ಯಾದಗಿರಿ : ಜನವರಿ 19, : ಯಾದಗಿರಿ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದ 21 ವರ್ಷದ ಬಸ್ಸಮ್ಮ ಮಹಿಳೆ ಇದೇ 2026ರ ಜನವರಿ 16 ರಂದು ಕಾಣೆಯಾದ ಹಿನ್ನೆಲೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ಯಾದಗಿರಿ ನಗರ ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕರು (ಕಾ.ಸು) ಅವರು ತಿಳಿಸಿದ್ದಾರೆ.
ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಿಂದ ಈಕೆ ಕಳೆದ ಜ.16 ರಂದು ಬೆಳಿಗ್ಗೆ 10 ಗಂಟೆಗೆ ಯಾದಗಿರಿ ಲಿಂಗೇರಿ ಕೋನಪ್ಪ ಮಹಾವಿದ್ಯಾಲಯದಲ್ಲಿ ಬಿ.ಎ ಅಂತಿಮ ವರ್ಷದ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆಗೆ ಬರಿಯಲು ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಪರೀಕ್ಷೆಗೆ ಹೋಗುವಾಗ ನನ್ನ ಮತ್ತು ತನ್ನಲ್ಲಿರುವ ಮೊಬೈಲ್ ನಂ.7019184167, 9902715215 ತೆಗೆದುಕೊಂಡು ಹೋಗಿದ್ದು, ಸಂಜೆ 4 ಗಂಟೆಯ ವರೆಗೆ ನಮ್ಮೊಂದಿಗೆ ಸಂಪರ್ಕ ಕರೆಯಲ್ಲಿ ಇದ್ದು, ಸಂಜೆ 4 ಗಂಟೆಯ ನಂತರ ಯಾದಗಿರಿ ಬಸ್ ನಿಲ್ದಾಣಕ್ಕೆ ಬಂದಿರುವುದಾಗಿ ಹೇಳಿದ್ದು ಇರುತ್ತದೆ. ಈ ಹಿನ್ನೆಲೆ ರಾತ್ರಿಯಾದರೂ ಮನೆಗೆ ಬಾರದ ನಂಬರ್‌ಗಳಿಗೆ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದ್ದು, ಎರಡೂ ಮೊಬೈಲ್ ನಂಬರ್‌ಗಳು ಸ್ವಿಚ್ ಆಫ್ ಆಗಿದು ಇರುತ್ತದೆ. ನನ್ನ ತಮ್ಮಂದಿರು ಎಲ್ಲರೂ ಕೂಡಿಕೊಂಡು ನಮ್ಮ ಸಂಬAಧಿಕರ ಮನೆಗಳಿಗೆ ಸಂಪರ್ಕಿಸಿ ವಿಚಾರಿಸಲಾಗಿದೆ ಅವಳ ಇರುವಿಕೆ ಬಗ್ಗೆ ಎಲ್ಲಿಯೂ ಕಂಡುಬAದಿರುವುದಿಲ್ಲ.
ಕಾಣೆಯಾದ ಮಹಿಳೆಯ ಚಹರಾ ಪಟ್ಟಿ ವಿವರ : ಮಹಿಳೆಯ ಕೂದಲು ಕಪ್ಪು, ಮೈಬಣ್ಣ ಸಾದಾ ಕೆಂಪು ಬಣ್ಣ 5 ಫೀಟ್ 3 ಇಂಚು ಎತ್ತರ ಇದ್ದು, ದುಂಡನೆ ಮುಖ, ತೆಳ್ಳನೆಯ ಮೈಕಟ್ಟು, ಗುಲಾಬಿ ಬಣ್ಣದ ಚುಡಿದಾರ, ಕಪ್ಪುಬಣ್ಣದ ಲೆಗ್ಗಿನ ಪ್ಯಾಂಟ್, ಕಪ್ಪುಬಣ್ಣದ ದುಪ್ಪಟ್ಟಾ (ವೇಲ್) ಧರಿಸಿದ್ದಾಳೆ. ಕನ್ನಡ ಮಾತನಾಡುತ್ತಾಳೆ. ಮಹಿಳೆ ಪತ್ತೆಯಾದಲ್ಲಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾಧಿಕಾರಿ ಮೊ.ನಂ.7411275228 ಅಥವಾ 9591153979ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.