LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬೆಳಗಾವಿ: KSRTC ಬಸ್‌ನಲ್ಲಿಯೇ ಸಾವಿಗೆ ಶರಣಾದ ಬಸ್ ಮೆಕ್ಯಾನಿಕ್

ಬೆಳಗಾವಿ : ಬೆಳಗಾವಿ ಡಿಪೋ – 1 ರ ಮೆಕ್ಯಾನಿಕ್ ಓರ್ವರು KSRTC ಬಸ್‌ನಲ್ಲಿಯೇ ನೇಣು ಬೀಗಿದುಕೊಂಡು ಸಾವಿಗೆ ಶರಣಾದ ದುರ್ಘಟನೆ ನಡೆದಿದೆ.

ಸಾವಿಗೆ ಶರಣಾದ ಬಸ್ ಮೆಕ್ಯಾನಿಕ್ ಕೇಶವ ಕಮಡೊಳಿ (57) ಎಂದು ತಿಳಿದು ಬಂದಿದೆ. ಮೃತ ಕೇಶವ ಕಮಡೊಳಿ ಬೆಳಗಾವಿಯ ಹಳೇ ಗಾಂಧಿನಗರದ ನಿವಾಸಿಯಾಗಿದ್ದು, ಕೆಎಸ್​​ಆರ್​ಟಿಸಿ ಬಸ್​ ವಾಶಿಂಗ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.

ಬೆನ್ನು ನೋವು ಇದ್ದ ಕಾರಣ ಡ್ಯೂಟಿ ಬದಲಿಸದಂತೆ ಅಧಿಕಾರಿಗಳಿಗೆ ಕೇಶವ ಅವರು ಮನವಿ ಮಾಡಿದ್ದರು. ಅಷ್ಟಾಗಿಯೂ ಕೂಡ ಡ್ಯೂಟಿ ಬದಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆನ್ನು ನೋವು ಇದ್ದ ಹಿನ್ನೆಲೆಯಲ್ಲಿ ಡ್ಯೂಟಿ ಬದಲಿಸಿದ್ದಕ್ಕೆ ಮತ್ತು ಕೆಲಸದ ಒತ್ತಡ ತಡೆದುಕೊಳ್ಳಲು ಆಗದೆ ಕೇಶವ ಶುಕ್ರವಾರ ತಡರಾತ್ರಿ (ಮಾ.07) ಸಾವಿಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ. ಮೆಕ್ಯಾನಿಕ್ ಆತ್ಮಹತ್ಯೆ ಮಾಡಿಕೊಂಡ ಪರಿಣಾಮ ಅಧಿಕಾರಿಗಳ ವಿರುದ್ಧ ಮೃತ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST