Press ID & Credential Portal
Apply / Verify  ➔
LIVE TV LocalCrimeNationalInternationalPoliticsFinancialEducationTechnologyEntertainmentSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

5 ರಾಜ್ಯಗಳ ಚುನಾವಣೆ ವೇಳೆ ಬಿಜೆಪಿಗೆ ₹1,473 ಕೋಟಿ ದೇಣಿಗೆ!

ಹೊಸದಿಲ್ಲಿ, ಸೆ. 9 : ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಅವಧಿಯಲ್ಲಿ ಬಿಜೆಪಿ ತನ್ನ ಕೇಂದ್ರ ಪ್ರಧಾನ ಕಚೇರಿಯಲ್ಲಿ ಸುಮಾರು ₹1,472.8 ಕೋಟಿ ಆದಾಯ ಪಡೆದಿದ್ದು, ಇದೇ ಅವಧಿಯಲ್ಲಿ ಕಾಂಗ್ರೆಸ್ ಕೇಂದ್ರ ಹಾಗೂ ಐದು ರಾಜ್ಯ ಘಟಕಗಳಲ್ಲಿ ದಾಖಲಿಸಿದ ₹207.17 ಕೋಟಿ ನಿವ್ವಳ ಆದಾಯಕ್ಕಿಂತ ಏಳು ಪಟ್ಟು ಹೆಚ್ಚು ಎಂಬುದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವೆಚ್ಚದ ವಿವರಗಳಿಂದ ಬಹಿರಂಗವಾಗಿದೆ.

ಮಾರ್ಚ್ 15ರಿಂದ ಮೇ 6ರವರೆಗಿನ ಚುನಾವಣಾ ಅವಧಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಲ್ಲಿಸಿರುವ ಏಕೀಕೃತ ವೆಚ್ಚದ ವರದಿಯಲ್ಲಿ ₹207.17 ಕೋಟಿ ನಿವ್ವಳ ಆದಾಯ ಬಂದಿರುವುದಾಗಿ ತಿಳಿಸಲಾಗಿದೆ. ಇದೇ ಅವಧಿಯಲ್ಲಿ ಪಕ್ಷವು ಚುನಾವಣೆಗೆ ₹248.55 ಕೋಟಿ ವೆಚ್ಚ ಮಾಡಿದೆ.

ಇದಕ್ಕೆ ಹೋಲಿಸಿದರೆ, ಬಿಜೆಪಿ ದಾಖಲಿಸಿರುವ ₹1,472.8 ಕೋಟಿ ಆದಾಯವು ಅದರ ಕೇಂದ್ರ ಪ್ರಧಾನ ಕಚೇರಿಗೆ ಮಾತ್ರ ಸಂಬಂಧಿಸಿದೆ. ಹೀಗಾಗಿ ಎರಡೂ ಪಕ್ಷಗಳ ಅಂಕಿ ಅಂಶಗಳ ವ್ಯಾಪ್ತಿಯಲ್ಲಿಯೂ ವ್ಯತ್ಯಾಸವಿದೆ. ಬಿಜೆಪಿ ಕೇರಳ ಮತ್ತು ಪಶ್ಚಿಮ ಬಂಗಾಳ ಚುನಾವಣೆಗಳಿಗೆ ಸಂಬಂಧಿಸಿದ ವೆಚ್ಚದ ವಿವರಗಳು ಇನ್ನೂ ಸಾರ್ವಜನಿಕವಾಗಿ ಲಭ್ಯವಾಗದ ಕಾರಣ, ಪಕ್ಷದ ಒಟ್ಟು ಆದಾಯದ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಚುನಾವಣಾ ಅವಧಿಯಲ್ಲಿ ಬಿಜೆಪಿಯ ಹಣಕಾಸು ಸಂಗ್ರಹವೂ ಗಣನೀಯವಾಗಿ ಏರಿಕೆಯಾಗಿದೆ. ಮಾರ್ಚ್ 15ರಂದು ಪಕ್ಷದ ಕೇಂದ್ರ ಕಚೇರಿಯಲ್ಲಿ ₹6,722.6 ಕೋಟಿ ಇದ್ದ ಹಣದ ಮೊತ್ತ ಮೇ 6ರ ವೇಳೆಗೆ ₹7,627.2 ಕೋಟಿಗೆ ಏರಿಕೆಯಾಗಿದೆ. ಅಂದರೆ ಚುನಾವಣಾ ಅವಧಿಯಲ್ಲಿಯೇ ₹904.6 ಕೋಟಿ ಹೆಚ್ಚಳವಾಗಿದೆ.

ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ನ ಹಣಕಾಸು ಸ್ಥಿತಿಯಲ್ಲಿ ಇಳಿಕೆ ಕಂಡುಬಂದಿದೆ. ಪಕ್ಷದ ಕೇಂದ್ರ ಪ್ರಧಾನ ಕಚೇರಿ ಹಾಗೂ ಐದು ರಾಜ್ಯ ಘಟಕಗಳಲ್ಲಿ ಚುನಾವಣಾ ಅವಧಿಯ ಆರಂಭದಲ್ಲಿ ಒಟ್ಟು ₹169.06 ಕೋಟಿ ಲಭ್ಯವಿತ್ತು. ಇದರಲ್ಲಿ ₹22.9 ಕೋಟಿ ನಗದು ಹಾಗೂ ₹146.1 ಕೋಟಿ ಬ್ಯಾಂಕ್ ಖಾತೆಗಳಲ್ಲಿತ್ತು.

ಚುನಾವಣೆ ಮುಕ್ತಾಯದ ವೇಳೆಗೆ ಕಾಂಗ್ರೆಸ್ ಬಳಿ ಉಳಿದಿದ್ದ ಮೊತ್ತ ಸುಮಾರು ₹103.2 ಕೋಟಿಗೆ ಇಳಿದಿದೆ. ಇದರೊಂದಿಗೆ ಚುನಾವಣಾ ಅವಧಿಯಲ್ಲಿ ಪಕ್ಷದ ಲಭ್ಯ ಹಣದಲ್ಲಿ ಸುಮಾರು ₹65.86 ಕೋಟಿ ಕಡಿಮೆಯಾಗಿದೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಈ ಹಣಕಾಸು ವಿವರಗಳು ಐದು ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಆದಾಯ ಹಾಗೂ ಚುನಾವಣಾ ವೆಚ್ಚ ನಿರ್ವಹಣೆಯಲ್ಲಿರುವ ದೊಡ್ಡ ಅಂತರವನ್ನು ಬಹಿರಂಗಪಡಿಸಿವೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಸೆಂಬರ್ 7ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸಾಧ್ಯತೆಎಂಎಸ್‌ಪಿ ಆಧರಿಸಿ ಕಬ್ಬಿಗೆ ದರ: ಡಿ.ಕೆ. ಶಿವಕುಮಾರಮತದಾರರ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಿಚುನಾವಣಾ ಆಯೋಗದ ಸಮರ್ಥನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶಸಚಿವ ಜಿ. ಪರಮೇಶ್ವರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು‘ಬಟ್ಟೆ ಹರಿದು ರಕ್ತಸ್ರಾವವಾಗಿತ್ತು’: ಟ್ರಂಪ್ ವಿರುದ್ಧ ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ ಅತ್ಯಾಚಾರ ಆರೋಪ!ಮತದಾರರ ಪಟ್ಟಿಯಿಂದ 1 ಕೋಟಿ ಹೆಸರು ಡಿಲೀಟ್!ಕಬ್ಬಿನ ದರ ನಿಗದಿ ಸಭೆಯಲ್ಲಿ ರೈತ ಮುಖಂಡರ ಮಾರಾಮಾರಿ: ಸುವರ್ಣಸೌಧದಲ್ಲೇ ಕೈಕೈ ಮಿಲಾಯಿಸಿದ ಎರಡು ಬಣಗಳು!ಕನ್ನಡಿಗರಿಗೆ ಉದ್ಯೋಗ ನಿರಾಕರಿಸಿದರೆ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ: ಡಿ.ಕೆ. ಶಿವಕುಮಾರಜಲವಿದ್ಯುತ್ ಯೋಜನೆ ವಿರೋಧಿಸಿ ಅರುಣಾಚಲದಲ್ಲಿ ಹಿಂಸಾಚಾರ: ಭದ್ರತಾ ಪಡೆಯ ಎರಡು ತುಕಡಿ ರವಾನೆ