LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಡಿ.17-19ರವರೆಗೆ ಸಾಂಪ್ರದಾಯಿಕ ಔಷಧ ಜಾಗತಿಕ ಶೃಂಗಸಭೆ

ಬೆಂಗಳೂರು: ಆಯುಷ್ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಜಂಟಿಯಾಗಿ ಆಯೋಜಿಸಿರುವ ಜಾಗತಿಕ ಶೃಂಗ ಸಭೆಯು ಡಿಸೆಂಬರ್ 17ರಿಂದ 19ರವರೆಗೆ ನವ ದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ ಎಂದು ಡಾ.ಈಶ್ವರ್ ರಾಜ್ ತಿಳಿಸಿದರು.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು, 2023ರಲ್ಲಿ ಗುಜರಾತ್ ನಲ್ಲಿ ನಡೆದ ಮೊದಲ ಆವೃತ್ತಿಯ ಯಶಸ್ವಿ ನಂತರ ಭಾರತದ ಎರಡನೇ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಸಂಪ್ರದಾಯಿಕ ಔಷಧ ಶೃಂಗಸಭೆಯನ್ನು ಆಯೋಜಿಸಲಿದೆ.

ಈ ಬಾರಿ ಶೃಂಗಸಭೆಯು ಸಮತೋಲನವನ್ನು ಪುನಃ ಸ್ಥಾಪಿಸುವುದು ಆರೋಗ್ಯ ಮತ್ತು ಯುವ ಕ್ಷೇಮದ ವಿಜ್ಞಾನ ಮತ್ತು ಅಭ್ಯಾಸ ಎಂಬ ವಿಷಯವನ್ನು ಹೊಂದಿದೆ . ನೀತಿ ನಿರೂಪಕರು ಜಾಗತಿಕ ಆರೋಗ್ಯ ನಾಯಕರು ಸಂಪ್ರದಾಯ ತಜ್ಞರು ಉದ್ಯಮ ಪ್ರತಿನಿಧಿಗಳು ಮತ್ತು ವೃತ್ತಿಪರರನ್ನು ಒಟ್ಟುಗೂಡಿಸುತ್ತದೆ. ನೂರಕ್ಕೂ ಹೆಚ್ಚು ದೇಶಗಳಿಂದ ಭಾಗವಹಿಸಬಹುದೆಂದು ನಿರೀಕ್ಷಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ಸಂಶೋಧನಾಧಿಕಾರಿ ಡಾ. ಎಂ ಕಣ್ಣನ್ ಮಾತನಾಡಿ, ನವದೆಹಲಿಯಲ್ಲಿ ನಡೆಯಲಿರುವ ಎರಡನೇ ವಿಶ್ವ ಆರೋಗ್ಯ ಸಾಂಪ್ರದಾಯಿಕ ಔಷಧ ಜಾಗತಿಕ ಶ್ರಮಿಸಬೇಕು ಕೇಂದ್ರ ಸಚಿವ ಜಾದವ್ ಚಾಲನೆ ನೀಡಲಿದ್ದಾರೆ, ಕೇಂದ್ರ ಆರೋಗ್ಯ ಮತ್ತು ಆಯುಷ್ಮಾನ್ ಭಾರತ್ ಖಾತೆ ರಾಜ್ಯ ಸಚಿವರು ಪ್ರತಾಪ್ ರಾವ್ ಜಾದವ್ ಭಾಗಿಯಾಗಲಿದ್ದಾರೆ.

ಶೃಂಗಸಭೆಯ ಚರ್ಚೆಗಳ  ಭಾಗವಾಗಿ ಅಶ್ವಗಂಧ ಸಾಂಪ್ರದಾಯಿಕ ಬುದ್ಧಿವಂತಿಕೆಯಿಂದ ಜಾಗತಿಕ ಪ್ರಭಾವದವರಿಗೆ ಪ್ರಮುಖ ಜಾಗತಿಕ ತಜ್ಞರ ದೃಷ್ಟಿಕೋನಗಳು ಎಂಬ ಶೀರ್ಷಿಕೆಯ ಕೇಂದ್ರೀಕೃತ ಸೈಡಿವೆಂಟ್ ನಡೆಯಲಿದೆ ಆಯುಷ್ ಸಚಿವಾಲಯದ ಸಹಯೋಗದೊಂದಿಗೆ WHO -GTMC  ಇರುವ ಅಧಿವೇಶನವು ಅಶ್ವಗಂಧದ ವೈಜ್ಞಾನಿಕ ತಿಳುವಳಿಕೆಯನ್ನು ಗಾಢವಾಗಿಸಲು ಪ್ರಮುಖ ಸಂಶೋಧಕರು ವೈದ್ಯರು ಒಟ್ಟು ಗೂಡಲಿದ್ದಾರೆ.

ಚರ್ಚೆಗಳು ಸಾಂಪ್ರದಾಯಿಕ ಜ್ಞಾನದ ಒಳನೋಟಗಳೊಂದಿಗೆ ಅಡಾಪ್ಟು ಜೆನಿಕ್ ನರರಕ್ಷಣಾತ್ಮಕ ಮತ್ತು  ಇಮ್ಯುನೊ ಮಾಡುಲೇಟರಿ ಗುಣಲಕ್ಷಣಗಳ ಕುರಿತು ಸಮಕಾಲೀನ ಪುರಾವೆಗಳನ್ನು ಎತ್ತಿ ತೋರಿಸುತ್ತದೆ. ಸುರಕ್ಷಾ ಮೌಲ್ಯಮಾಪನಗಳ ಮೇಲೆ ಹೊತ್ತು ನಿಲ್ಲುವ ಮೂಲಕ ಅಧಿವೇಶನವು ಉತ್ತಮ ಗುಣಮಟ್ಟದ ಪುರಾವೆ ಆಧಾರಿತ ಅಶ್ವಗಂಧ ಉತ್ಪನ್ನಗಳ ಜಾಗತಿಕ ಸ್ವೀಕಾರವನ್ನು ಮತ್ತಷ್ಟು ಮುನ್ನಡೆಸುವ ಗುರಿ ಹೊಂದಿದೆ.

ಪತ್ರಿಕಾಗೋಷ್ಠಿಯಲ್ಲಿ ಸಿದ್ದ ವೈದ್ಯ ಸಂಶೋಧನಾ ಘಟಕದ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ