Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ ಅರ್ಜೆಂಟಿನಾದ ಫುಟ್ಬಾಲ್ ದಂತಕಥೆ ಲಿಯೊನೆಲ್ ಮೆಸ್ಸಿ

ಬ್ಯೂನಸ್ ಐರಿಸ್ : ಅರ್ಜೆಂಟಿನಾದ ಫುಟ್ಬಾಲ್ ದಂತಕಥೆ , ಎಂಟು ಬಾರಿ ಬ್ಯಾಲನ್ ಡಿ’ಓರ್ ಪ್ರಶಸ್ತಿ ವಿಜೇತ ಹಾಗೂ ತಂಡದ ನಾಯಕ ಲಿಯೊನೆಲ್ ಮೆಸ್ಸಿ (39) ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಅರ್ಜೆಂಟಿನಾ ರಾಷ್ಟ್ರೀಯ ಫುಟ್ಬಾಲ್‌ ತಂಡದೊಂದಿಗೆ ಅವರ 20 ವರ್ಷಗಳ ಅದ್ಭುತ ಪಯಣ ಅಂತ್ಯಗೊಂಡಿದೆ.
 ಇನ್‌ಸ್ಟಾಗ್ರಾಂನಲ್ಲಿ ಸ್ಪ್ಯಾನಿಷ್ ಭಾಷೆಯಲ್ಲಿ ಕೈಬರಹದ ಪತ್ರವನ್ನು ಹಂಚಿಕೊಂಡು ಮೆಸ್ಸಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಆರು ವಿಶ್ವಕಪ್‌ಗಳಲ್ಲಿ ಅರ್ಜೆಂಟಿನಾವನ್ನು ಪ್ರತಿನಿಧಿಸಿರುವ ಮೆಸ್ಸಿ, ಈ ನಿರ್ಧಾರ ನೋವಿನದ್ದಾಗಿದ್ದರೂ ರಾಷ್ಟ್ರೀಯ ತಂಡದಿಂದ ಹಿಂದೆ ಸರಿಯುವ ಸಮಯ ಬಂದಿದೆ ಎಂದು ಹೇಳಿದ್ದಾರೆ. “ಫೈನಲ್ ಪಂದ್ಯದಿಂದ ಇಷ್ಟು ಸಮಯ ಕಳೆದ ಬಳಿಕ ಮತ್ತು ಸಾಕಷ್ಟು ಯೋಚಿಸಿದ ನಂತರ, ನಾನು ಅರ್ಜೆಂಟಿನಾ ರಾಷ್ಟ್ರೀಯ ತಂಡದಿಂದ ನಿವೃತ್ತಿಯಾಗುತ್ತಿರುವುದನ್ನು ಎಲ್ಲರಿಗೂ ತಿಳಿಸಲು ಬಯಸುತ್ತೇನೆ” ಎಂದು ಅವರು ಬರೆದಿದ್ದಾರೆ.
ತಮ್ಮ ಫುಟ್ಬಾಲ್ ಪಯಣವನ್ನು ನೆನಪಿಸಿಕೊಂಡ ಮೆಸ್ಸಿ, ಯಶಸ್ಸು ಸಿಗದ ಕಠಿಣ ದಿನಗಳಲ್ಲಿಯೂ ದೇಶಕ್ಕಾಗಿ ಶೇ.100ರಷ್ಟು ಸಮರ್ಪಣೆಯೊಂದಿಗೆ ಆಡಿದ್ದೇನೆ ಎಂದು ಹೇಳಿದ್ದಾರೆ.
“ಇದು ನನಗೆ ನೋವು ತಂದ ನಿರ್ಧಾರ, ಇಂದಿಗೂ ಮನದಾಳದಲ್ಲಿ ನೋವುಂಟು ಮಾಡುತ್ತದೆ. ಆದರೆ ಈಗ ಸಮಯ ಬಂದಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಕಳೆದ ಕೆಲವು ವರ್ಷಗಳಲ್ಲಿ ನಾವು ಎಲ್ಲವನ್ನೂ ಗೆದ್ದಾಗ ಮಾತ್ರವಲ್ಲ, ಅದಕ್ಕೂ ಮುಂಚೆಯೂ ನಾನು ನನ್ನ ಸಂಪೂರ್ಣ ಶಕ್ತಿಯನ್ನು ನೀಡಿದ್ದೇನೆ. ಈ ಜೆರ್ಸಿಗಾಗಿ ನಾನು ಸದಾ ಹೋರಾಡಿದ್ದೇನೆ. ಫುಟ್ಬಾಲ್ ಮೂಲಕ ನಿಮಗೆ ಸಂತೋಷ ನೀಡಲು ಹಾಗೂ ಅರ್ಜೆಂಟೀನಾದವರಿಗೆ ಹೆಮ್ಮೆ ಮೂಡಿಸಲು ನನ್ನಿಂದಾದುದನ್ನೆಲ್ಲ ಮಾಡಿದ್ದೇನೆ” ಎಂದು ಹೇಳಿದ್ದಾರೆ.
ಮೆಸ್ಸಿಯ ಈ ನಿರ್ಧಾರವು 2022ರ ಕತಾರ್ ವಿಶ್ವಕಪ್‌ನಲ್ಲಿ ಅರ್ಜೆಂಟಿನಾವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಬಳಿಕ ಹಾಗೂ 2026ರ ವಿಶ್ವಕಪ್ ಫೈನಲ್‌ಗೆ ತಂಡವನ್ನು ಮುನ್ನಡೆಸಿದ ಕೆಲವೇ ವಾರಗಳ ನಂತರ ಬಂದಿದೆ. 2026ರ ಫೈನಲ್‌ನಲ್ಲಿ ಅರ್ಜೆಂಟಿನಾ ಸ್ಪೇನ್ ವಿರುದ್ಧ ಸೋತಿತ್ತು. ಅವರ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 2021 ಮತ್ತು 2024ರ ಕೋಪಾ ಅಮೆರಿಕಾ ಪ್ರಶಸ್ತಿಗಳೂ ಸೇರಿವೆ.
ದಾಖಲೆಗಳ ಸಾಮ್ರಾಟ
ಅರ್ಜೆಂಟಿನಾದ ಅತ್ಯಂತ ಯಶಸ್ವಿ ಕ್ರೀಡಾ ತಾರೆಗಳಲ್ಲಿ ಒಬ್ಬರಾಗಿರುವ ಮೆಸ್ಸಿ, ದೇಶದ ಪರ ಗರಿಷ್ಠ ಗೋಲು ಗಳಿಸಿದ ಆಟಗಾರ ಹಾಗೂ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ. ಅವರು 207 ಪಂದ್ಯಗಳಲ್ಲಿ 125 ಗೋಲುಗಳನ್ನು ದಾಖಲಿಸಿದ್ದಾರೆ. ದಕ್ಷಿಣ ಅಮೆರಿಕಾದ ಫುಟ್ಬಾಲ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಪುರುಷ ಆಟಗಾರ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ.
ಆದರೆ ಈ ಯಶಸ್ಸಿನ ಹಿಂದೆ ಹಲವು ವರ್ಷಗಳ ನಿರಾಸೆ ಅಡಗಿತ್ತು. ಪ್ರಮುಖ ಪ್ರಶಸ್ತಿಗಳನ್ನು ಗೆಲ್ಲುವ ಮೊದಲು ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟಿನಾ ಸತತ ಮೂರು ಫೈನಲ್‌ಗಳಲ್ಲಿ ಸೋಲು ಕಂಡಿತ್ತು. 2016ರಲ್ಲಿ ಮತ್ತೊಂದು ಸೋಲಿನ ಬಳಿಕ ಅವರು ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಬಳಿಕ ಆ ನಿರ್ಧಾರವನ್ನು ಹಿಂಪಡೆದು ತಂಡಕ್ಕೆ ಮರಳಿದ್ದರು.
ಆ ಮರುಪ್ರವೇಶವೇ ಅರ್ಜೆಂಟಿನಾ ಫುಟ್ಬಾಲ್ ಇತಿಹಾಸದ ಸುವರ್ಣ ಅಧ್ಯಾಯಕ್ಕೆ ಕಾರಣವಾಯಿತು. 2021ರಲ್ಲಿ ಕೋಪಾ ಅಮೆರಿಕಾ ಗೆಲ್ಲುವ ಮೂಲಕ 28 ವರ್ಷಗಳ ಪ್ರಶಸ್ತಿ ಬರವನ್ನು ಅಂತ್ಯಗೊಳಿಸಿದ ತಂಡವು, 2022ರಲ್ಲಿ ವಿಶ್ವಕಪ್ ಹಾಗೂ 2024ರಲ್ಲಿ ಮತ್ತೊಮ್ಮೆ ಕೋಪಾ ಅಮೆರಿಕಾ ಕಪ್‌ ಜಯಿಸಿತು. 2022ರ ವಿಶ್ವಕಪ್ ಅರ್ಜೆಂಟಿನಾದ 1986ರ ಬಳಿಕದ ಮೊದಲ ಹಾಗೂ ಒಟ್ಟಾರೆ ಮೂರನೇ ವಿಶ್ವಕಪ್ ಪ್ರಶಸ್ತಿಯಾಗಿತ್ತು.
“ಈ ಅಧ್ಯಾಯ ಮುಗಿಯಲೇಬೇಕು”
ತಮ್ಮ ವಿದಾಯ ಸಂದೇಶದಲ್ಲಿ ಮೆಸ್ಸಿ, “ಸಮಯ ವೇಗವಾಗಿ ಸಾಗುತ್ತಿದೆ. ಜೀವನದ ಅಧ್ಯಾಯಗಳು ಒಂದೊಂದಾಗಿ ಮುಗಿಯುತ್ತವೆ. ಇದು ನನಗೆ ತುಂಬಾ ನೋವು ಕೊಡುವ ಅಧ್ಯಾಯ” ಎಂದು ಹೇಳಿದ್ದಾರೆ. “ನನ್ನಿಂದ ನೀಡಲು ಇನ್ನೇನೂ ಉಳಿದಿಲ್ಲ. ಈಗ ಯುವ ಆಟಗಾರರಿಗೆ ಅವಕಾಶ ಸಿಗಬೇಕಾದ ಸಮಯ ಬಂದಿದೆ” ಎಂದೂ ಅವರು ತಿಳಿಸಿದ್ದಾರೆ.
ಕಳೆದ ಎರಡು ದಶಕಗಳಿಂದ ತಮಗೆ ಅಪಾರ ಪ್ರೀತಿ ತೋರಿದ ಅರ್ಜೆಂಟಿನಾ ಅಭಿಮಾನಿಗಳಿಗೆ ಮೆಸ್ಸಿ ಕೃತಜ್ಞತೆ ಸಲ್ಲಿಸಿದ್ದಾರೆ. “ಇನ್ನು ಮುಂದೆ ಮೈದಾನದಲ್ಲಿ ನಿಮ್ಮ ಧ್ವನಿಯನ್ನು ಕೇಳಲು ಸಾಧ್ಯವಾಗುವುದಿಲ್ಲ. ಆದರೆ ಹೊರಗಿನಿಂದ ತಂಡವನ್ನು ಬೆಂಬಲಿಸುತ್ತೇನೆ” ಎಂದು ಹೇಳಿದ್ದಾರೆ.
ತಂದೆಯ ನಿಧನದ ಬಳಿಕ ನಿರ್ಧಾರ ಮತ್ತಷ್ಟು ದೃಢ
ತಮ್ಮ ನಿವೃತ್ತಿ ಘೋಷಣೆಯಲ್ಲಿ ಮೆಸ್ಸಿ ವೈಯಕ್ತಿಕ ನೋವಿನ ಸಂಗತಿಯನ್ನೂ ಹಂಚಿಕೊಂಡಿದ್ದಾರೆ. ಜುಲೈ 19ರಂದು ನಡೆದ ವಿಶ್ವಕಪ್ ಫೈನಲ್‌ನ ಎರಡು ದಿನಗಳ ಬಳಿಕ, ಅಂದರೆ ಜುಲೈ 21ರಂದೇ ಈ ಸಂದೇಶವನ್ನು ಬರೆದಿದ್ದಾಗಿ ಅವರು ತಿಳಿಸಿದ್ದಾರೆ.
ಆದರೆ ಆಗಸ್ಟ್ 8ರಂದು ತಮ್ಮ ತಂದೆ ಜಾರ್ಜ್ ಮೆಸ್ಸಿ (68) ಅವರ ನಿಧನದ ಬಳಿಕ ನಿವೃತ್ತಿಯ ನಿರ್ಧಾರ ಇನ್ನಷ್ಟು ದೃಢವಾಯಿತು ಎಂದು ಹೇಳಿದ್ದಾರೆ. ಜಾರ್ಜ್ ಮೆಸ್ಸಿ ಅವರು ರೊಸಾರಿಯೊದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ