Press ID & Credential Portal
Apply / Verify  ➔
LIVE TV LocalCrimeNationalInternationalPoliticsFinancialEducationTechnologyEntertainmentSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಕ್ಯಾಮೆರಾ ಗಾರುಡಿಗನ ಕಾಲು ಶತಮಾನದ ಸಾರ್ಥಕ ಸೇವೆ

ಬೆಳಗಾವಿ :- ಮಳೆ, ಹೊಲದಲ್ಲಿ ನಾಟಿ ಮಾಡುವುದು, ಉತ್ತುವುದು, ಬಿತ್ತುವುದು, ಹರಗುವುದು, ರೈತನ ನಲಿವು, ಅವನ ಕಷ್ಟದ ಸಂದರ್ಭಗಳನ್ನು, ಎತ್ತು ಎಮ್ಮೆಗಳೊಂದಿಗೆ ಆತನ ಪರಸ್ಪರ ಸಹಜೀವನದ ನಿತ್ಯ ಚಟುವಟಿಕೆಗಳನ್ನು ಬಿಂಬಿಸುತ್ತ ಇಂಬು ನೀಡುವ ಕೃಷಿಪ್ರೇಮಿ ಛಾಯಾಗ್ರಾಹಕನಾಗಿ, ವಿಶ್ವ ಶ್ರೇಷ್ಠ ನಾಯಕರು ಹಾಗೂ ರಾಷ್ಟ್ರಪತಿ, ಪ್ರಧಾನಿ ಸೇರಿದಂತಹ ರಾಷ್ಟ್ರೀಯ ನಾಯಕರು ಜಿಲ್ಲೆಗೆ ಭೇಟಿ ನೀಡಿದಾಗ ಸೆರೆಹಿಡಿದ ವಿಭಿನ್ನ ಭಂಗಿಗಳು, ವಿಮಾನ, ಹೆಲಿಕಾಪ್ಟರ್ ಮೂಲಕ ಸ್ಥಳ ವೀಕ್ಷಣೆ ಸಂದರ್ಭದಲ್ಲಿ ಜನನಾಯಕರ ಜೊತೆಗೆ ಕುಳಿತು ಕ್ಲಿಕ್ಕಿಸಿದ ಛಾಯಾಚಿತ್ರಗಳು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆವಷ್ಟು ಆಕರ್ಷಕ ಛಾಯಾಗ್ರಹಣ ಕಲೆಯನ್ನು ಮೈಗೂಡಿಸಿಕೊಂಡಿವೆ.

ಇಂದಿಗೆ 25 ವರ್ಷಗಳ ಸಾರ್ಥಕ ಸಾರ್ವಜನಿಕ ಫೋಟೋಗ್ರಾಫಿ ಸೇವೆ ನೀಡಿರುವ ಪಿ.‌ಕೆ. ಬಡಿಗೇರ ಅವರ ನೆನಪಾವಳಿಯು ಅಗಸ್ಟ ೧೯, ವಿಶ್ವ ಫೋಟೋಗ್ರಾಫಿ ದಿನದ ವಿಶೇಷ ಎನ್ನಿಸಿದೆ.



ಒಂದು ದೃಶ್ಯವನ್ನು ಸಾಮಾನ್ಯವಾಗಿ ನೋಡದೇ ತನ್ನ ಒಳಗಣ್ಣಿನಿಂದ ನೋಡಿ ವಿವಿಧ ಆಯಾಮಗಳಲ್ಲಿ ಅಳೆದು ತೂಗಿ, ತನ್ನೊಳಗೆ ತಾನೇ ಪರಾಮರ್ಶಿಸಿಕೊಂಡು, ನೋಡುಗರು ಹುಬ್ಬೇರಿಸುವಂತೆ ಮನತಟ್ಟುವಂತೆ ಸೆರೆಹಿಡಿದು ಛಾಯಾಚಿತ್ರಗಳನ್ನಾಗಿ ಪ್ರಸ್ತುತಪಡಿಸಲು ಕಲಾವಂತಿಕೆ ಇರಬೇಕು, ವೃತ್ತಿ ನೈಪುಣ್ಯತೆ ಇರಬೇಕು, ಸೂಕ್ಷ್ಮ ದೃಷ್ಟಿಕೋನದ ಜೊತೆಗೆ ಕ್ರಿಯಾಶೀಲ ಮನಸ್ಸಿರಬೇಕು ಹಾಗೂ ತಾಳ್ಮೆಯಿಂದ ಸೆರೆಹಿಡಿವ ದೃಢನಿಷ್ಠೆ ಇರಬೇಕು. ಇಷ್ಟೆಲ್ಲ ಗುಣಗಳನ್ನು ಮೈಗೂಡಿಸಿಕೊಂಡು ಮನಸ್ಸಿಗೆ ಆಹ್ಲಾದವನ್ನುಂಟು ಮಾಡುವ ಛಾಯಾಚಿತ್ರಗಳನ್ನು ಸೆರೆಹಿಡಿಯುವಲ್ಲಿ ನಿಷ್ಣಾತರು ಪಿ. ಕೆ. ಬಡಿಗೇರ. ತಮ್ಮ ಕ್ರಿಯಾಶೀಲ ಛಾಯಾಗ್ರಹಣ ಸೇವೆಯನ್ನೇ ವೃತ್ತಿ ಹಾಗೂ ಪ್ರವೃತ್ತಿಯನ್ನಾಗಿಸಿಕೊಂಡು ಇದನ್ನೇ ತಮ್ಮ ಉಸಿರಾಗಿಸಿಕೊಂಡಿದ್ದಾರೆ.



ಬಡಿಗೇರ ಅವರಿಗೆ ಒಲಿದ ಛಾಯಾಗ್ರಹಣ ಆಸಕ್ತಿಯ ಕಲೆಯನ್ನು ಇವರೇ ಸ್ವತಃ ಕಂಡುಕೊಂಡು ಬೆಳೆಸಿಕೊಂಡು ಹೋಗುತ್ತಿದ್ದಾರೆ. ಇವರ ಕುಟುಂಬದಲ್ಲಿ ಛಾಯಾಗ್ರಾಹಕ ಸೇವೆಯನ್ನು ಆರಂಭಿಸಿದ ಇವರೇ ಮೊದಲಿಗರು. ಇವರು ಮೂಲತಃ ಸವದತ್ತಿ ತಾಲೂಕಿನ ಮದ್ಲೂರ ಗ್ರಾಮದ ಬಡಿಗತನ ಕುಟುಂಬದಿಂದ ಬಂದಿದ್ದರೂ ತಂದೆಯವರಿಂದ ಕಲಿತ ಬಡಿಗತನ ಉದ್ಯೋಗವನ್ನೇ ಪೂರ್ಣಪ್ರಮಾಣದಲ್ಲಿ ನೆಚ್ಚಿಕೊಳ್ಳದೇ ಅದರ ಜೊತೆಗೆ ಸವದತ್ತಿಯ ತೋಂಟದಾರ್ಯ ಸಿದ್ಧಲಿಂಗೇಶ್ವರ ಮಹಾವಿದ್ಯಾಲಯದಲ್ಲಿ ಚಿತ್ರಕಲಾ ಶಿಕ್ಷಣವನ್ನು ಪಡೆದು ಬೆಳಗಾವಿಯಲ್ಲಿ ನೆಲೆ ನಿಂತು ಅಂಗಡಿ, ಕಚೇರಿಗಳ ನಾಮಫಲಕ ಬರೆಯುವುದು, ಪೇಂಟರ್ ಕೆಲಸ ಮಾಡುವುದು, ಜೊತೆ ಜೊತೆಗೆ ಶಿಕ್ಷಣ ಇಲಾಖೆಯಲ್ಲಿನ ಶಿಕ್ಷಕರಿಗೆ, ಡಿಇಡಿ, ಬಿಎಡ್ ಪ್ರಶಿಕ್ಷಣಾರ್ಥಿಗಳಿಗೆ ಪಾಠ ಮಾಡಲು ಪ್ರಾತ್ಯಕ್ಷಿಕೆಯಾಗಿ ಬಳಸುವ ಚಿತ್ರಪಟಗಳನ್ನು ಬರೆದು ಕೊಡುವ ಅರೆಕಾಲಿಕ ವೃತ್ತಿಯನ್ನು ಮಾಡಿದರು.



"ಶ್ರದ್ಧೆ, ನಿಷ್ಠೆಯಿಂದ ಕಲಿತ ಶಿಕ್ಷಣ ಎಂದಿಗೂ ನಮ್ಮ ಕೈಯನ್ನು ಬಿಡುವುದಿಲ್ಲ"ವೆಂಬಂತೆ ಅವರು ಕಲಿತ ಚಿತ್ರ ಕಲಾಶಿಕ್ಷಣ ಅವರ ಕೈಯನ್ನು ಬಿಡಲಿಲ್ಲ. ಅವರ ಕಲಾರಾಧನೆಯ ತಪಸ್ಸಿಗೆ ಒಲಿದದ್ದು 'ನಾಡೋಜʼ ಪತ್ರಿಕೆಯಲ್ಲಿ ಕಾರ್ಟೂನಿಷ್ಟ ಕೆಲಸ. ವ್ಯಂಗ್ಯ ಚಿತ್ರಕಾರರಾಗಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ಅವರು ತದನಂತರದಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮೂಲಕ ಪತ್ರಿಕಾ ಛಾಯಾಗ್ರಹಣ ಸೇವೆಗೆ ತಮ್ಮನ್ನು ತಾವು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಸುಮಾರು ಎರಡು ದಶಕಗಳ ಕಾಲಾವಧಿಯಲ್ಲಿ ದಿ ಹಿಂದೂ, ಉದಯವಾಣಿ ದಿನಪತ್ರಿಕೆಗಳು ಸೇರಿದಂತೆ ಕನ್ನಡ, ಇಂಗ್ಲೀಷ, ಹಿಂದಿ, ಮರಾಠಿ ಪತ್ರಿಕೆಗಳಲ್ಲಿ ತಮ್ಮ ಅಮೋಘ ಸೇವೆ ಧಾರೆಯೆರೆದಿದ್ದಾರೆ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಛಾಯಾಗ್ರಾಹಕರಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.



ಉತ್ತಮ ಛಾಯಾಚಿತ್ರಕಾರನ ಒಳನೋಟ ತೀಕ್ಷ್ಣವಾಗಿದ್ದು ಆ ಸಂಧರ್ಭ,ಪ್ರಸಂಗ ಹಾಗೂ ಘಟನೆಗಳನ್ನು ಒಂದೇ ಛಾಯಾಚಿತ್ರದಲ್ಲಿ ಸೆರೆಹಿಡಿದು ನೋಡುಗರಿಗೆ ಒಟ್ಟಾರೆ ಆ ಕ್ಷಣದ ಸಮಗ್ರ ಸನ್ನಿವೇಶಗಳನ್ನು ಬಿಂಬಿಸುವಂತ ಪ್ರಜ್ಞೆಯನ್ನು ಛಾಯಾಗ್ರಾಹಕ ಹೊಂದಿರಬೇಕು. ಇಂತಹ ತೀಕ್ಷ್ಣಗುಣ ಹೊಂದಿದ ಬಡಿಗೇರ ಅವರು ತಮ್ಮ ಪತ್ರಿಕಾ ಛಾಯಾಗ್ರಹಣ ವೃತ್ತಿಯೊಂದಿಗೆ, ಜನಮನ ತಣಿಸುವಂತಹ ಸುಂದರ ಛಾಯಾಚಿತ್ರಗಳನ್ನು ಸೆರೆಹಿಡಿದು ಹವ್ಯಾಸಿ ಛಾಯಾಗ್ರಾಹಕರಾಗಿಯೂ ತಮ್ಮ ಕಲೆಯಲ್ಲಿ ಸಿದ್ಧಹಸ್ತರಾಗಿದ್ದಾರೆ. ಸೂರ್ಯೋದಯ, ಸೂರ್ಯಾಸ್ತ, ಬೆಟ್ಟ ಗುಡ್ಡಗಳ ಸೃಷ್ಟಿಯ ಸುಂದರತೆ ಹಾಗೂ ವಿವಿಧ ಜಾತಿಯ ಪ್ರಾಣಿಗಳು, ದೇಶ ವಿದೇಶಗಳಿಂದ ಆಗಮಿಸಿದ ಪಕ್ಷಿ ಸಂಕುಲಗಳ ಅಪರೂಪದ ಚಲನವಲನಗಳನ್ನು ಕ್ಲಿಕ್ಕಿಸಿ ವನ್ಯಜೀವಿ ಛಾಯಾಗ್ರಾಹಕರಾದರೆ, ಅತೀವೃಷ್ಟಿ, ಪ್ರವಾಹದಂತ ಪ್ರಕೃತಿ ವಿಕೋಪ ಪೀಡಿತ ಸ್ಥಳಗಳಿಗೆ ತೆರಳಿ ತಮ್ಮ ಜೀವವನ್ನೂ ಲೆಕ್ಕಿಸದೇ ಜನರು ಅನುಭವಿಸುವ ಹೃದಯವಿದ್ರಾವಕ ಚಿತ್ರಣಗಳನ್ನು ಸರೆಹಿಡಿದು ಸರ್ಕಾರದ, ಸಮಾಜದ ಗಮನ ಸೆಳೆದು ಶೀಘ್ರಗತಿಯಲ್ಲಿ ಪರಿಹಾರೋಪಾಯಗಳನ್ನು ಕೈಗೊಳ್ಳಬೇಕೆಂದು ಕಾಳಜಿ ವ್ಯಕ್ತಪಡಿಸಿ ಮನಮಿಡಿವ ಸಾಮಾಜಿಕ ಕಳಕಳಿಯ ಛಾಯಾಗ್ರಾಹಕರೂ ಆಗಿದ್ದಾರೆ.



ಸಭೆ, ಸಮಾರಂಭ, ಅಧಿವೇಶನಗಳ ಸ್ವಾರಸ್ಯಕರ ಪ್ರಸಂಗಗಳನ್ನು ಸೆರೆಹಿಡಿದು ಜನರೆದುರಿಗೆ ಇಡುವ ವಾಸ್ತವತಾವಾದಿ ಛಾಯಾಗ್ರಾಹಕರಾಗಿ, ಅನಿರೀಕ್ಷಿತವಾಗಿ ಲಗ್ಗೆಯಿಟ್ಟ ಕೊರೋನಾ ಹಾವಳಿಗೆ ಕ್ಷಿಪ್ರವಾಗಿ ಬದಲಾದ ಜನಜೀವನದಲ್ಲಿ ಸ್ವಯಂರಕ್ಷಣಾ ಸಾಧನಗಳಾಗಿ ಕಾಣಿಸಿಕೊಂಡ ಮಾಸ್ಕ ಸ್ಯಾನಿಟೈಸರ್ ಬಳಕೆಗೆ ಮುಂದಾಗಿ ಮಾಸ್ಕದಿಂದ ಅರ್ಧ ಮುಚ್ಚಿದ ಮುಖಗಳನ್ನು, ಲಾಕಡೌನ್ ಆದೇಶಗಳಿಂದ ಜನರು ಮತ್ತು ವಾಹನಗಳಿಂದ ಮುಕ್ತವಾಗಿ ಬಿಕೋ ಎನ್ನುವ ರಸ್ತೆಗಳು, ಸಿಟಿ ಮಾರ್ಕೆಟಗಳು, ತಮ್ಮ ಜೀವ ಪಣಕ್ಕಿಟ್ಟು ಜನರಿಗೆ ಹೊರಬರದಂತೆ ವಿನಂತಿಸುವ ಹಾಗೂ ಅಡ್ಡವಾಗಿ ಬ್ಯಾರಿಕೇಡ್ ಇಟ್ಟು ಲಾಠಿ ಹಿಡಿದುಕೊಂಡು ಕಾವಲು ಕಾಯುವ ಪೋಲಿಸರ ಶ್ರಮವನ್ನು, ಆರೋಗ್ಯ ಇಲಾಖೆಯ ಸೇವೆಯನ್ನು, ಜೀವನ ನಡೆಸಲು ಕಷ್ಟವಾಗಿ ಊರುಬಿಟ್ಟು ಹೊರಡುವ ನಿರ್ಗತಿಕ ಜನರ ಕಷ್ಟಗಳನ್ನು, ಮನೆಯಲ್ಲಿಯೇ ಲಾಕ್ ಆದ ಅಸಹಾಯಕ ಜನರ ಹತಾಶೆಯನ್ನು ಸೆರೆಹಿಡಿವ ಪ್ರಸ್ತುತೆಯ ಛಾಯಾಗ್ರಾಹಕರಾಗಿ, ಸುವರ್ಣಸೌಧ ನಿರ್ಮಾಣ, ವಿವಿಧ ಕಟ್ಟಡಗಳ ಅಡಿಗಲ್ಲು ಸಮಾರಂಭಗಳು, ಕಿತ್ತೂರು ಚೆನ್ನಮ್ಮ,ಬೆಳವಡಿ ಮಲ್ಲಮ್ಮ ಆದಿ ನಾಡಿನಲ್ಲಿ ನಡೆಯುವ ಉತ್ಸವಗಳು, ಹಬ್ಬಗಳು, ವಿಶ್ವಕನ್ನಡ ಸಮ್ಮೇಳನ, ಜಿಲ್ಲಾ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳು ಹಾಗೂ ವಿವಿಧ ಮುಷ್ಕರ, ಹೋರಾಟ, ಪ್ರತಿಭಟನೆಗಳು ಹೀಗೆ ಇತಿಹಾಸದಲ್ಲಿ ದಾಖಲಾಗುವಂತೆ ಛಾಯಾಚಿತ್ರಗಳನ್ನು ಸೆರೆಹಿಡಿವ ಐತಿಹಾಸಿಕ ಛಾಯಾಗ್ರಾಹಕರಾಗಿ ಅಷ್ಟೇ ಅಲ್ಲದೇ ರೈತನ ಮುಖ ಅರಳಿಸುವ ಮಳೆ, ಹೊಲದಲ್ಲಿ ನಾಟಿ ಮಾಡುವುದು, ಉತ್ತುವುದು, ಬಿತ್ತುವುದು, ಹರಗುವುದು ರೈತನ ನಲಿವು, ಅವನ ಕಷ್ಟದ ಸಂಧರ್ಭಗಳನ್ನು ಎತ್ತು, ಎಮ್ಮೆಗಳೊಂದಿಗೆ ಆತನ ಪರಸ್ಪರ ಸಹಜೀವನದ ನಿತ್ಯ ಚಟುವಟಿಕೆಗಳನ್ನು ಬಿಂಬಿಸುತ ಇಂಬು ನೀಡುವ ಛಾಯಾಗ್ರಾಹಕರಾಗಿ, ವಿಶ್ವ ಶ್ರೇಷ್ಠ ಹಾಗೂ ದೇಶದ ಮಹಾನ್ ನಾಯಕರು ಜಿಲ್ಲೆಗೆ ಭೇಟಿ ಕೊಟ್ಟಾಗ ಸೆರೆಹಿಡಿದ ವಿಭಿನ್ನ ಭಂಗಿಗಳು, ವಿಮಾನ ಹೆಲಿಕಾಪ್ಟರ ಮೂಲಕ ವೀಕ್ಷಣೆ ಸಂಧರ್ಭದಲ್ಲಿ ಜನನಾಯಕರ ಜೊತೆಗೆ ಕೂತು ಕ್ಲಿಕ್ಕಿಸಿದ ಛಾಯಾಚಿತ್ರಗಳು, ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆವಷ್ಟು ಆಕರ್ಷಕ ಛಾಯಾಗ್ರಹಣ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ.



ಪಿ. ಕೆ. ಬಡಿಗೇರ ಅವರು ತಾವು ಸೆರೆ ಹಿಡಿದ ಉತ್ಕೃಷ್ಟ ಛಾಯಾಚಿತ್ರಗಳನ್ನು ಒಂದೆಡೆ ಸೇರಿಸಿ ಬೆಳಗಾವಿ, ಧಾರವಾಡ , ಬೆಂಗಳೂರಿನಲ್ಲಿ ಛಾಯಾಚಿತ್ರ ಪ್ರದರ್ಶನಗಳನ್ನು ಏರ್ಪಡಿಸಿ ನೋಡುಗರ ಕಣ್ಣುಗಳಿಗೆ ರಸದೌತನ ಉಣಬಡಿಸಿದ್ದಾರೆ. ಬೆಳಗಾವಿಯಲ್ಲಿ ಪ್ರವಾಹ ಬಂದಾಗ ನೆರೆ ಸಂತ್ರಸ್ತರ ದಾರುಣ ಸ್ಥಿತಿಯನ್ನು, ನಿರ್ಗತಿಕರಾದವರ ಪರಿಹಾರ ಕಾರ್ಯವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದ ಚಿತ್ರಗಳ ಪ್ರದರ್ಶನ ಮನೋಜ್ಞವಾಗಿದ್ದು ಮುಖ್ಯಮಂತ್ರಿಯವರ ಗೌರವಕ್ಕೆ ಪಾತ್ರವಾಗಿದ್ದು ಹಾಗೂ ಜನಮೆಚ್ಚುಗೆ ಗಳಿಸಿದ್ದು ಇವರ ಛಾಯಾಗ್ರಹಣ ವೃತ್ತಿಗೆ ಸಂದ ಗೌರವವಾಗಿದೆ.



ಪ್ರಶಸ್ತಿಗಳು :



ನಿಷ್ಠೆ, ವೃತ್ತಿ ಕೌಶಲ್ಯಕ್ಕೆ ಮೆಚ್ಚಿ ಅನೇಕ ಪ್ರಶಸ್ತಿಗಳು ಅವರಿಗೆ ಒಲಿದು ಬಂದಿವೆ. ಧಾರವಾಡ ಆರ್. ಕೆ. ಛಾಯಾ ಫೌಂಡೇಶನ್ ಮತ್ತು ಸೃಷ್ಟಿ ಸಂಘಟನೆಯಿಂದ ಕೊಡಮಾಡುವ ʼಬಿಂಬ-ಭಾವ' ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ. 'ಬಾಬುರಾವ್ ಠಾಕೂರ್ ಅತ್ಯುತ್ತಮ ಛಾಯಾಗ್ರಾಹಕ 'ಪ್ರಶಸ್ತಿ, ನಾಡಿನ ಪ್ರತಿಷ್ಠಿತ ಮಠಗಳು, ಧಾರ್ಮಿಕ ಕೇಂದ್ರಗಳು ಹಾಗೂ ಸಮಾಜ ಸೇವೆ, ಕಲಾಸೇವೆಯಲ್ಲಿ ತೊಡಗಿರುವ ವಿವಿಧ ಅರೆ ಸರ್ಕಾರಿ ಸೇವಾ ಸಂಘ, ಸಂಸ್ಥೆಗಳು ಇವರ ಉತ್ತಮ ಛಾಯಾಗ್ರಹಣ ಸೇವೆಯನ್ನು ಮೆಚ್ಚಿ ಸನ್ಮಾನ, ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಿವೆ. ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿನ ಸರ್ಕಾರಿ ಕಾರ್ಯಕ್ರಮಗಳ ಛಾಯಾಚಿತ್ರಗಳನ್ನು ಸೆರೆಹಿಡಿದು ಸರಕಾರಿ ವಲಯದಿಂದಲೂ ಅವರು ಪ್ರಶಂಸೆ ಗಿಟ್ಟಿಸಿದ್ದಾರೆ.







 



 



 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಸೆಂಬರ್ 7ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸಾಧ್ಯತೆಎಂಎಸ್‌ಪಿ ಆಧರಿಸಿ ಕಬ್ಬಿಗೆ ದರ: ಡಿ.ಕೆ. ಶಿವಕುಮಾರಮತದಾರರ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಿಚುನಾವಣಾ ಆಯೋಗದ ಸಮರ್ಥನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶಸಚಿವ ಜಿ. ಪರಮೇಶ್ವರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು‘ಬಟ್ಟೆ ಹರಿದು ರಕ್ತಸ್ರಾವವಾಗಿತ್ತು’: ಟ್ರಂಪ್ ವಿರುದ್ಧ ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ ಅತ್ಯಾಚಾರ ಆರೋಪ!ಮತದಾರರ ಪಟ್ಟಿಯಿಂದ 1 ಕೋಟಿ ಹೆಸರು ಡಿಲೀಟ್!ಕಬ್ಬಿನ ದರ ನಿಗದಿ ಸಭೆಯಲ್ಲಿ ರೈತ ಮುಖಂಡರ ಮಾರಾಮಾರಿ: ಸುವರ್ಣಸೌಧದಲ್ಲೇ ಕೈಕೈ ಮಿಲಾಯಿಸಿದ ಎರಡು ಬಣಗಳು!ಕನ್ನಡಿಗರಿಗೆ ಉದ್ಯೋಗ ನಿರಾಕರಿಸಿದರೆ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ: ಡಿ.ಕೆ. ಶಿವಕುಮಾರಜಲವಿದ್ಯುತ್ ಯೋಜನೆ ವಿರೋಧಿಸಿ ಅರುಣಾಚಲದಲ್ಲಿ ಹಿಂಸಾಚಾರ: ಭದ್ರತಾ ಪಡೆಯ ಎರಡು ತುಕಡಿ ರವಾನೆ