LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

90 ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ..!

ದಕ್ಷಿಣ ಆಫ್ರಿಕಾದ ನ್ಯಾಯಾಲಯವು 42 ವಿವಿಧ ಅತ್ಯಾಚಾರ ಪ್ರಕರಣಗಳಲ್ಲಿ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಕಳೆದ 9 ವರ್ಷಗಳಲ್ಲಿ 90 ಹೆಣ್ಣುಮಕ್ಕಳ ಮೇಲೆ ಈತ ಅತ್ಯಾಚಾರವೆಸಗಿದ್ದಾನೆ. ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಹಲ್ಲೆ ನಡೆಸಿದ 42 ಪ್ರಕರಣಗಳಲ್ಲಿ ಈ ವ್ಯಕ್ತಿ ಶಿಕ್ಷೆಗೆ ಗುರಿಯಾಗಿದ್ದಾನೆ. ತಪ್ಪಿತಸ್ಥ ವ್ಯಕ್ತಿ ಎಲೆಕ್ಟ್ರಿಷಿಯನ್‌ನಂತೆ ಮನೆಗಳಿಗೆ ನುಗ್ಗಿ ಅನೇಕ ಮಹಿಳೆಯರು ಮತ್ತು ಹುಡುಗಿಯರ ಜೀವನ ಹಾಳು ಮಾಡಿದ್ದಾನೆ. ಆರೋಪಿಯನ್ನು ನಕೋಸಿನತಿ ಫಕತಿ ಎಂದು ಗುರುತಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಾನೆ. 40 ವರ್ಷದ ಅಪರಾಧಿ 2012 ರಿಂದ 2021 ರವರೆಗೆ ಅಪರಾಧಗಳನ್ನು ಎಸಗಿದ್ದಾನೆ. ಜೋಹಾನ್ಸ್‌ಬರ್ಗ್ ಮತ್ತು ನೆರೆಯ ಎಕುರ್ಹುಲೆನಿಯಲ್ಲಿ ಒಂಟಿ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಕೃತ್ಯವೆಸಗುತ್ತಿದ್ದ. ಆರೋಪಿ ವಿದ್ಯಾರ್ಥಿನಿಯರಿಗೆ ಹಿಂಸಾತ್ಮಕ ಮತ್ತು ಅಶ್ಲೀಲ ವೀಡಿಯೊಗಳನ್ನು ತೋರಿಸುತ್ತಿದ್ದ, ಮನೆಯಲ್ಲಿ ಒಬ್ಬಂಟಿಯಾಗಿರುವ ಹುಡುಗಿಯರು, ಮಹಿಳೆಯರನ್ನು ಈತ ಟಾರ್ಗೆಟ್ ಮಾಡುತ್ತಿದ್ದ, ಆರೋಪಿ ತನ್ನ ಕುಟುಂಬದ ಸದಸ್ಯರ ಎದುರು ಕೂಡ ಹಲವು ಕೃತ್ಯ ಎಸಗಿದ್ದಾನೆ, ಈತ ಕರುಣೆಗೆ ಯೋಗ್ಯನಲ್ಲ, ಅಮಾಯಕ ಮತ್ತು ಅಸಹಾಯಕತೆಯ ಲಾಭ ಪಡೆದಿದ್ದಾನೆ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಹಲವು ದಿನಗಳಿಂದ ಮಕ್ಕಳ ಮೇಲೆ ಕಣ್ಣಿಟ್ಟಿದ್ದ ಈತ ಶಾಲೆಗೆ ಹೋಗುವಾಗ ಮಕ್ಕಳನ್ನು ಕಿಡ್ನಾಪ್ ಮಾಡಿ ತನ್ನ ಪ್ಲಾನ್ ನಡೆಸುತ್ತಿದ್ದ. ದಕ್ಷಿಣ ಆಫ್ರಿಕಾದಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ಪ್ರಕರಣಗಳಲ್ಲಿ ಈಗಾಗಲೇ ಭಾರಿ ಹೆಚ್ಚಳ ಕಂಡುಬಂದಿದೆ, ಆದ್ದರಿಂದ ನ್ಯಾಯಾಲಯದ ಈ ನಿರ್ಧಾರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ಗೆ ಭಾವುಕ ಪತ್ರ ಬರೆದ ಪ್ರಧಾನಿ ಮೋದಿಹೋಟೆಲ್ ರೂಮ್‌ ನಲ್ಲಿ ಸೀಕ್ರೆಟ್ ಕ್ಯಾಮೆರಾ - ಪತ್ತೆ ಹಚ್ಚಲು ಇಲ್ಲಿದೆ ಟಿಪ್ಸ್‌..!ಭೂ ಒತ್ತುವರಿ ತೆರವು ವಿಚಾರ: 'ನಾವು ಹೆಚ್‌ಡಿಕೆ ರಾಜೀನಾಮೆ ಕೇಳಲ್ಲ'- ಚಲುವರಾಯಸ್ವಾಮಿಭೂಮಿಯತ್ತ ಸುನಿತಾ, ಬುಚ್ -ಬಾಹ್ಯಾಕಾಶ ನಿಲ್ದಾಣದಿಂದ ಹೊರಟ ಸ್ಪೇಸ್​ಎಕ್ಸ್​ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಕದನ ವಿರಾಮ ಉಲ್ಲಂಘನೆ- ಏರ್‌ಸ್ಟ್ರೈಕ್‌ನಲ್ಲಿ 200 ಜನ ಬಲಿಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ಬಿಜೆಪಿ ಅವರು ಹೇಳುವ ಪ್ರಕಾರ ಅಂಬೇಡ್ಕರ್‌ ಅವರನ್ನು ಸೋಲಿಸಿದ್ದು ಯಾರು ಗೊತ್ತಾ??ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಟ್ಟು, ಮತಬ್ಯಾಂಕ್‌ ಗಟ್ಟಿಮಾಡಿಕೊಳ್ಳುವ ಪ್ರಯತ್ನ- ಬೊಮ್ಮಾಯಿಮನೆ ಬಿಟ್ಟು ಬಂದ ಅಪ್ರಾಪ್ತೆ ಪುಸಲಾಯಿಸಿ ತಿರುಪತಿಗೆ ಕರೆದೊಯ್ದು ಅತ್ಯಾಚಾರ..!ಗಾಝಾದ ಮೇಲೆ ಇಸ್ರೇಲ್’ನಿಂದ ಭಯೋತ್ಪಾದಕ ದಾಳಿ: ಪುಟ್ಟ ಮಕ್ಕಳು ಸೇರಿ 300 ಮಂದಿ ಮೃತ್ಯು