LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
💛

💛 ಸ್ವತಂತ್ರ ಪತ್ರಿಕೋದ್ಯಮ ಬೆಂಬಲಿಸಲು ಲೇಖನದ ಕೆಳಭಾಗದಲ್ಲಿ UPI ಮೂಲಕ ಕಾಣಿಕೆ ನೀಡಿ!

State News

AI ಕ್ರಾಂತಿ: ಭಾರತದಲ್ಲಿ ಉದ್ಯೋಗ ಕಡಿತಕ್ಕಿಂತ ಹೊಸ ನೇಮಕಾತಿಯೇ ಹೆಚ್ಚು! Nomura ವರದಿ

ಕೃತಕ ಬುದ್ಧಿಮತ್ತೆಯು (AI) ಉದ್ಯೋಗ ಕಡಿತಗೊಳಿಸುತ್ತಿದೆ ಎಂಬ ಆತಂಕದ ನಡುವೆಯು, ಭಾರತದಲ್ಲಿ ಎಐ ಉದ್ಯೋಗ ಕಡಿತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂದು ನೋಮುರಾ (Nomura) ವರದಿ ತಿಳಿಸಿದೆ.

ದಾಖಲಾದ 31,921 ಉದ್ಯೋಗ ನಷ್ಟ ಹಾಗೂ ಉದ್ಯೋಗಿDಗಳ ನಿರ್ಗಮನಕ್ಕೆ ಹೋಲಿಸಿದರೆ, ಎಐ ನೇಮಕಾತಿಯು 83,100 ತಲುಪಿದೆ. ಈ ಸಂಶೋಧನೆಯು ಎಐ ನಿಂದ ಭಾರತದ ಉದ್ಯೋಗ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಆದರೆ, ಇದು ಸಾಂಪ್ರದಾಯಿಕ ಪಾತ್ರಗಳಿಗೆ ಹಾನಿ ಮಾಡುತ್ತಿದ್ದು, ಪ್ರವೇಶ ಹಂತದ (ಎಂಟ್ರಿ-ಲೆವೆಲ್) ಕಾರ್ಮಿಕರ ಬೇಡಿಕೆಯನ್ನು ತಗ್ಗಿಸುತ್ತಿದೆ.
​ತನ್ನ ಏಷ್ಯಾ ಎಕನಾಮಿಕ್ ಮಂತ್ಲಿ ವರದಿಯಲ್ಲಿ, ಭಾರತವು ಉದ್ಯೋಗ ಸೃಷ್ಟಿ ಹಾಗೂ ಉದ್ಯೋಗ ಕಡಿತ ಎರಡರಲ್ಲೂ ಮುಂಚೂಣಿಯಲ್ಲಿದ್ದು, ಎಐ ನಿಂದ ಏಷ್ಯಾದಲ್ಲೇ ಅತಿ ದೊಡ್ಡ ಪ್ರಭಾವಕ್ಕೆ ಒಳಗಾಗುತ್ತಿದೆ ಎಂದು ನೋಮುರಾ ಹೇಳಿದೆ. ಭಾರತದ ಜನಸಂಖ್ಯೆ ಮತ್ತು ಜಾಗತಿಕ ಬ್ಯಾಕ್-ಆಫೀಸ್ ಹಬ್ ಆಗಿರುವ ಸ್ಥಾನವು ಎಐ ಪ್ರಭಾವವನ್ನು ಪರೀಕ್ಷಿಸಲು ಪ್ರಮುಖ ಮಾರುಕಟ್ಟೆಯನ್ನಾಗಿ ಮಾಡಿದೆ. ಏಷ್ಯಾದ ಆರ್ಥಿಕತೆಗಳಲ್ಲಿ ಸೃಷ್ಟಿಯಾದ ಸುಮಾರು 1.31 ಲಕ್ಷ ಎಐ-ಸಂಬಂಧಿತ ಉದ್ಯೋಗಗಳಲ್ಲಿ 83,100 ಭಾರತದಲ್ಲೇ ಇವೆ ಎಂದು ನೋಮುರಾ ದತ್ತಾಂಶವು ತೋರಿಸಿದೆ. ಮತ್ತೊಂದೆಡೆ, ಸಮೀಕ್ಷೆ ನಡೆಸಿದ ದೇಶಗಳ ಪೈಕಿ ಭಾರತದಲ್ಲೇ ಅತಿ ಹೆಚ್ಚು ಅಂದರೆ 31,921 ಎಐ-ಸಂಬಂಧಿತ ಉದ್ಯೋಗ ಕಡಿತಗಳು ದಾಖಲಾಗಿವೆ. ಒಟ್ಟಾರೆ ನೇಮಕಾತಿಯು ಉದ್ಯೋಗ ನಷ್ಟವನ್ನು ಮೀರಿದ್ದರೂ, ಈ ಲಾಭವು ಎಲ್ಲಾ ಕಾರ್ಮಿಕರಿಗೆ ಸಮಾನವಾಗಿ ಹಂಚಿಕೆಯಾಗಿಲ್ಲ.


​ಕಂಪನಿಗಳು ದಿನನಿತ್ಯದ ಸಾಂಪ್ರದಾಯಿಕ ಕೆಲಸಗಳನ್ನು ಸ್ವಯಂಚಾಲಿತಗೊಳಿಸುತ್ತಿರುವುದರಿಂದ, ಬ್ಯಾಂಕಿಂಗ್ ಬ್ಯಾಕ್-ಆಫೀಸ್ ಕಾರ್ಯಾಚರಣೆಗಳು, ಗ್ರಾಹಕ ಸೇವೆ ಮತ್ತು ಗುಣಮಟ್ಟ ಪರೀಕ್ಷೆ ಹಾಗೂ ಕೋಡಿಂಗ್‌ನಂತಹ ಜೂನಿಯರ್ ತಾಂತ್ರಿಕ ಪಾತ್ರಗಳು ಎಐ ನಿಂದ ಸ್ಥಳಾಂತರಗೊಳ್ಳುತ್ತಿವೆ. ಶೇಕಡಾ 55 ರಷ್ಟು ಕಂಪನಿಗಳು ಪ್ರವೇಶ ಹಂತದ ನೇಮಕಾತಿಯಲ್ಲಿ ಕುಸಿತವನ್ನು ವರದಿ ಮಾಡಿವೆ ಎಂದು ಐಸಿಆರ್‌ಐಇಆರ್ (ICRIER) ಸಮೀಕ್ಷೆ ತಿಳಿಸಿದೆ. ನೇರವಾಗಿ ಉದ್ಯೋಗದಿಂದ ತೆಗೆದುಹಾಕುವುದಕ್ಕಿಂತ ಕ್ಯಾಂಪಸ್ ನೇಮಕಾತಿಯನ್ನು ತಗ್ಗಿಸುವ ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ನಿಧಾನಗೊಳಿಸಲಾಗುತ್ತಿದೆ. ಹೊಸ ಎಐ-ಸಂಬಂಧಿತ ಉದ್ಯೋಗಗಳಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ತಂತ್ರಜ್ಞಾನ ವಲಯದಲ್ಲೇ ಕೇಂದ್ರೀಕೃತವಾಗಿವೆ ಎಂದು ನೋಮುರಾ ತಿಳಿಸಿದೆ.

ಮಾಧ್ಯಮ ಬೆಂಬಲಿಸಿ / Support Local Journalism

ನಿಮ್ಮ ಬೆಂಬಲ ಸ್ವತಂತ್ರ ಪತ್ರಿಕೋದ್ಯಮವನ್ನು ಜೀವಂತವಾಗಿರಿಸುತ್ತದೆ. Scan & Pay directly via PhonePe, GPay or Paytm.

0% Gateway Commission — Money goes 100% directly into publisher bank account.
Scan with Any UPI App
Scan QR Code to Support News via UPI
Pre-filled: ₹10.00
UPI ID: khushihost1@ybl
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
SHOCKING: ಬೆಂಗಳೂರಿನ ಸ್ಟಾರ್‌ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ: ಅವಧಿ ಮೀರಿದ ಹಾಲು, ಮಾಂಸ, ಮೀನು ಪತ್ತೆ!ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ, 40 ದಾಟಿದ ನಂತರ ಕಣ್ಣಿನ ಪರೀಕ್ಷೆ ಮಾಡಿಸಿ: ಸಾಗರದಲ್ಲಿ ASP ಡಾ.ಬೆನಕ ಪ್ರಸಾದ್ ಸಲಹೆBIG NEWS: ಸಾಗರದಲ್ಲಿ 'ನಕಲಿ ನೋಟ್' ಜಾಲ ಸಕ್ರಿಯ: ವ್ಯಾಪಾರಿಗಳು, ಸಾರ್ವಜನಿಕರು ಜಾಗೃತರಾಗಿರಲು 'ಸುಭಾಷ್ ಕೌತಳ್ಳಿ' ಮನವಿಶಾಸಕರ ಅಭಿವೃದ್ಧಿ ಶೂನ್ಯ, ಆಡಳಿತಕ್ಕೆ ಜನರೇ ಉತ್ತರಿಸಲಿದ್ದಾರೆ: ಸಾಗರದಲ್ಲಿ ಬಿಜೆಪಿ ನಾಯಕರು ವಾಗ್ದಾಳಿಸಮಾಜವನ್ನು ಎಚ್ಚರಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು: ಸಾಗರದಲ್ಲಿ ಪೌರಾಯುಕ್ತ ಎಚ್.ಕೆ. ನಾಗಪ್ಪ ಅಭಿಪ್ರಾಯಜೈಸ್ವಾಲ್‌ನನ್ನು ತಂಡದಿಂದ ಹೊರಗೆ ಕಳುಹಿಸಿದ್ದು 4 ಪಂದ್ಯಗಳ ನಿಷೇಧದಿಂದ ರಕ್ಷಿಸಲು: ಅಜಿಂಕ್ಯ ರಹಾನೆ ಸ್ಪೋಟಕ ಹೇಳಿಕೆ!AI ಕ್ರಾಂತಿ: ಭಾರತದಲ್ಲಿ ಉದ್ಯೋಗ ಕಡಿತಕ್ಕಿಂತ ಹೊಸ ನೇಮಕಾತಿಯೇ ಹೆಚ್ಚು! Nomura ವರದಿಕ್ಲೀನ್ ಅಪ್ ಬೆಂಗಳೂರಿಗೆ ಆಂದೋಲನದ ರೂಪ ನೀಡಿದ ಬೆಸ್ಕಾಂ: ಎಂಡಿ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಬಿಡದಿ ಟೌನ್ ಶಿಪ್ ಅಭಿಪ್ರಾಯಗಳ ಸಮಗ್ರ ಪರಿಶೀಲನೆಗೆ ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರಚನೆBREAKING: ಮೊಜ್ತಬಾ ಖಮೇನೇಯಿ ಆರೋಗ್ಯ ಸ್ಥಿತಿ ಗಂಭೀರ! ಇರಾನ್‌ನಲ್ಲಿ ಸಾವಿನ ವದಂತಿ !