K2kannadanews.in
https://youtu.be/ByMuP8TymeE?si=o-xjaoUD3fywKPmO
Train accident ವಾಡಿ ಜಂಕ್ಷನ್ : ವಾಡಿ ಜಂಕ್ಷನ್‌ನಿಂದ ರಾಯಚೂರು ಕಡೆಗೆ ಹೊರಟಿದ್ದ ಆಯಿಲ್ ಟ್ಯಾಂಕ್ ಹೊಂದಿದ ಗೂಡ್ಸ್ ರೈಲು ಹಳಿ ತಪ್ಪಿದ ಘಟನೆಯೊಂದು ಘಟನೆ ಭಾನುವಾರ ನಡೆದಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ರೈಲ್ವೆ ಜಂಕ್ಷನ್ ಬಳಿ ಘಟನೆ ಜರುಗಿದ್ದು, ಮಹಾರಾಷ್ಟ್ರದಿಂದ ಪೆನವಲ್‌ನಿಂದ ಆಂದ್ರದ ಗುಂತ್ಕಲ್‌ಗೆ ಹೊರಟಿದ್ದ ಡಿಸೆಲ್ ಟ್ಯಾಂಕರ್ ಗೂಡ್ಸ್ ರೈಲು, ಜಂಕ್ಷನ್‌ನಲ್ಲಿ ನಿಲ್ಲಿಸುವಾಗ ಮೂರು ಬೋಗಿಗಳು ಹಳಿ ತಪ್ಪಿವೆ. ಅದೃಷ್ಟವಶಾತ್ ಟ್ಯಾಂಕರ್‌ನಲ್ಲಿ ಡಿಸೆಲ್ ಇರಲಿಲ್ಲವಾದ್ದರಿಂದ ಹೆಚ್ಚಿನ ಅನಾಹುತ ಜರುಗಿಲ್ಲ ಎನ್ನಲಾಗುತ್ತಿದೆ.
https://youtu.be/xbisnA_J_Hw?si=YDeNZh-eO6OvEKMH
ತಕ್ಷಣವೇ ಅಲರ್ಟ್ ಆದ ವಾಡಿ ರೈಲ್ವೆ ಸಿಬ್ಬಂದಿಗಳು, ಹಳಿ ತಪ್ಪಿದ ಮೂರು ಬೋಗಿಗಳನ್ನ ಹಳಿಗೆ ತಂದ ರೈಲ್ವೆ ಸಿಬ್ಬಂದಿಗಳು, ರೈಲ್ವೆ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗದಂತೆ ಸರಿ ಪಡಿಸಿದ್ದಾರೆ. ರೈಲ್ವೇ ಇಲಾಖೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಈ ಅವಘಡ ನಡೆದಿದೆ ಎಂದು ಹೇಳಲಾಗುತ್ತಿದೆ. ಘಟನೆಗೆ ಸಂಬಂದಿಸಿದಂತೆ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.