E-PAPER
17 Nov 2026, 05:18:42 PM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಬೆಳಗಾವಿಯ ಪ್ರೊ. ಆರ್. ಎಂ. ಕರಡಿಗುದ್ದಿ ಅವರು ಕನ್ನಡ, ಇಂಗ್ಲಿಷ್, ಮರಾಠಿ, ಸಂಸ್ಕೃತ ಭಾಷಾ ತಜ್ಞರಾಗಿ,ಫ. ಗು. ಹಳಕಟ್ಟಿ ಅವರ "ವಚನ ಶಾಸ್ತ್ರ ಸಾರ",(1967 ರಲ್ಲಿ) ಸಮಗ್ರ ವಚನ ಸಂಪುಟ ಭಾಗ 2 ರಿಂದ 9, ಮತ್ತು ಬಸವೋತ್ತರ ಕಾಲದ ಇನ್ನಿತರ ಶರಣರ ಆಯ್ದ ವಚನಗಳು ಹೀಗೆ ಒಟ್ಟು 18000 ವಚನಗಳನ್ನು ಮರಾಠಿಗೆ ಅನುವಾದಿಸಿದ್ದಾರೆ. ಈ ಕೃತಿಗಳು ಬಸವ ಸಮಿತಿ, ಮತ್ತು ಭಾಲ್ಕಿ ಶ್ರೀ ಮಠದಿಂದ ಪ್ರಕಟವಾಗಿವೆ. ಇತರ 8 ಕೃತಿಗಳನ್ನು ಕನ್ನಡದಿಂದ ಮರಾ ಠಿಗೆ ಅನುವಾದಿಸಿದ್ದಾರೆ. ಕನ್ನಡದಲ್ಲಿ 6 ಸ್ವತಂತ್ರ ಕೃತಿಗಳನ್ನು, ನೂರಾರು ಕನ್ನಡ ಮರಾಠಿ ಲೇಖನಗಳನ್ನು ರಚಿಸಿದ್ದಾರೆ. ಪ್ರಚಾರಪ್ರಿಯರಲ್ಲದ ಇವರು ತಮ್ಮ 88 ರ ಇಳಿವಯಸ್ಸಿನಲ್ಲಿ ಬರವಣಿಗೆಯಲ್ಲಿ ತೊಡಗಿದ್ದಾರೆ. ಇಷ್ಟೆಲ್ಲಾ ವಿಷಯಗಳನ್ನು, ಬೆಳಗಾವಿ ಜಿ. ಜನಪದ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಮೋಹನ್ ಗುಂಡ್ಲುರ್, ಮತ್ತು ಹಿರಿಯ ಸಾಹಿತಿ ಸ. ರಾ. ಸುಳಕೂಡೆ ಅವರೊಂದಿಗೆ ದಾವಣಗೆರೆ ಜಿ. ಹೊನ್ನಾಳಿಯ ಹಿರಿಯ ಸಾಹಿತಿ ಶ್ರೀ. ಯು. ಎನ್. ಸಂಗನಾಳಮಠ ಅವರು ಶ್ರೀ ಕರಡಿಗುದ್ದಿ ಅವರನ್ನು ಅವರ ಸ್ವಗೃಹದಲ್ಲಿ ಭೇಟಿ ಆಗಿ ವಿಚಾರ ವಿನಿಮಯ ಮಾಡಿ ಸಂಗ್ರಹಿಸಿದರು. ತಮ್ಮಷ್ಟಕ್ಕೆ ತಾವು ವಚನ ಸಾಹಿತ್ಯದ ಸೇವೆಯಲ್ಲಿ ತೊಡಗಿಕೊಂಡಿರುವ ಪ್ರೊ, ಕರಡಿಗುದ್ದಿ ಅವರಿಗೆ ಸುದೀರ್ಘ ಆಯುರಾರೋಗ್ಯವನ್ನು ದೇವರು ದಯಪಾಲಿಸಲಿ ಎಂದು ನಮ್ಮ ಪತ್ರಿಕಾ ಬಳಗದ ಹಾರೈಕೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಬೆಳಗಾವಿ ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ಪ್ರವೇಶ ಮತ್ತು ಅಭಿಮುಖೀಕರಣ ಕಾರ್ಯಕ್ರಮವೀರ ವನಿತೆ ಒನಕೆ ಓಬವ್ವ ಜಯಂತ್ಯೋತ್ಸವ ಕಾರ್ಯಕ್ರಮ - 2026ಮಂಡೋಳ್ಳಿಯಲ್ಲಿ ₹1.70 ಕೋಟಿ ವೆಚ್ಚದಲ್ಲಿ ಶ್ರೀ ಮಾರುತಿ ದೇವಸ್ಥಾನ ನಿರ್ಮಾಣ