
ನಗರದ ಪ್ರೀಮಿಯರ್ ಶಾಪಿಂಗ್, ಡೈನಿಂಗ್ ಮತ್ತು ಸಾಂಸ್ಕೃತಿಕ ತಾಣವೆನಿಸಿರುವ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ನಡೆದ ಈ ಫಿನಾಲೆಯನ್ನು ಖ್ಯಾತ ಫ್ಯಾಷನ್ ದಿಗ್ಗಜ ಪ್ರಸಾದ್ ಬಿಡಪ್ಪ ಅವರು ಕ್ಯುರೇಟ್ ಮಾಡಿದ್ದರು. ಈ ಕಾರ್ಯಕ್ರಮವು ಅದ್ಭುತ ಪ್ರದರ್ಶನಗಳು, ಪ್ರತಿಷ್ಠಿತ ತೀರ್ಪುಗಾರರು ಮತ್ತು ಫ್ಯಾಷನ್ ಕ್ಷೇತ್ರದಲ್ಲಿ ಭಾರತದ ಅತ್ಯಂತ ಭರವಸೆಯ ಹೊಸ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಯಿತು.
ಈ ವರ್ಷದ ಆವೃತ್ತಿಯಲ್ಲಿ 3000 ಕ್ಕೂ ಹೆಚ್ಚು ಅರ್ಜಿಗಳು ವಿವಿಧ ರಾಜ್ಯಗಳಿಂದ ನೋಂದಣಿಯಾಗಿದ್ದು, ಅಂತಿಮ ಸ್ಪರ್ಧಿಗಳು 93 ಫೈನಲಿಸ್ಟ್ಗಳನ್ನು ಉದ್ಯಮದ ತಜ್ಞರಾದ ಪ್ರಸಾದ್ ಬಿಡಪ್ಪ, ಕೆವಿನ್ ಒಲಿವರ್, ನಯಾನಿಕಾ ಚಟರ್ಜಿ, ರ‍್ರಿ ದಬಾಸ್ ಮತ್ತು ರಾಹುಲ್ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಹಲವು ದಿನಗಳ ಕಾಲ ಗ್ರೂಮಿಂಗ್, ತರಬೇತಿ ಮತ್ತು ಫೈನಲ್‌ಗಾಗಿ ಆಯ್ಕೆ ಮಾಡಲಾಯಿತು.
ಬೆಸ್ಟ್ ಸ್ಕಿನ್ ವಿಭಾಗದಲ್ಲಿ ಸಾರಾ ಶಾಹ್ ಮತ್ತು ಧ್ಯಾನ್ ನಂದಕುಮಾರ್ ಅವರು ವಿಜೇತರಾದರೆ, ಇವಾಂಗ್‌ಲಿನ್ ಸೋನಾ ಮತ್ತು ಅಭಿಜಿತ್ ಎಸ್‌ಕೆ ಅವರು ಅತ್ಯುತ್ತಮ ಡ್ಯಾನ್ಸರ್ ಆಗಿ ಹೊರ ಹೊಮ್ಮಿದರು. ಅತ್ಯುತ್ತಮ ಬೆಸ್ಟ್ ಜೆಂಡರ್ ಫ್ಲುವಿಡ್ ಸ್ಟೆöಲಿಂಗ್ ಆಗಿ ಸಿದ್ದಾರ್ಥ್ ನಾಯರ್ ವಿಜೇತರಾದರು. ಬೆಸ್ಟ್ ಬಾಡಿ ವಿಭಾಗದಲ್ಲಿ ಆಸ್ತಾ ಸಿಂಗ್ ಮತ್ತು ಮಹೇಶ್ ಅವರು ಪ್ರಶಸ್ತಿ ಪಡೆದರು. ಫ್ಯೂಚರ್ ಟಿವಿ ಸ್ಟಾರ್ ವಿಭಾಗದಲ್ಲಿ ಖಷ್ಬು ಬೆನಿವಾಲ್, ನಿತಿನ್ ಕುಮಾರ್ ಮತ್ತು ತಾನಿಶ್ ರಾಜು, ಬೆಸ್ಟ್ ಪ್ರಿಂಟ್ ಮಾಡೆಲ್ ಆಗಿ ಹಿಂಪಾ ಮುತ್ತಮ್ಮ ಮತ್ತು ಸುಹೇಲ್ ಅವರಿಗೆ ಪ್ರಶಸ್ತಿ ಲಭಿಸಿತು. ಸಮೀಕ್ಷಾ ಎಸ್‌ಆರ್ ಮತ್ತು ಅಮಲ್ ಜಾನಿ ಅವರಿಗೆ ಫ್ಯೂಚರ್ ಸ್ಯಾಂಡಲ್‌ವುಡ್ ಸ್ಟಾರ್ ಪ್ರಶಸ್ತಿ, ಫ್ಯೂಚರ್ ಬಾಲಿವುಡ್ ಸ್ಟಾರ್ ಪ್ರಶಸ್ತಿಯನ್ನು ದಿಶಾ ಸಾಲಂಕೆ ಮತ್ತು ಅಭಿನವ್ ವರ್ಮಾ ಹಾಗೂ ಬೆಸ್ಟ್ ರನ್‌ವೇ ಮಾಡೆಲ್ ಪ್ರಶಸ್ತಿಯನ್ನು ಖುಷಿನಾ, ಪೃಥ್ವಿ ಪುರೋಹಿತ್ ಮತ್ತು ಕಾರ್ತೀಕ್ ಚೌಧರಿ ಅವರು ಪಡೆದುಕೊಂಡರು.
ಸತ್ಯ ಪಾಲ್, ರಿತು ಕುಮಾರ್, ಸೂಪರ್‌ಡ್ರೆöÊ, ಹಂಕೆಮಾಲರ್, ಬ್ರೂಕ್ಸ್ ಬ್ರದರ್ಸ್ ಕೆಲ್ವಿನ್ ಕ್ಲೇನ್, ಅರ್ಮಾನಿ ಎಕ್ಸ್ಚೇಂಜ್, ಟಾಮಿ ಹಿಲ್‌ಫೈಯರ್, ರೆಯ್ನು ಟಂಡನ್ ಮತ್ತು ಶಾಂತು & ನಿಖಿಲ್ ಅವರ ತಂಡ ನಡೆಸಿಕೊಟ್ಟ ಕಾರ್ಯಕ್ರಮಗಳು ಫಿನಾಲೆ ಕಾರ್ಯಕ್ರಮಗಳನ್ನು ಇನ್ನಷ್ಟು ಆಕರ್ಷಕಗೊಳಿಸಿದವು. ಪ್ಯಾರೀಸ್ ಫ್ಯಾಷನ್ ವೀಕ್- ಸೀಸನ್ 4ರಲ್ಲಿ ಪಾಲ್ಗೊಂಡು ನೇರವಾಗಿ ರಿಯ್ನು ಟಂಡನ್ ಅವರು ದೀಪಾವಳಿ ಸಂಗ್ರಹಗಳನ್ನು ಅನಾವರಣಗೊಳಿಸಿದರು. ಈ ಮೂಲಕ ವರ್ಣರಂಜಿತ ಮತ್ತು ಕರಕುಶಲತೆಯನ್ನು ಪ್ರೇಕ್ಷಕರ ಮುಂದಿಟ್ಟರು. ಇದೇ ವೇಳೆ, ವೇದಿಕೆ ಮೇಲೆ ಆಕರ್ಷಕ ಪಟಾಕಿಗಳ ಪ್ರದರ್ಶನವು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು. ಬಾಲಿವುಡ್ ಸ್ಟಾರ್ ಡಿನೋ ಮೊರೆಯಾ ಮತ್ತು ಮಿಸ್ ಟೀನ್ ಯುನಿವರ್ಸ್ ಇಂಡಿಯಾ 2024 ಕೆರಿಸಾ ಅವರು ಎಲ್ಲರನ್ನೂ ರಂಜಿಸಿದರು.
ಈ ಸುಂದರ ಸಂಜೆಯ ಉತ್ಸಾಹದ ಜೊತೆಯಲ್ಲಿ ಭಾರತದ ಹೆಸರಾಂತ ಪುರುಷ ಬೆಲ್ಲಿ ಡ್ಯಾನ್ಸರ್ ಮತ್ತು ವೈರಲ್ ಸೆನ್ಸೇಷನ್ ಆಗಿರುವ ಅಜಿತ್ ಶೆಟ್ಟಿ ಅವರು ಲಯಬದ್ಧವಾದ ಕಲಾತ್ಮಕತೆಯ ಶ್ರೀಮಂತಭರಿತವಾದ ಪ್ರದರ್ಶನಗಳನ್ನು ನೀಡುವ ಮೂಲಕ ಎಲ್ಲರನ್ನೂ ರಂಜಿಸಿದರು.

ಫೀನಿಕ್ಸ್ ಮಾಲ್ ಆಫ್ ಏಷ್ಯಾದ ಸೆಂಟರ್ ಡೈರೆಕ್ಟರ್ ಮತ್ತು ದಿ ಫೀನಿಕ್ಸ್ ಮಿಲ್ಸ್ ಲಿಮಿಟೆಡ್‌ನ ಡೈರೆಕ್ಟರ್ ಮಾರ್ಕೆಟಿಂಗ್ ರೀತು ಮೆಹ್ತಾ ಅವರು ಮಾತನಾಡಿ, ಫೀನಿಕ್ಸ್ ಮೆಗಾ ಮಾಡೆಲ್ ಹಂಟ್ 2025 ಒಂದು ಅತ್ಯದ್ಭುತವಾದ ಪ್ರಯಾಣವಾಗಿದೆ. ಇದು ಬೆಂಗಳೂರಿನ ಚೈತನ್ಯ ಮತ್ತು ಫ್ಯಾಷನ್ ಭವಿಷ್ಯವನ್ನು ಪ್ರತಿಬಿಂಬಿಸುವ ವೇದಿಕೆಯಾಗಿ ಮಾರ್ಪಟ್ಟಿತ್ತು. ಆರಂಭಿಕ ಹಂತಗಳಿಂದ ಅಂತಿಮ ಹಂತದವರೆಗೆ ಸ್ಪರ್ಧಿಗಳು ಮಹತ್ವಾಕಾಂಕ್ಷೆಯೊಂದಿಗೆ ಆಗಮಿಸಿದ್ದರು ಮತ್ತು ರನ್‌ವೇಯನ್ನು ಹೊಂದಿರುವ ಆತ್ಮವಿಶ್ವಾಸದ ಪ್ರದರ್ಶಕರಾಗಿ ರೂಪಾಂತರಗೊಂಡ ಬಗೆಯನ್ನು ನಾವು ನೋಡಿದ್ದೇವೆ ಮತ್ತು ಆಸ್ವಾದಿಸಿದ್ದೇವೆ. ಈ ಬೆಳವಣಿಗೆಯು ಈ ವೇದಿಕೆಯ ನೈಜವಾದ ಸಾರವಾಗಿದೆ ಮತ್ತು ಅದನ್ನು ವೀಕ್ಷಿಸಲು ಅತ್ಯಂತ ಸ್ಫೂರ್ತಿದಾಯಕವಾಗಿತ್ತು. ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ರೀಟೇಲ್ ವ್ಯಾಪಾರವನ್ನೂ ಮೀರಿದ ಮತ್ತು ಸಮುದಾಯದೊಂದಿಗೆ ಪ್ರತಿಧ್ವನಿಸುವ ಸಾಂಸ್ಕೃತಿಕ ಕ್ಷಣಗಳನ್ನು ಸೃಷ್ಟಿಸುವ ಅನುಭವಗಳನ್ನು ಆಯೋಜಿಸಲು ನಮಗೆ ಹೆಮ್ಮೆ ಎನಿಸುತ್ತದೆ. ಅಂತಿಮ ಸ್ಪರ್ಧಿಗಳು ಮಿಂಚುವುದನ್ನು ಮತ್ತು ಪ್ರೇಕ್ಷಕರು ಅವರ ಪ್ರದರ್ಶನಗಳನ್ನು ಕಂಡು ಸಂತೋಷ ವ್ಯಕ್ತಪಡಿಸಿದರು.
ದಿ ಫೀನಿಕ್ಸ್ ಮಿಲ್ಸ್ ಲಿಮಿಟೆಡ್‌ನ ಸೌತ್ ಇಂಡಿಯಾ ಮಾಲ್ಸ್ ವಿಭಾಗದ ಅಧ್ಯಕ್ಷ ಗಜೇಂದ್ರ ಸಿಂಗ್ ರಾಥೋಡ್ ಅವರು ಮಾತನಾಡಿ, ಫೀನಿಕ್ಸ್ ಮೆಗಾ ಮಾಡೆಲ್ ಹಂಟ್ 2025 ರ ಅಂತಿಮ ಸ್ಪರ್ಧೆಯುಫೀನಿಕ್ಸ್ ಮಾಲ್ ಆಫ್ ಏಷ್ಯಾಗೆ ಅಸಾಧಾರಣ ಶಕ್ತಿ ಮತ್ತು ಉತ್ಸಾಹವನ್ನು ತುಂಬಿತು. ಇಲ್ಲಿ ಪಾಲ್ಗೊಂಡವರ ಪ್ರಮಾಣ, ಪ್ರತಿಭೆಯ ಗುಣಮಟ್ಟ- ಅನಾವರಣ ಹಾಗೂ ಪ್ರೇಕ್ಷಕರ ಉತ್ಸಾಹವು ನಗರದ ಫ್ಯಾಷನ್ ಜಗತ್ತಿಗೆ ಇದು ಒಂದು ನಿರ್ಣಾಯಕವಾದ ಕ್ಷಣವಾಗಿದೆ. ನಮಗೆ ಇದು ಶೈಲಿ, ಸಂಸ್ಕೃತಿ ಮತ್ತು ಸಮುದಾಯು ಅರ್ಥಪೂರ್ಣ ರೀತಿಯಲ್ಲಿ ಒಟ್ಟಿಗೆ ಸೇರುವ ನೆಚ್ಚನ ತಾಣವಾಗಿ ರೂಪುಗೊಂಡಿದೆ. ಈ ಆಚರಣೆಯು ಫೀನಿಕ್ಸ್ ಮಾಲ್ ಆಫ್ ಏಷ್ಯಾ ಬೆಂಗಳೂರನ್ನು ಪ್ರೇರೇಪಿಸುವ ಮತ್ತು ಸಂಪರ್ಕ ಕಲ್ಪಿಸುವ ಒಂದು ಉನ್ನತ ಅನುಭವಕ್ಕೆ ಹೆಗ್ಗುರುತಾಗಿ ಪರಿವರ್ತನೆಗೊಂಡಿದೆ ಎಂಬುದನ್ನು ತೋರಿಸುತ್ತದೆ’’ ಎಂದು ಅಭಿಪ್ರಾಯಪಟ್ಟರು.