E-PAPER
17 Nov 2026, 05:21:21 PM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

80ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ವತಿಯಿಂದ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮರ ಕನಸನ್ನು ನನಸಾಗಿಸುವ ಸಂಕಲ್ಪ ದಿನ

ಇಂದಿಗೆ ನಮ್ಮ ದೇಶವು ಸ್ವಾತಂತ್ರ್ಯ ಹೊಂದಿ 79 ವರ್ಷಗಳು ಕಳೆಯಿತು. 80ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ವತಿಯಿಂದ ಈ ದಿನ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮರ ಕನಸನ್ನು ನನಸಾಗಿಸುವ ಸಂಕಲ್ಪ ದಿನವನ್ನಾಗಿ ಆಚರಿಸಲಾಯಿತು.

ಈ ಸಂಬಂಧದಲ್ಲಿ ಬೆಳಗಾವಿಯ ಸರ್ದಾರ್ ಕಾಲೇಜು, ಕುಟ್ಟಲವಾಡಿ, ಹೊನ್ನಿಹಾಳ, ಇಂಡಾಲ್ ನಗರ, ಮೆಳ್ಳಿಕೆರಿ ಹಾಗೂ ಹಳ್ಳೂರಿನ ಸರ್ಕಾರಿ ಶಾಲೆ ಸೇರಿದಂತೆ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಕೆಳಗಿನ ಪ್ರತಿಜ್ಞೆಯನ್ನು ಸ್ವೀಕರಿಸಿದರು. "ಈ ದೇಶದ ವಿದ್ಯಾರ್ಥಿಗಳಾದ ನಾವು, ಹಿಂದಿನ ಎಲ್ಲಾ ಮಹಾನ್ ವ್ಯಕ್ತಿಗಳನ್ನು ಸ್ಪೂರ್ತಿಯಿಂದ ಸ್ಮರಿಸುತ್ತೇವೆ. ವಿದ್ಯಾಸಾಗರರು ಎತ್ತಿಹಿಡಿದ ವೈಜ್ಞಾನಿಕ ಮನೋಧರ್ಮದೊಂದಿಗೆ, ಕೆಚ್ಚೆದೆಯ ಖುದಿರಾಂನ ಮನದಲ್ಲಿ ನೆನೆಯುತ್ತ, ನೊಂದವರಿಗೆ ಮಿಡಿಯುವ ಶರತ್ ಚಂದ್ರರ ಸಾಹಿತ್ಯದ ಶ್ರೇಷ್ಠ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತ, ತುಳಿತಕ್ಕೆ ಒಳಗಾದವರ ಬಗೆಗಿನ ಉದಾತ್ತ ಭಾವನೆಯನ್ನೇ ದೇಶಪ್ರೇಮ ಎಂದು ಬಣ್ಣಿಸಿದ ವಿವೇಕಾನಂದರನ್ನು ನೆನೆಯುತ್ತಾ, ನೇತಾಜಿಯವರ ಧರ್ಮನಿರಪೇಕ್ಷತೆಯೊಂದಿಗೆ, ಹುತಾತ್ಮ ಭಗತ್ ಸಿಂಗ್ ಮತ್ತು ಮುಂತಾದ ಕ್ರಾಂತಿಕಾರಿಗಳು ಕನಸುಕಂಡ 'ಯಾವ ಕಂದನೂ ಹಸಿವೆಯಿಂದ ನರಳದ, ಯಾವ ಹೆಣ್ಣು ಕೂಡ ಅಭದ್ರತೆಯಿಂದ ರೋದಿಸದ, ಎಲ್ಲರಿಗೂ ಶಿಕ್ಷಣ-ಉದ್ಯೋಗ-ಆರೋಗ್ಯವನ್ನು ಒದಗಿಸಿ, ಸಂತಸದ ಬದುಕನ್ನು ನನಸಾಗಿಸುವ, ಮಾನವ ಜನಾಂಗವು ಹೆಮ್ಮೆಯಿಂದ ತಲೆಯೆತ್ತಿ ಮುನ್ನಡೆಯುವ ಭಾರತ'ವನ್ನು ನಿರ್ಮಿಸುವ ಸಂಕಲ್ಪ ತೊಡುತ್ತೇವೆ. ಈ ಮೂಲಕ, ಸ್ವಾತಂತ್ರ್ಯ ಸಂಗ್ರಾಮದ ಎಲ್ಲ ಹುತಾತ್ಮರಿಗೆ ನಮ್ಮ ಗೌರವ ಸಲ್ಲಿಸುತ್ತೇವೆ. ಇಂಕ್ವಿಲಾಬ್ ಜಿಂದಾಬಾದ್!!"

ಅನೇಕರ ಮಹನೀಯರ ತ್ಯಾಗ-ಬಲಿದಾನದ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯವು ದೊರೆತಿದೆ. ಆದರೆ ಇಂದಿಗೂ ಕೂಡ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳು ನನಸಾಗಿಲ್ಲ. ಶಿಕ್ಷಣವು ಇಂದು ವ್ಯಾಪಾರವಾಗಿ ಕೇವಲ ದುಡ್ಡಿದ್ದವರ ಸ್ವತ್ತಾಗಿದೆ. ಕಳೆದ 10 ವರ್ಷಗಳಲ್ಲಿ ದೇಶಾದ್ಯಂತ 94,000 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಕರ್ನಾಟಕ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ 40,000 ಸಾವಿರ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಿದೆ. ನಿರುದ್ಯೋಗ ಸಮಸ್ಯೆ ಯುವಜನರನ್ನು ತೀವ್ರವಾಗಿ ಕಾಡುತ್ತಿದೆ. ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟದಿಂದ ಕಳೆದ 10 ವರ್ಷಗಳಲ್ಲಿ 1.5 ಲಕ್ಷ ಯುವಕರು ಆತ್ಮಹತ್ಯೆಗೆ ತುತ್ತಾಗಿದ್ದಾರೆ. ಹೆಣ್ಣುಮಕ್ಕಳ ಮೇಲೆ ಅವ್ಯಾಹತವಾಗಿ ದೌರ್ಜನ್ಯಗಳು ನಡೆಯುತ್ತಿದೆ. ಅರ್ಧ ಗಂಟೆಗೊಬ್ಬ ರೈತರ ಆತ್ಮಹತ್ಯೆ ಘಟಿಸುತ್ತದೆ. ಇದು ಭಗತ್ ಸಿಂಗ್, ನೇತಾಜಿ ಮುಂತಾದ ಕ್ರಾಂತಿಕಾರಿಗಳ ಕನಸಿನ ಭಾರತವಲ್ಲ. ಇಂತಹ ಪರಿಸ್ಥಿತಿಗಾಗಿ ಅವರು ಜೀವ ಕೊಡಲಿಲ್ಲ. ನವೋದಯ ಚಳುವಳಿಯ ಹರಿಕಾರರು ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳ ಕನಸಿನ ಭಾರತ ಕಟ್ಟುವ ಜವಾಬ್ದಾರಿ ಇಂದು ಈ ದೇಶದ ವಿದ್ಯಾರ್ಥಿ-ಯುವಜನರ ಹೆಗಲ ಮೇಲಿದೆ. ಈ ನಿಟ್ಟಿನಲ್ಲಿ ಆಗಸ್ಟ್ 15ರಂದು ಎಐಡಿಎಸ್ಓ ವತಿಯಿಂದ ದೇಶವ್ಯಾಪಿ ಪ್ರತಿಜ್ಞಾ ದಿನವಾಗಿ ಆಚರಿಸಲಾಯಿತು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಬೆಳಗಾವಿ ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ಪ್ರವೇಶ ಮತ್ತು ಅಭಿಮುಖೀಕರಣ ಕಾರ್ಯಕ್ರಮವೀರ ವನಿತೆ ಒನಕೆ ಓಬವ್ವ ಜಯಂತ್ಯೋತ್ಸವ ಕಾರ್ಯಕ್ರಮ - 2026ಮಂಡೋಳ್ಳಿಯಲ್ಲಿ ₹1.70 ಕೋಟಿ ವೆಚ್ಚದಲ್ಲಿ ಶ್ರೀ ಮಾರುತಿ ದೇವಸ್ಥಾನ ನಿರ್ಮಾಣ