E-PAPER
17 Nov 2026, 05:29:51 PM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಭಾಷೆ ಮತಗಳನ್ನು ಮೀರಿ ಸಾಹಿತ್ಯ ಸೇವೆ ಸಾಗಲಿ ಸವಿತಾ ಇನಾಮದಾರ

ಅಖಿಲ ಭಾರತ ಕವಯತ್ರಿ ಯರ ಬೆಳಗಾವಿ ಘಟಕದ26 ನೇ ಸಂಸ್ಥಾಪನಾ ದಿನಾಚರಣೆ ಇದೇ ದಿನಾಂಕ 6 ರಂದು ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮಕ್ಕೆ ವಿಶೇಷ ಅತಿಥಿ ಯಾಗಿ ದೆಹಲಿಯಿಂದ ಆಗಮಿಸಿದ್ದ ಸವಿತಾ ಇನಾಮದಾರ ಕನ್ನಡತಿ, ಲೇಖಕಿ, ಗಾಯಕಿ,ನಟಿ,ದುಭಾಷಿ ಇವರು ಉದ್ಘಾಟಿಸಿ ಮಾತನಾಡುತ್ತಾ ಮಹಿಳೆಯರ ಸಾಂಘಿಕ ಶಕ್ತಿ ನೈಜ ಶಕ್ತಿ, ಸಾಹಿತ್ಯ ವು ಯುವ ಪೀಳಿಗೆಗೆ ಮಾದರಿಯಾಗಿದೆ ಬೇಕು.ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಜಾತಿ,ಭಾಷೆ,ಮಾತು ಪಂಥಗಳು ಸಂಕೋಲೆಯಿಂದ ಹೊರಬರಬೇಕು.ದೇಹಕ್ಕೆ ಮುಪ್ಪು ಬಂದರೂ ಮನಕೆ ಮುಪ್ಪು ಬರೋದಿಲ್ಲ ಹಾಗು ಸಾಹಿತ್ಯ ಸೇವೆಗೆ ಸೀಮೆ ಇಲ್ಲ, ಎಂಬ ಮಾತಿಗೆ ಬೆಳಗಾವಿಯ ಹಿರಿಯ ಎಐಪಿಸಿ ಸಹೋದರಿಯರು ಸಕ್ರಿಯವಾಗಿ ಇಲ್ಲಿ ಪಾಲ್ಗೊಂಡು ಸಾಬೀತು ಪಡಿಸಿದ್ದಾರೆ.ದೆಹಲಿಯಂತ ಬೃಹತ್ ನಗರದಲ್ಲಿದ್ದರೂ ಅವರು ಸಾಹಿತ್ಯ ಕಲೆ ಸಂಗೀತದ ಮೂಲಕ ಸಮಾಜಮುಖಿಯಾಗಿ ಕನ್ನಡದ ಕಂಪನ್ನು ಹರಡಿ ಜಗತ್ತಿನ ಮೂಲೆ ಮೂಲೆಗಳಲ್ಲಿರುವ ಮಹಿಳೆಯರನ್ನು ಒಗ್ಗೂಡಿಸುವ ಮಹತ್ತರ ಜವಾಬ್ದಾರಿ ಹೊತ್ತಿರುವ ಅಖಿಲ ಭಾರತ ಕವಯತ್ರಿ ಯರ ಸಂಘ 26 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಬೆಳಗಾವಿಯ ಸಹೋದರಿಯರು ಸಂಸ್ಥೆಯ ಧ್ಯೇಯೋದ್ದೇಶವನ್ನು ಉನ್ನತ ಮಟ್ಟದದಲ್ಲಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.ಎಐಪಿಸಿ ರಾಷ್ಟ್ರೀಯ ಉಪಾಧ್ಯಕ್ಷೆ ಜ್ಯೋತಿ ಬದಾಮಿ ತಮ್ಮ ಸಂಘಟಿತ ಶಕ್ತಿಯಿಂದ ಬಹುಭಾಷಾ ಕವಿಗೋಷ್ಠಿ,ಗಜಲ್ ಹಾಗು ಜಾನಪದ ಗಾಯನ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವೇದಿಕೆ ನೀಡಿ ಸದಸ್ಯರನ್ನು ಹುರಿದುಂಬಿಸುತ್ತಿರುವುದು ಶ್ಲಾಘನೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ಜ್ಯೋತಿ ಬದಾಮಿ ಸಭೆಗೆ ಸರ್ವರನ್ನು ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ದೇಶ ವಿದೇಶಗಳಲ್ಲಿ 15,000 ಕ್ಕಿಂತ ಅಧಿಕ ಸದಸ್ಯರನ್ನು ಹೊಂದಿರುವ ಎಐಪಿಸಿ ಸಂಸ್ಥೆಯ ಸುದೀರ್ಘ 26 ವರ್ಷಗಳ ಪಯಣ ,ದೇಶ ವಿದೇಶಗಳಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಸಮ್ಮೇಳನಗಳು ಅಲ್ಲಿ ಮಹಿಳೆಯರಿಂದಲೇ ಮಹಿಳೆಯರಿಗಾಗಿ ನಡೆಯುವ ಅರ್ಥಪೂರ್ಣ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು. ಗೋಕಾಕ, ಸಂಕೇಶ್ವರ,ಬೈಲಹೊಂಗಲದಿಂದ ಸದಸ್ಯರು ಆಗಮಿಸಿದ್ದರು.ಬಹುಭಾಷಾ ಕಾವ್ಯ ಧಾರೆ ಮತ್ತು ಗಜಲ್ ಗಾಯನ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿದ್ದರು.ಕಾರ್ಯಕ್ರಮದ ಪ್ರಾಯೋಜಕರಾದ ಹಿರಿಯ ಕ್ರಿಯಾಶೀಲ ಜಯಶೀಲ ಬ್ಯಾಕೋಡ ಅವರನ್ನು ಗೌರವಿಸಲಾಯಿತು.ಲಲಿತಾ ಪರ್ವತರಾವ್ ಪ್ರಾರ್ಥನೆ ಮಾಡಿದರು.ಶೈಲಜಾ ಕುಲಕರ್ಣಿ ಅತಿಥಿಗಳ ಪರಿಚಯ ಮಾಡಿದರು.ರಾಜನಂದಾ ಘಾರ್ಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.ಹೇಮಾ ಸೋನಳ್ಳಿ ವಂದಿಸಿದರು.ನೀಲಗಂಗಾ ಚರಂತಿಮಠ, ಶೈಲಜಾ ಭಿಂಗೆ,ಹಮೀದಾ ಬೇಗಂ,ಭಾರತಿ ಮದಭಾವಿ, ಪುಷ್ಪ ಮುರಗೋಡ, ದೀಪಿಕಾ ಚಾಟೆ,ರತ್ನಾ ಬೆಲ್ಲದ,ಶಾಂತಾ ಮಸೂತಿ, ಪ್ರಭಾ ಪಾಟೀಲ , ಅನ್ನಪೂರ್ಣ ಅಗಡಿ,ಮಹಾದೇವಿ ಅಜವಾನ,ಶುಭ ತೆಲಸಂಗ, ಪ್ರೇಮಾ ಪಾನಶೆಟ್ಟಿ, ಲಲಿತಾ,ಜ್ಯೋತಿ ಮಾಳಿ,ಮಹಾನಂದಾ ಪರುಶೆಟ್ಟಿ,ಆಶಾ ಸಂಸುದ್ದಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕವಯತ್ರಿಯರು ಭಾಗವಹಿಸಿ ಯಶಸ್ವಿಗೊಳಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಬೆಳಗಾವಿ ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ಪ್ರವೇಶ ಮತ್ತು ಅಭಿಮುಖೀಕರಣ ಕಾರ್ಯಕ್ರಮವೀರ ವನಿತೆ ಒನಕೆ ಓಬವ್ವ ಜಯಂತ್ಯೋತ್ಸವ ಕಾರ್ಯಕ್ರಮ - 2026ಮಂಡೋಳ್ಳಿಯಲ್ಲಿ ₹1.70 ಕೋಟಿ ವೆಚ್ಚದಲ್ಲಿ ಶ್ರೀ ಮಾರುತಿ ದೇವಸ್ಥಾನ ನಿರ್ಮಾಣ