LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಅಮಿತ್ ಶಾ ಅಂಬೇಡ್ಕರ್ ಬಗ್ಗೆ ದುರಹಂಕಾರದ ಮಾತು.! ಎಸ್.ಡಿ.ಪಿ.ಐ. ನಿಂದ ಪ್ರತಿಭಟನೆ

 

ಚಿತ್ರದುರ್ಗ : ಅಂಬೇಡ್ಕರ್ ಹೆಸರೇಳುವ ಬದಲು ದೇವರನ್ನು ಜಪಿಸಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆಂದು ಕೇಂದ್ರ ಗೃಹ ಸಚಿವ ಅಮಿತ್ಷಾ ದುರಹಂಕಾರದ ಮಾತುಗಳನ್ನಾಡಿರುವುದನ್ನು ಖಂಡಿಸಿ ಎಸ್.ಡಿ.ಪಿ.ಐ. ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೇವಲ ದಲಿತರಿಗಷ್ಟೆ ಸಂವಿಧಾನವನ್ನು ರಚಿಸಿಲ್ಲ. ದೇಶದ ಪ್ರತಿಯೊಬ್ಬರು ಸ್ವಾಭಿಮಾನ, ಸಮಾನತೆಯಿಂದ ಬದುಕಲಿ ಎನ್ನುವ ಉದ್ದೇಶದಿಂದ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಅಮಿತ್ಷಾ ಕೇಂದ್ರ ಗೃಹ ಮಂತ್ರಿಯಾಗಿದ್ದಾರೆಂದರೆ ಸಂವಿಧಾನ ಕಾರಣ. ಕೇಂದ್ರದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನವನ್ನು ಬದಲಾಯಿಸುವುದಾಗಿ ಹೇಳಿಕೊಂಡು ಬರುತ್ತಿದೆ. ಈಗ ಅಂಬೇಡ್ಕರ್ ಬಗ್ಗೆಯೆ ಹಗುರವಾಗಿ ಮಾತನಾಡಲು ಶುರು ಮಾಡಿದ್ದಾರೆ. ಹಾಗಾಗಿ ಪ್ರಧಾನಿ ಮೋದಿರವರು ಮೌನ ಮುರಿದು ಅಮಿತ್ಷಾ ವಿರುದ್ದ ಕಾನೂನು ಕ್ರಮ ಕೈಗೊಂಡು ಸಂಪುಟದಿಂದ ಕೈಬಿಡಬೇಕು. ಇಲ್ಲವಾದಲ್ಲಿ ಎಸ್.ಡಿ.ಪಿ.ಐ. ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಪ್ರತಿಭಟನಾಕಾರರು ಬೆದರಿಕೆ ಹಾಕಿದರು.

ಎಸ್.ಡಿ.ಪಿ.ಐ. ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಶತ ಶತಮಾನಗಳಿಂದಲೂ ಶೋಷಣೆ ಅನುಭವಿಸಿಕೊಂಡು ಬರುತ್ತಿರುವವರು ಸ್ವಾಭಿಮಾನಿಯಾಗಿ ಬದಕಲಿ ಎನ್ನುವ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆನ್ನುವುದನ್ನು ಮರೆತು ಅಮಿತ್ಷಾ ತಮ್ಮ ಮನುಸ್ಮøತಿಯನ್ನು ಹೊರಹಾಕಿದ್ದಾರೆ. ತಕ್ಷಣವೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್, ಸುಬಾನುಲ್ಲಾ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ರಾಜ್ಯಾದ್ಯಂತ ಮೂರು ದಿನ ಮತ್ತೆ ಮಳೆಯ ಅಬ್ಬರ.!ದಿನದ ಮಂಡಕ್ಕಿ ಒಗ್ಗರಣೆ- ಮಿರ್ಚಿ 27-07-2025.!ನಿಮ್ಮ ಮನೆ ಬಾಗಿಲಲ್ಲಿ ನಿಂಬೆ ಇಡುವುದೇಕೆ ಅಗತ್ಯ? ಉತ್ತರ ಇಲ್ಲಿ ಇದೆ..!ವಚನ: -ಬೊಂತಾದೇವಿ .!ಹೃದಯಾಘಾತಕ್ಕೂ ಕೊರೋನಾ ಲಸಿಕೆಗೂ ನಂಟಿಲ್ಲ: ಅಧ್ಯಯನಉಡುಪಿ: ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ- ಮೂರ್ಛೆ ಹೋಗಿ ಸಿಕ್ಕಿಬಿದ್ದ ಕಳ್ಳರುಜೈಲಿಂದ ತಪ್ಪಿಸಿಕೊಂಡು ಬಾವಿಯಲ್ಲಿ ಅಡಗಿದ್ದ ಅಪರಾಧಿ ಕೆಲವೇ ಗಂಟೆಗಳಲ್ಲಿ ಸೆರೆ- ನಾಲ್ವರು ಅಧಿಕಾರಿಗಳು ಸಸ್ಪೆಂಡ್ಆಲಿಯಾ ಕಶ್ಯಪ್ ಸುಂದರ ಕ್ಷಣದ ಬಿಕಿನಿ ಲುಕ್ ಗೆ ನೆಟ್ಟಿಗರು ಫುಲ್ ಫಿದಾಧರ್ಮಸ್ಥಳದಲ್ಲಿ ಶವ ಹೂತಿಟ್ಟ ಕೇಸ್ ತನಿಖೆ ಚುರುಕು : SIT ಎದುರು ವಿಚಾರಣೆಗೆ ಹಾಜರಾದ ದೂರುದಾರ.!ನಿವೃತ್ತಿ ಬಳಿಕ ಸರ್ಕಾರದ ಯಾವುದೇ ಹುದ್ದೆ ಒಪ್ಪಿಕೊಳ್ಳುವುದಿಲ್ಲ ಎಂದ ಸಿಜೆಐ ಬಿ.ಆರ್. ಗವಾಯಿ