ಮಾರ್ಕಂಡೇಯ ನದಿಯಲ್ಲಿ ಮರ್ಡರ್..?
ರುಂಡವಿಲ್ಲದ ದೇಹ ಪತ್ತೆ..!
ಕಾಕತಿ ಠಾಣೆ ವ್ಯಾಪ್ತಿಯಲ್ಲಿ ನಡೆಯಿತಾ ಭೀಕರ ಕೊಲೆ..?
ಬೆಳಗಾವಿ : ಬೆಳಗಾವಿ ನಗರದಲ್ಲಿ ತಿಂಗಳ ಮಾಸುವ ಮುನ್ನವೇ ಮತ್ತೊಂದು ರುಂಡ ಚಂಡಾಡಿ ಮರ್ಡರ್ ಮಾಡಿ ದೇಹವನ್ನು ಮಾರ್ಕಂಡೇಯ ನದಿಯಲ್ಲಿ ಎಸೆದು ಹೋಗಿರುವ ಭೀಕರ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ದೇಹ ಅನಾಮದೇಯವಾಗಿದ್ದು, ವ್ಯಕ್ತಿ ಮಾಹಿತಿ ಅತ್ತೆಯಾಗಿಲ್ಲ.
ಇಂದು ಬೆಳಗಿನ ಜಾವ ರುಂಡ ಇಲ್ಲದ ದೇಹ ಮಾರ್ಕಂಡೇಯ ನದಿಯ ಹರಿಯುವ ಹೂನಗಾ ಬ್ರಿಜ್ ಹತ್ತಿರ ಕಾಣಿಸಿಕೊಂಡಿದೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕಾಕತಿ ಪಿಎಸ್ಐ ಮಂಜುನಾಥ್ ನಾಯಿಕ, ಸಿಬ್ಬಂದಿ ಉಮೇಶ್ ಗದಗ ಸೇರಿದಂತೆ ಇತರರು
ಸ್ಥಳಕ್ಕೆ ಧಾವಿಸಿದ ಮೃತದೇಹವನ್ನು ಹೊರ ತೆಗೆದು ಪರಿಶೀಲನೆ ನಡೆಸಿ ಉನ್ನತ ಮಟ್ಟದ ತನಿಖೆ ಕೈಗೊಂಡಿದ್ದಾರೆ.