E-PAPER
17 Nov 2026, 05:23:35 PM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ವೀರ ವನಿತೆ ಒನಕೆ ಓಬವ್ವ ಜಯಂತ್ಯೋತ್ಸವ ಕಾರ್ಯಕ್ರಮ - 2026

ಈ ನಾಡು ಕಂಡ ಧೀರ ಮಹಿಳೆ ಒನಕೆ ಓಬವ್ವ: ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ.
 
ಬೆಳಗಾವಿ-15: ನಿಸ್ವಾರ್ಥ ಮನೋಭಾವ ಬೆಳೆದಾಗ ಮಾತ್ರ ದೇಶ ನಿರ್ಮಾಣ ಮಾಡಲು ಸಾಧ್ಯ. ನಾಎಉ ಕಂಡಂತಹ ಧೀರ ಒನಕೆ ಓಬವ್ವನಂತಹ ಮಹನೀಯರ ಜೀವನ ಚರಿತ್ರೆ ಮತ್ತು ವಿಚಾರಗಳನ್ನು ಓದುವುದರ ಜೊತೆಗೆ ನಿತ್ಯದ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ತಿಳಿಸಿದರು.
 
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ರವಿವಾರ  ನಗರದ ಬಸವರಾಜ ಕಟ್ಟಿಮನಿ ಸಭಾಭವನದಲ್ಲಿ ನಡೆದ ವೀರ ವನಿತೆ ಒನಕೆ ಓಬವ್ವ ಜಯಂತ್ಯೋತ್ಸವ-2026 ರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
ಮಹಿಳೆಯರಿಗೆ ಅವಕಾಶ ಸಿಕ್ಕರೆ ಎಲ್ಲಾ ರೀತಿಯ ಸಾಧನೆ ಮಾಡಬಲ್ಲರು. ಓಬವ್ವ ಒಬ್ಬ ಸಾಮಾನ್ಯ ಮಹಿಳೆಯಾಗಿದ್ದರೂ, ಆ ಸಂದರ್ಭದಲ್ಲಿ ತಮ್ಮ ಕೋಟೆಯನ್ನು ರಕ್ಷಿಸಲು ಹೋರಾಡಿದ ಅವರ ಕಾರ್ಯ ನಮಗೆ ಸ್ಫೂರ್ತಿಯಾಗಬೇಕು ಎಂದು ಹೇಳಿದರು.
 
 ಈ ಎಲ್ಲಾ ಮಹನೀಯರ ಜೀವನ ಚರಿತ್ರೆಯನ್ನು ಕೇವಲ ಒಂದು ಸಮಾಜಕ್ಕೆ ಸೀಮಿತಗೊಳಿಸದೆ ಎಲ್ಲರೂ ಅಳವಡಿಸಿಕೊಳ್ಳಬೇಕು. ಓಬವ್ವನ ಧೈರ್ಯ ಮತ್ತು ಮನೋಧರ್ಮವನ್ನು ನಾವೆಲ್ಲರೂ ಅಳವಡಿಸಿಕೊಂಡರೆ ಯಾವುದೇ ಮಹಿಳೆ ಇತರರ ಆಶ್ರಯ ಪಡೆಯುವ ಅವಶ್ಯಕತೆ ಬರುವುದಿಲ್ಲ ಎಂದು ಹೇಳಿದರು.
 
 
ನಾವು ಕೇವಲ ನಮ್ಮ ಮನೆಗೆ ಸೀಮಿತವಾಗದೆ ಸಮಾಜ ಹಾಗೂ ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬೇಕು. ಅದಕ್ಕಾಗಿ ನಾಡಿನ ಎಲ್ಲ ಮಹನೀಯರು ಸ್ಫೂರ್ತಿಯಾಗಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಕೆ.ಎಂ. ಜಾನಕಿ ಅಬರು ತಿಳಿಸಿದರು.
 
ಉಪನ್ಯಾಸಕರಾಗಿ ಆಗಮಿಸಿದ್ದ ಮಮತಾ ಸಿ.ಪಿ. ಮಾತನಾಡಿ ಒನಕೆ ಓಬವ್ವನ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಇತಿಹಾಸದಲ್ಲಿ ಅಜರಾಮರವಾಗಿ ಉಳಿದಿರುವ ಓಬವ್ವ, ಮದಕರಿ ನಾಯಕರ ಕಾಲದಲ್ಲಿ ಚಿತ್ರದುರ್ಗ ಕೋಟೆಯಲ್ಲಿದ್ದ ಧೀರ ಮಹಿಳೆ. ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ ಚಿತ್ರದ ವೀರ ವನಿತೆ ಒನಕೆ ಓಬವ್ವ ಎಂಬ ಹಾಡಿನ ಮೂಲಕ ಅವರು ಇಂದಿಗೂ ಜನಮಾನಸದಲ್ಲಿ ಜೀವಂತವಾಗಿದ್ದಾರೆ ಎಂದು ಹೇಳಿದರು.
 
ಕಳ್ಳ ಮಾರ್ಗದಿಂದ ಬಂದ ಹೈದರಾಲಿಯ ಸೈನ್ಯವನ್ನು ರಾತ್ರಿಯ ಸಮಯದಲ್ಲಿ, ಗಂಡನ ಊಟಕ್ಕೆ ತೊಂದರೆ ಮಾಡದೆ, ಯಾವುದೇ ಆಯುಧ ಸಿಗದ ಕಾರಣ ಭತ್ತ ಕುಟ್ಟುವ ಒನಕೆಯಿಂದಲೇ ಕಳ್ಳ ಕಿಂಡಿಯಲ್ಲಿ ನಿಂತು ನುಸುಳುತ್ತಿದ್ದ ಹಲವು ಶತ್ರು ಸೈನಿಕರನ್ನು ಒಬ್ಬಳೇ ಸದೆಬಡಿದು ಹೋರಾಡಿದ ಮಹಾನ್ ಧೀರ ಮಹಿಳೆ ಓಬವ್ವ ಎಂದು ಹೇಳಿದರು.
 
 
ಆಕೆಯ ಶೌರ್ಯವನ್ನು ಕಂಡು ಸ್ವತಃ ಆಕೆಯ ಗಂಡನೇ ಬೆರಗಾಗಿದ್ದರು ಎಂದು ವಿವರಿಸಿದ ಅವರು ಓಬವ್ವನ ಧೈರ್ಯವನ್ನು ಕಂಡ ಮದಕರಿ ನಾಯಕರು, ಇಲ್ಲಿಯವರೆಗೆ ಸಾಮಾನ್ಯ ಮಹಿಳೆಯಾಗಿದ್ದ ನೀನು, ಇಂದು ದುರ್ಗವನ್ನು ರಕ್ಷಿಸಿ ದುರ್ಗದ ತಾಯಿಯಾದೆ ಎಂದು ಬಣ್ಣಿಸಿದ್ದರು. ಮುಂದೆ ಇದೇ ಯುದ್ಧದಲ್ಲಿ ಹೋರಾಡಿ ವಿವಿಧ ಕಾರಣಗಳಿಂದ ಓಬವ್ವ ವೀರಮರಣ ಹೊಂದುತ್ತಾಳೆ ಎಂದು ಹೇಳಿದರು.
 
 
ಜಾತಿ ಕಲಹದಿಂದ ಉಂಟಾದ ಗೊಂದಲಗಳನ್ನು ನಿವಾರಿಸಿ ಜನರನ್ನು ಒಗ್ಗೂಡಿಸಲು, ನೂರು ಯುದ್ಧಗಳಿಗೆ ಸೋಲದ ದುರ್ಗ, ಮೂರು ಜಾತಿಗೆ ಸೋತಿತು ಎಂದು ಮುಂದೆ ಕಳಂಕ ಬರಬಾರದು ಎಂಬ ಮಾತಿನ ಮೂಲಕ ಮದಕರಿ ನಾಯಕರು ಜನರಲ್ಲಿ ಒಗ್ಗಟ್ಟು ಮೂಡಿಸುವ ಕೆಲಸ ಮಾಡಿದರು. 
 
ಶಿಸ್ತಿಗೆ ಹೆಸರುವಾಸಿಯಾಗಿದ್ದ ಮದಕರಿ ನಾಯಕರು, ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗಲೇಬೇಕು ಎಂಬ ಕಾರಣಕ್ಕೆ ಸ್ವತಃ ತಮ್ಮ ಹೆಂಡತಿಯ ತಂದೆಯ ತಲೆಯನ್ನೇ ಕತ್ತರಿಸುವ ಮೂಲಕ ನ್ಯಾಯನಿಷ್ಠೆಗೆ ಪ್ರೇರಣೆಯಾದರು.
 
ಒನಕೆ ಓಬವ್ವನ ಶೌರ್ಯ ನಮಗೆಲ್ಲರಿಗೂ ಸ್ಫೂರ್ತಿಯಾಗಲಿ. ಪ್ರತಿಯೊಬ್ಬ ಮಹಿಳೆಯಲ್ಲೂ ವಿಶೇಷ ಶಕ್ತಿಯಿದ್ದು, ಎಂದಿಗೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಆಪ್ತ ಸಮಾಲೋಚಕರು ಹಾಗೂ ಸಾಹಿತಿಗಳಾದ ಮಮತಾ ಸಿ.ಪಿ. ಅವರು ಉಪನ್ಯಾಸ ನೀಡಿದರು.
 
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಮಾಜ ಕಲ್ಯಾಣ ಇಲಾಖೆಯ ತಾಲೂಕಾ ಅಧಿಕಾರಿ ಬಸವರಾಜ ಚನ್ನಯ್ಯನವರ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ರಾಜ್ಯ ನಿರ್ದೇಶಕರಾದ ಮಲ್ಲೇಶ ಚೌಗಲೆ, ಚಲವಾದಿ ಮಹಾಸಭೆ ಬೆಳಗಾವಿ ಜಿಲ್ಲಾಧ್ಯಕ್ಷರಾದ ದುರ್ಗೇಶ್ ಮೈತ್ರಿ ಹಾಗೂ ಸಮಾಜದ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
 
 
 
 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಬೆಳಗಾವಿ ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ಪ್ರವೇಶ ಮತ್ತು ಅಭಿಮುಖೀಕರಣ ಕಾರ್ಯಕ್ರಮವೀರ ವನಿತೆ ಒನಕೆ ಓಬವ್ವ ಜಯಂತ್ಯೋತ್ಸವ ಕಾರ್ಯಕ್ರಮ - 2026ಮಂಡೋಳ್ಳಿಯಲ್ಲಿ ₹1.70 ಕೋಟಿ ವೆಚ್ಚದಲ್ಲಿ ಶ್ರೀ ಮಾರುತಿ ದೇವಸ್ಥಾನ ನಿರ್ಮಾಣ