Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಕೃಷ್ಣಾ ನದಿಯಲ್ಲಿ ಮರಳು ದಂದೆ ಆರೋಪ

ವಿಶೇಷ ವರದಿ: ಲಕ್ಷ್ಮೀಕಾಂತ ನಾಯಕ

ಶಹಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕೊಳ್ಳೂರು ಎಂ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೃಷ್ಣಾ ನದಿ ತೀರ… ಹಗಲು ಹೊತ್ತಿನಲ್ಲಿ ಶಾಂತವಾಗಿ ಹರಿಯುವ ನದಿ, ರಾತ್ರಿ ಹೊತ್ತಿಗೆ ಮಾತ್ರ ವಿಚಿತ್ರ ಗದ್ದಲಗಳಿಗೆ ಸಾಕ್ಷಿಯಾಗುತ್ತಿದೆ ಎನ್ನುವ ಮಾತುಗಳು ಗ್ರಾಮಸ್ಥರ ನಡುವೆ ಹರಿದಾಡುತ್ತಿವೆ. ಜಿಲ್ಲಾಧಿಕಾರಿಗಳು ಮರಳು ಗಣಿಗಾರಿಕೆಗೆ ನಿಷೇಧ ಹೇರಿದ ಪ್ರದೇಶದಲ್ಲೇ ಹಿಟಾಚಿ ಮತ್ತು ಜೆಸಿಬಿ ಯಂತ್ರಗಳು ನದಿಯೊಳಗೆ ಇಳಿದು ಮರಳನ್ನು ಎತ್ತಿಕೊಳ್ಳುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.

ಸ್ಥಳೀಯರು ಹೇಳುವ ಪ್ರಕಾರ, ಈ ದಂದೆ ಯಾವುದೇ ಒಂದು ದಿನದ ಕಥೆಯಲ್ಲ. ತಿಂಗಳಿನಿಂದ ರಾತ್ರಿ ಹೊತ್ತು ಆರಂಭವಾಗುವ ಚಟುವಟಿಕೆಗಳು ಬೆಳಗಿನ ಜಾವಕ್ಕೆ ಮುಕ್ತಾಯವಾಗುತ್ತಿವೆ. ಮೊದಲು ಟ್ರ್ಯಾಕ್ಟರ್‌ಗಳಲ್ಲಿ ಮರಳು ತುಂಬಿ ಒಂದು ಕಡೆ ಸಂಗ್ರಹಿಸಿ, ನಂತರ ಲಾರಿಗಳಲ್ಲಿ ಸಾಗಿಸಲಾಗುತ್ತದೆ. ಈ ಕಾರ್ಯಾಚರಣೆ ಇಷ್ಟು ವ್ಯವಸ್ಥಿತವಾಗಿ ನಡೆಯುತ್ತಿರುವುದರಿಂದ ಇದರ ಹಿಂದೆ ಪ್ರಭಾವಿ ಕೈಗಳಿರಬಹುದೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.

ನಿಷೇಧದ ನಡುವೆಯೇ ದಂದೆ – ಯಾರು ಹೊಣೆ?


ಕೃಷ್ಣಾ ನದಿ ತೀರದಲ್ಲಿ ಗಣಿಗಾರಿಕೆಗೆ ನಿಷೇಧವಿದೆ ಎಂಬುದು ಸರ್ಕಾರದ ದಾಖಲೆಗಳಲ್ಲೇ ಉಲ್ಲೇಖವಾಗಿದೆ. ಆದರೆ ನೆಲದ ವಾಸ್ತವ ಚಿತ್ರ ಭಿನ್ನವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. “ನಿಷೇಧ ಕಾಗದದಲ್ಲೇ ಉಳಿದಂತಾಗಿದೆ” ಎನ್ನುವ ಮಾತುಗಳು ಗ್ರಾಮ ಸಭೆಗಳಲ್ಲಿ ಕೇಳಿಬರುತ್ತಿವೆ. ನದಿ ತೀರದಲ್ಲಿ ಕಾಣುವ ಯಂತ್ರಗಳ ಗುರುತುಗಳು ಮತ್ತು ಮರಳು ತೆಗೆಯಲ್ಪಟ್ಟ ಸ್ಥಳಗಳು ಜೀವಂತ ಸಾಕ್ಷಿಗಳಂತೆ ಉಳಿದಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

112 ಕರೆಗೂ ಫಲ ಇಲ್ಲವೇ?


ಅಕ್ರಮ ಗಣಿಗಾರಿಕೆಯನ್ನು ವಿರೋಧಿಸುವ ಕೆಲವರು ರಾತ್ರಿ ವೇಳೆ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆದರೆ ಪೋಲಿಸರು ಬರುವಷ್ಟರಲ್ಲಿ ಮರಳು ದಂದೆಕೋರರು ಪರಾರಿಯಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. “ಪೋಲಿಸರು ಬರುತ್ತಿದ್ದಾರೆ ಎಂಬ ಮಾಹಿತಿ ಮುಂಚಿತವಾಗಿ ಹೇಗೆ ಸೋರಿಕೆಯಾಗುತ್ತದೆ?” ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ ಗಂಭೀರ ಅನುಮಾನ ಹುಟ್ಟಿಸಿದೆ. ಚೆಕ್‌ ಪೋಸ್ಟ್ ಸಿಬ್ಬಂದಿಗಳ ಕೈವಾಡದ ಬಗ್ಗೆ ಮಾತುಕತೆಗಳೂ ನಡೆಯುತ್ತಿವೆ, ಆದರೆ ಅಧಿಕೃತವಾಗಿ ಯಾರೂ ಇದನ್ನು ದೃಢಪಡಿಸಿಲ್ಲ.

ಪೋಲಿಸ್‌ ಪ್ರತಿಕ್ರಿಯೆ – ‘ಗಮನಕ್ಕೆ ಬಂದಿಲ್ಲ’


ಸ್ಥಳೀಯ ಪೊಲೀಸ್ ಬೀಟ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ತಮ್ಮ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ. “ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳುತ್ತೇವೆ” ಎನ್ನುವುದು ಅವರ ಉತ್ತರ. ಆದರೆ ಗ್ರಾಮಸ್ಥರು ಹೇಳುವ ಘಟನೆಗಳು ಮತ್ತು ನದಿಯಲ್ಲಿನ ಬದಲಾವಣೆಗಳು ಅಧಿಕಾರಿಗಳ ಹೇಳಿಕೆಗಳಿಗೆ ವಿರುದ್ಧವಾಗಿ ಕಾಣಿಸುತ್ತಿವೆ.

ಗ್ರಾಮದ ಮೇಲೆ ಪರಿಣಾಮ


ರಾತ್ರಿ ಹೊತ್ತು ಸಾಗುವ ಟ್ರ್ಯಾಕ್ಟರ್‌ಗಳು ಮತ್ತು ಲಾರಿಗಳ ಸಂಚಾರದಿಂದ ಧೂಳು ಹೆಚ್ಚಾಗಿದೆ. ಸಿಸಿ ರಸ್ತೆಗಳಿಲ್ಲದ ಕಾರಣ ಗ್ರಾಮಸ್ಥರ ಜೀವನ ಕಷ್ಟಕರವಾಗಿದೆ. ನಿದ್ರಾಭಂಗ, ವಾಹನಗಳ ಶಬ್ದ, ಮತ್ತು ಪ್ರಶ್ನಿಸುವವರ ಮೇಲೆ ಒತ್ತಡ ಇವೆಲ್ಲವೂ ಜನರಲ್ಲಿ ಅಸಮಾಧಾನ ಹೆಚ್ಚಿಸುತ್ತಿವೆ. “ಸಕ್ರಮವಾಗಿ ಗಣಿಗಾರಿಕೆ ನಡೆದರೆ ಯಾರಿಗೂ ತೊಂದರೆ ಇಲ್ಲ; ಆದರೆ ಕತ್ತಲಲ್ಲಿ ನಡೆಯುವ ದಂದೆ ಅಪಾಯಕರ” ಎಂಬುದು ಸಾರ್ವಜನಿಕರ ಅಭಿಪ್ರಾಯ.

ವಿರೋಧಿಗಳೇ ಆರೋಪದ ಗುರಿ?


ಗ್ರಾಮದಲ್ಲಿ ಹರಿದಾಡುತ್ತಿರುವ ಮತ್ತೊಂದು ಮಾತು – ಈ ಹಿಂದೆ ‘ಕೃಷ್ಣಾ ನದಿ ಉಳಿಸಿ’ ಎಂದು ಸರ್ಕಾರದ ಇಲಾಖೆಗೆ ದೂರು ನೀಡಿದವರೇ ಈಗ ಈ ದಂದೆಯ ಹಿಂದೆ ಇದ್ದಾರೆ ಎಂಬ ವದಂತಿ. ಇದು ಸತ್ಯವೇ ಅಥವಾ ರಾಜಕೀಯ ಆರೋಪವೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈ ಮಾತುಗಳು ಗ್ರಾಮದಲ್ಲಿ ವಾತಾವರಣವನ್ನು ಇನ್ನಷ್ಟು ಗೊಂದಲಗೊಳಿಸುತ್ತಿವೆ.

ಮುಂದೇನು?


ಕೊಳ್ಳೂರು ಎಂ ಮಾತ್ರವಲ್ಲ, ಟೊಣ್ಣೂರು ಮತ್ತು ಗೌಡೂರು ಭಾಗಗಳಲ್ಲಿಯೂ ಅಕ್ರಮ ಮರಳು ದಂದೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಜನ ಆಕ್ರೋಶ ಪತ್ರಿಕೆ ಪೊಲೀಸ್ ಠಾಣೆಗೆ ಮನವಿ ನೀಡಿದ ಬಳಿಕ ಬೀಟ್ ಸಭೆ ನಡೆದರೂ, ಸ್ಪಷ್ಟ ಕ್ರಮಗಳ ನಿರೀಕ್ಷೆಯಲ್ಲಿ ಗ್ರಾಮಸ್ಥರು ಕಾಯುತ್ತಿದ್ದಾರೆ.

ಕೃಷ್ಣಾ ನದಿ ಕೇವಲ ನೀರಿನ ಹರಿವು ಅಲ್ಲ; ಅದು ಗ್ರಾಮಗಳ ಜೀವನಾಡಿ. ನದಿ ತೀರದಲ್ಲಿ ನಡೆಯುತ್ತಿರುವುದಾಗಿ ಹೇಳಲಾಗುತ್ತಿರುವ ಈ ಅಕ್ರಮ ಚಟುವಟಿಕೆಗಳ ಬಗ್ಗೆ ಸಂಬಂಧಿಸಿದ ಇಲಾಖೆ ಗಂಭೀರ ತನಿಖೆ ನಡೆಸುತ್ತದೆಯೇ? ಅಥವಾ ಕತ್ತಲಲ್ಲಿ ನಡೆಯುವ ಯಂತ್ರಗಳ ಗದ್ದಲವೇ ಮುಂದುವರಿಯುತ್ತದೆಯೇ?

ಇದೀಗ ಎಲ್ಲರ ಕಣ್ಣು ಸಂಬಂಧಿಸಿದ ಅಧಿಕಾರಿಗಳ ಕ್ರಮದತ್ತ ನೆಟ್ಟಿದೆ.

 

 

[caption id="attachment_3125" align="alignnone" width="300"] ಲಕ್ಷ್ಮೀಕಾಂತ ನಾಯಕ, ಸಂಪಾದಕರು ಮತ್ತು ಪತ್ರಕರ್ತರು[/caption]

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಗನ ಕೊಲೆಯ ಸೇಡು: ರಣಚಂಡಿಯಾದ ಹೆತ್ತವಳು! ರಕ್ತಕ್ಕೆ ರಕ್ತವೆಂದು 12 ವರ್ಷಗಳ ಬಳಿಕ ಮುಹೂರ್ತ ಇಟ್ಟ ತಾಯಿ!₹281.48 ಕೋಟಿ ಮಲ್ಲಾಬಾದ್ ಏತ ನೀರಾವರಿ ಯೋಜನೆಯಲ್ಲಿ ಅಕ್ರಮ ಆರೋಪ; ಸರ್ಕಾರದ ತನಿಖೆಗೆ ಆಗ್ರಹಫ್ರೀಡಂ ಹಬ್ಬದಲ್ಲಿ ‘ಮೋದಿ ಮೋದಿ’ ಘೋಷಣೆ; ಡಿಕೆಶಿ ಮಾತಿನಲ್ಲೇ ಜನರಿಗೆ ಟಾಂಗ್ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ದಂಡಿನ ಆಯ್ಕೆ ಮಾಡುವಂತೆ ಸಿದ್ದು ತುಮಕೂರು ಆಗ್ರಹನಕಲಿ ಎನ್‌ಕೌಂಟರ್ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ: ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಗೃಹ ಸಚಿವರಿಗೆ ಮನವಿಹಳಿಸಗರ ಸರ್ಕಾರಿ ಶಾಲೆಯ ದುಸ್ಥಿತಿ: ಪುಟಾಣಿಗಳ ಜೀವದೊಂದಿಗೆ ಚೆಲ್ಲಾಟ; ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ತಪ್ಪದುಗೃಹ ಸಚಿವರ ಘೋಷಣೆಗೆ ಸವಾಲೇ? ಶಹಾಪುರದಲ್ಲಿ ಮತ್ತೆ ಜೋರಾದ ಅಕ್ರಮ ಮರಳು ಸಾಗಾಟಒಂದು ವಾರದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ: ಇಲ್ಲದಿದ್ದರೆ ಬೃಹತ್ ಪ್ರತಿಭಟನೆ – ಕರ್ನಾಟಕ ಪ್ರಾಂತ ರೈತ ಸಂಘ ಎಚ್ಚರಿಕೆಕೆನಾಲ್ ಒಡೆದು ಸಾವಿರಾರು ಲೀಟರ್ ನೀರು ಪೋಲು: ರೈತರ ಜಮೀನು ಜಲಾವೃತ, ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪದ ಆರೋಪನಾರಾಯಣಪುರ ಬಲದಂಡೆ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ: ತಕ್ಷಣ ನಿರ್ವಹಣೆಗೆ ರೈತ ಸಂಘ ಆಗ್ರಹ