LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಎಚ್ಚರ..!! ಎಚ್ಚರ..!! ಬೆಳಗಿನ ಉಪಾಹಾರ ಸೇವನೆ ತಪ್ಪಿಸಿದರೆ ಭಾರೀ ಬೆಲೆ ತೆರಬೇಕಾದೀತು

ಪ್ರತಿದಿನವೂ ಬೆಳಗಿನ ಉಪಾಹಾರವನ್ನು ತಪ್ಪದೇ ಸೇವಿಸುವಂತೆ ತಜ್ಞರು ಸಲಹೆ ನೀಡುತ್ತಾರೆ. ನೀವು ದಿನವೂ ನಿಯಮಿತವಾಗಿ ಬೆಳಗಿನ ತಿಂಡಿ ತಿನ್ನುತ್ತಿದ್ದೀರಾ..? ಇಲ್ಲದಿದ್ದರೆ ತಕ್ಷಣ ರೂಢಿಸಿಕೊಳ್ಳಿ. ಬೆಳಗಿನ ತಿಂಡಿ ತಿನ್ನದೆ ಇರುವುದು ಸಾಕಷ್ಟು ಆರೋಗ್ಯ ತೊಂದರೆಗಳನ್ನುಂಟುಮಾಡುತ್ತದೆ.

ಒಂದು ವೇಳೆ ಬೆಳಗಿನ ಉಪಾಹಾರ ತಪ್ಪಿಸುತ್ತಿದ್ದರೆ ಈ ತಪ್ಪು ಮಾಡಬೇಡಿ. ಬೆಳಗಿನ ಉಪಾಹಾರವನ್ನು ದಿನದ ಮೊದಲ ಮತ್ತು ಪ್ರಮುಖ ಊಟ ಎಂದೇ ಕರೆಯಲಾಗುತ್ತದೆ. ಹೀಗಾಗಿ ಬೆಳಗಿನ ಉಪಾಹಾರವನ್ನು ಒಂದು ದಿನವೂ ತಪ್ಪದೇ ಸೇವನೆ ಮಾಡಲು ಸಲಹೆ ನೀಡುತ್ತಾರೆ. ಫ್ಯಾಷನ್‌ ಹೇಗೆ ದಿನವೂ ಹೊಸ ರೂಪ ಪಡೆಯುತ್ತದೆಯೋ ಹಾಗೆಯೇ ಇಂದಿನ ದಿನಗಳಲ್ಲಿ ಆಹಾರ ಪ್ರಕ್ರಿಯೆಗಳಲ್ಲೂ ಬದಲಾವಣೆ, ಹೊಸ ರೂಪ ಸಿಗುತ್ತಲೇ ಇದೆ.

ಮುಂಬರುವ ದಿನಗಳಲ್ಲಿ ಆಹಾರದ ಬಗ್ಗೆ ಅನೇಕ ಪ್ರವೃತ್ತಿಗಳು ಇವೆ. ಇವುಗಳಲ್ಲಿ ಕೆಲವು ಊಟಗಳ ನಡುವಿನ ಹೆಚ್ಚಿನ ಅಂತರವು ನಿಮಗೆ ದೀರ್ಘಾಯುಷ್ಯ, ತೂಕ ನಷ್ಟ, ಇತ್ಯಾದಿ ಪ್ರಯೋಜನ ನೀಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ವಾಸ್ತವದಲ್ಲಿ ನೀವು ದೀರ್ಘಕಾಲ ಏನನ್ನೂ ತಿನ್ನದಿದ್ದಾಗ ಕೋಪ, ಕಿರಿಕಿರಿ, ಕೂದಲು ಉದುರುವಿಕೆ ಮುಂತಾದ ಹಲವು ಸಮಸ್ಯೆ ಎದುರಾಗುತ್ತವೆ. ಬೆಳಗಿನ ಉಪಾಹಾರ ನಿಯಮಿತವಾಗಿ ಸೇವನೆ ಮಾಡುವವರ ಮೆದುಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಜತೆಗೆ ನಿಯಮಿತ ಉಪಾಹಾರ ಸೇವನೆ ಹೃದಯದ ತೊಂದರೆಯನ್ನು ತಡೆಯುತ್ತದೆ.

ಚಯಾಪಚಯ ಸಮತೋಲಿತವಾಗಿರುತ್ತದೆ. ಆರೋಗ್ಯಕರ ತೂಕ ಕಾಪಾಡಲು ಸಹಕಾರಿ. ಶಕ್ತಿಯು ದಿನವಿಡೀ ದೇಹದಲ್ಲಿ ಉಳಿಯುತ್ತದೆ. ಉಪಾಹಾರ ಸೇವನೆ ಮಾಡದಿದ್ದರೆ ಆಮ್ಲೀಯತೆ, ಊತ, ಎಂಗ್ಸೈಟಿ, ತಲೆನೋವು, ಮೈಗ್ರೇನ್, ಅನಿಯಮಿತ ಅವಧಿ, ವಿಟಮಿನ್ ಬಿ 12, ಡಿ ಕೊರತೆ, ಪ್ರೊಟೀನ್ ಕೊರತೆ ಉಂಟಾಗುತ್ತದೆ. ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು, ಒತ್ತಡದ ಕೆಲಸದಲ್ಲಿರುವವರು, ಋತುಬಂಧ ಮತ್ತು ಗರ್ಭಿಣಿಯರು, ಕ್ರೀಡಾಪಟುಗಳು ಹಾಗೂ ದೀರ್ಘಕಾಲದ ಕಾಯಿಲೆಯ ರೋಗಿಗಳು ಬೆಳಗಿನ ಉಪಾಹಾರ ಸೇವನೆ ತಪ್ಪಿಸಲೇಬಾರದು ಎಂದು ವೈದ್ಯರು ಹೇಳುತ್ತಾರೆ. ಗೊರಕೆ ಹೊಡೆಯೋರಿಗೆ ಖುಷಿ ಸುದ್ದಿ, ಗಳಿಸಬಹುದು ಕೈ ತುಂಬಾ ಹಣ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿಮ್ಮ ಮನೆ ಬಾಗಿಲಲ್ಲಿ ನಿಂಬೆ ಇಡುವುದೇಕೆ ಅಗತ್ಯ? ಉತ್ತರ ಇಲ್ಲಿ ಇದೆ..!ವಚನ: -ಬೊಂತಾದೇವಿ .!ಹೃದಯಾಘಾತಕ್ಕೂ ಕೊರೋನಾ ಲಸಿಕೆಗೂ ನಂಟಿಲ್ಲ: ಅಧ್ಯಯನಉಡುಪಿ: ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ- ಮೂರ್ಛೆ ಹೋಗಿ ಸಿಕ್ಕಿಬಿದ್ದ ಕಳ್ಳರುಜೈಲಿಂದ ತಪ್ಪಿಸಿಕೊಂಡು ಬಾವಿಯಲ್ಲಿ ಅಡಗಿದ್ದ ಅಪರಾಧಿ ಕೆಲವೇ ಗಂಟೆಗಳಲ್ಲಿ ಸೆರೆ- ನಾಲ್ವರು ಅಧಿಕಾರಿಗಳು ಸಸ್ಪೆಂಡ್ಆಲಿಯಾ ಕಶ್ಯಪ್ ಸುಂದರ ಕ್ಷಣದ ಬಿಕಿನಿ ಲುಕ್ ಗೆ ನೆಟ್ಟಿಗರು ಫುಲ್ ಫಿದಾಧರ್ಮಸ್ಥಳದಲ್ಲಿ ಶವ ಹೂತಿಟ್ಟ ಕೇಸ್ ತನಿಖೆ ಚುರುಕು : SIT ಎದುರು ವಿಚಾರಣೆಗೆ ಹಾಜರಾದ ದೂರುದಾರ.!ನಿವೃತ್ತಿ ಬಳಿಕ ಸರ್ಕಾರದ ಯಾವುದೇ ಹುದ್ದೆ ಒಪ್ಪಿಕೊಳ್ಳುವುದಿಲ್ಲ ಎಂದ ಸಿಜೆಐ ಬಿ.ಆರ್. ಗವಾಯಿಸೋನ್‌ಪ್ರಯಾಗ್ ಬಳಿ ಭೂಕುಸಿತ ಸಂಭವಿಸಿದ ಹಿನ್ನೆಲೆ ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಸುಪ್ರೀಂ ಕೋರ್ಟ್‌ ಮಾರ್ಗಸೂಚಿ