್ ಸುವರ್ಣ’ದಲ್ಲಿ ’ಜೈ ಲಲಿತಾ’ ಧಾರಾವಾಹಿ ಪ್ರಸಾರವಾಗಲಿದೆ. ಮನೆ ಮುಂದೆ ಎಲ್ಲಾ ಕುಳಿತು ನೋಡುವಂತಹ ವಿಶೇಷವಾದಂತಹ ದಾರವಾಹಿಯಾಗಿದೆ.