Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಹೊಸಕೇರಾದಲ್ಲಿ ಬಾಲಮೇಳ: ಪೂರ್ವಪ್ರಾಥಮಿಕ ಶಿಕ್ಷಣದ ಮಹತ್ವ ಕುರಿತು ಸಮುದಾಯ ಜಾಗೃತಿ

ಶಹಾಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಶಹಾಪುರ, ಶಿಕ್ಷಣ ಇಲಾಖೆ ಶಹಾಪುರ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಶನ್‌ ಅವರ ಸಹಯೋಗದಲ್ಲಿ ವಾನದುರ್ಗ ವಲಯದ ಹೊಸಕೇರಾ ಗ್ರಾಮದಲ್ಲಿನ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಇಂದು ಬಾಲಮೇಳವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಮಕ್ಕಳು ಹಾಗೂ 120ಕ್ಕೂ ಹೆಚ್ಚು ಪೋಷಕರು ಉತ್ಸಾಹದಿಂದ ಭಾಗವಹಿಸಿದರು. ಪೂರ್ವಪ್ರಾಥಮಿಕ ಶಿಕ್ಷಣದ ಮಹತ್ವ, ಮಕ್ಕಳ ಸಮಗ್ರ ಬೆಳವಣಿಗೆ ಮತ್ತು ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಈ ಬಾಲಮೇಳದ ಪ್ರಮುಖ ಉದ್ದೇಶವಾಗಿತ್ತು.

ಮಕ್ಕಳ ಕಲಿಕೆಯಲ್ಲಿ ಆಟ, ಹಾಡು, ಕಥೆ, ಕ್ರಿಯಾತ್ಮಕ ಚಟುವಟಿಕೆಗಳು ಹಾಗೂ ಸೃಜನಶೀಲ ಕಾರ್ಯಗಳ ಮಹತ್ವವನ್ನು ಕಾರ್ಯಕ್ರಮದಲ್ಲಿ ವಿವರಿಸಲಾಯಿತು. ಬಾಲಮೇಳದಲ್ಲಿ ಮಕ್ಕಳು ಹಾಡುಗಳು, ಕ್ರಿಯಾ ಗೀತೆಗಳು, ಕಥೆ ಹೇಳಿಕೆ, ನಾಟಕೀಯ ಪ್ರದರ್ಶನಗಳು ಮತ್ತು ವಿವಿಧ ಸೃಜನಶೀಲ ಆಟಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಮಕ್ಕಳ ಉತ್ಸಾಹಭರಿತ ಪ್ರದರ್ಶನಗಳು ಪೋಷಕರು ಹಾಗೂ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಕ್ತಾರರು, ಮಕ್ಕಳ ಕಲಿಕೆಯಲ್ಲಿ ಪೋಷಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಬಾಲ್ಯಾವಸ್ಥೆಯಲ್ಲಿ ದೊರಕುವ ಸೂಕ್ತ ಕಲಿಕಾ ಅನುಭವಗಳು ಮಕ್ಕಳ ಭವಿಷ್ಯಕ್ಕೆ ಬಲವಾದ ಅಡಿಪಾಯವಾಗುತ್ತವೆ ಎಂದು ಹೇಳಿದರು.

ಬಾಲಮೇಳ ಕಾರ್ಯಕ್ರಮವು ಸಮುದಾಯದ ಒಗ್ಗಟ್ಟನ್ನು ಬಲಪಡಿಸುವ ಜೊತೆಗೆ ಪೂರ್ವಪ್ರಾಥಮಿಕ ಶಿಕ್ಷಣದ ಮಹತ್ವವನ್ನು ಜನಸಾಮಾನ್ಯರೊಳಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.

ಕಾರ್ಯಕ್ರಮದಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಶನ್ ಜಿಲ್ಲಾ ಸಂಚಾಲಕ ಶ್ರೀ ಮುತ್ತುರಾಜ್, ನ್ಯಾಯಬೆಲೆ ಅಂಗಡಿ ಮಾಲೀಕ ಶ್ರೀ ಮಲ್ಲಣ್ಣ ಸಾವು, ಶಾಲಾ ಶಿಕ್ಷಕರಾದ ಚಂದಪ್ಪ ಸರ್, ಅಂಬರೀಶ್ ಸರ್, ಸಿದ್ದಮ್ಮ ಟೀಚರ್, ಸಾಯಬಣ್ಣ ಸರ್, ಲಕ್ಷ್ಮಿ ಟೀಚರ್, ಊರಿನ ಹಿರಿಯ ಮುಖಂಡರಾದ ಹಣಮಂತಪ್ಪ ಮೇಸ್ತ್ರಿ ಹಾಗೂ ಬಸವರಾಜ್ ಕೋರಿ, ಎಸ್‌ಡಿಎಂಸಿ ಅಧ್ಯಕ್ಷ ಪರಶುರಾಮ್, ಉಪಾಧ್ಯಕ್ಷೆ ಶಿವಲಿಂಗಮ್ಮ, ಕಿರಿಯ ಆರೋಗ್ಯ ಸಹಾಯಕಿಯರಾದ ಕುಮಾರಿ ಮತ್ತು ವಿಜಯಲಕ್ಷ್ಮಿ, ಶ್ರೀ ಭೀಮಣ್ಣ, ಬಸವರಾಜ್ ನಂದಹಳ್ಳಿ, ಶಿವಪ್ಪ ಜಾಲಹಳ್ಳಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಚಂದಪ್ಪ ಕಿಲಾರಿ, ಅಂಗನವಾಡಿ ಕಾರ್ಯಕರ್ತೆಯರಾದ ತಾಯಮ್ಮ, ಮಂಜುಳಾ, ಹಣಮಂತಿ, ಕಮಲ, ಸುಮಾ, ಅನುಸೂಯ, ಸುಗಂಧ, ಸಹಾಯಕರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಮಹಿಳೆಯರು, ಮಕ್ಕಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಗನ ಕೊಲೆಯ ಸೇಡು: ರಣಚಂಡಿಯಾದ ಹೆತ್ತವಳು! ರಕ್ತಕ್ಕೆ ರಕ್ತವೆಂದು 12 ವರ್ಷಗಳ ಬಳಿಕ ಮುಹೂರ್ತ ಇಟ್ಟ ತಾಯಿ!₹281.48 ಕೋಟಿ ಮಲ್ಲಾಬಾದ್ ಏತ ನೀರಾವರಿ ಯೋಜನೆಯಲ್ಲಿ ಅಕ್ರಮ ಆರೋಪ; ಸರ್ಕಾರದ ತನಿಖೆಗೆ ಆಗ್ರಹಫ್ರೀಡಂ ಹಬ್ಬದಲ್ಲಿ ‘ಮೋದಿ ಮೋದಿ’ ಘೋಷಣೆ; ಡಿಕೆಶಿ ಮಾತಿನಲ್ಲೇ ಜನರಿಗೆ ಟಾಂಗ್ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ದಂಡಿನ ಆಯ್ಕೆ ಮಾಡುವಂತೆ ಸಿದ್ದು ತುಮಕೂರು ಆಗ್ರಹನಕಲಿ ಎನ್‌ಕೌಂಟರ್ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ: ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಗೃಹ ಸಚಿವರಿಗೆ ಮನವಿಹಳಿಸಗರ ಸರ್ಕಾರಿ ಶಾಲೆಯ ದುಸ್ಥಿತಿ: ಪುಟಾಣಿಗಳ ಜೀವದೊಂದಿಗೆ ಚೆಲ್ಲಾಟ; ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ತಪ್ಪದುಗೃಹ ಸಚಿವರ ಘೋಷಣೆಗೆ ಸವಾಲೇ? ಶಹಾಪುರದಲ್ಲಿ ಮತ್ತೆ ಜೋರಾದ ಅಕ್ರಮ ಮರಳು ಸಾಗಾಟಒಂದು ವಾರದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ: ಇಲ್ಲದಿದ್ದರೆ ಬೃಹತ್ ಪ್ರತಿಭಟನೆ – ಕರ್ನಾಟಕ ಪ್ರಾಂತ ರೈತ ಸಂಘ ಎಚ್ಚರಿಕೆಕೆನಾಲ್ ಒಡೆದು ಸಾವಿರಾರು ಲೀಟರ್ ನೀರು ಪೋಲು: ರೈತರ ಜಮೀನು ಜಲಾವೃತ, ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪದ ಆರೋಪನಾರಾಯಣಪುರ ಬಲದಂಡೆ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ: ತಕ್ಷಣ ನಿರ್ವಹಣೆಗೆ ರೈತ ಸಂಘ ಆಗ್ರಹ