LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಭದ್ರಾ ಯೋಜನೆ : ಕೇಂದ್ರ ಸರಕಾರ ನಿರ್ಲಕ್ಷ : ಸಿಎಂ ಸಿದ್ದರಾಮಯ್ಯ

 

ಚಿತ್ರದುರ್ಗ : ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನ ಮಾಡುವುದಾಗಿ ಘೋಷಿಸಿದ್ರು, 5300 ಕೋಟೊ ಕೊಡ್ತಿವೆಂದು ಬಜೆಟ್ ನಲ್ಲಿ ಘೋಷಣೆ ಈವರೆಗೆ ಅದರ ಬಗ್ಹೆ ಯಾಕೆ ಪ್ರಸ್ತಾಪ ಇಲ್ಲ, ಅನೇಕ ಸಲ ಪ್ರಧಾನಿ, ಅರ್ಥ  ನೀರಾವರಿ ಸಚಿವರನ್ನು ನಾನು, ಡಿಸಿಎಂಭೇಟಿ ಮಾಡಿಮನವಿ ಮಾಡಿದ್ರು ಪ್ರಯೋಜನ ಆಗಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರಕ್ಕೆ ಬಾಗಿನವನ್ನು ಅರ್ಪಿಸಿ ನಂತರ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು, ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ. ಕೊಟ್ಟ ಮಾತನ್ನು ಉಳಿಸಿಕೊಳ್ಳೋದು ರಾಜಕೀಯ ಪಕ್ಷದಬದ್ದತೆ ಬಿಜೆಪಿ ಎಂದಿಗೂ ಕೊಟ್ಟಮಾತು ಉಳಿಸಿಕೊಂಡಿಲ್ಲ ಎಂದರು.

ವಾಣಿವಿಲಾಸ ಸಾಗರ ಜಲಾಶಯ ಈ ವರ್ಷ ಕೋಡಿಬಿದ್ದಿದೆಸರ್ಕಾರದ ವತಿಯಿಂದ ಗಂಗಾಪೂಜೆ,ಬಾಗಿನ ಅರ್ಪಿಸಲು ಸುಧಾಕರ ಹೇಳಿದ್ರು ನಾವು ಬಾಗಿನ ಅರ್ಪಿಸಿದ್ದೇವ ಇದು ಜಲಾಶಯ ಭರ್ತಿಯಾಗಿ ಮೂರನೇಬಾರಿಕೋಡಿಬಿದ್ದಿದೆ ಬಿಜೆಪಿಯ ಸಂಸದ ಕಾರಜೋಳ್ ಅವರು ಹೇಳಿದ್ರು ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನ ಮಾಡುವುದಾಗಿ ಘೋಷಿಸಿದ್ರು ನೀವು ಹೇಳಿದ್ದು ಯಾಕೆ ಮಾಡಲು ಆಗಲಿಲ್ಲ ನಿರ್ಮಲ ಸೀತರಾಂ ಘೋಷಿಸಿದ್ರು, 5300 ಕೋಟೊ ಕೊಡ್ತಿವೆಂದು ಬಜೆಟ್ ನಲ್ಲಿ ಘೋಷಣೆ ಈವರೆಗೆ ಅದರ ಬಗ್ಹೆ ಯಾಕೆ ಪ್ರಸ್ತಾಪ ಇಲ್ಲ.

ಪ್ರಧಾನಿ,ನೀರಾವರಿ ಅಥವಾ ಆರ್ಥಿಕ ಸಚಿವರ ಬಳಿಬಯಾಕೆ ಚರ್ಚಿಸಿಲ್ಲ ಇನ್ನಾದ್ರು ಒತ್ತಾಯ ಮಾಡಿ ಹಣ ಬಿಡುಗಡೆ ಮಾಡಿಸುವಂತೆ ಸಂಸದ ಕಾರಜೋಳಗೆ ಸಿಎಂ ಒತ್ತಾಯಿಸಿದ್ದು, ಅನೇಕ ಸಲ ಪ್ರಧಾನಿ,ಅರ್ಥ,ನೀರಾವರಿ ಸಚಿವರನ್ನು ನಾನು,ಡಿಸಿಎಂಭೇಟಿ ಮಾಡಿಮನವಿ ಮಾಡಿದ್ರು ಪ್ರಯೋಜನ ಆಗಿಲ್ಲ ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ. ಕೊಟ್ಟ ಮಾತನ್ನು ಉಳಿಸಿಕೊಳ್ಳೋದು ರಾಜಕೀಯ ಪಕ್ಷದಬದ್ದತೆ ಬಿಜೆಪಿ ಎಂದಿಗೂ ಕೊಟ್ಟಮಾತು ಉಳಿಸಿಕೊಂಡಿಲ್ಲ ಎಂದು ಕಿಡಿ ಕಾರಿದರು.

115 ವರ್ಷಗಳ ಇತಿಹಾಸ ಇರುವ ಜಲಾಶಯ ರಾಜ್ಯದ ಮೊದಲಜಲಾಶಯ ಮೈಸೂರು ಒಡೆಯರ ತಾಯಿ ಕೆಂಪರಾಜಮ್ಮಣ್ಣಿ 1907 ರಲ್ಲಿನಿರ್ಮಾಣ ಅವರ ಒಡವೆಗಳನ್ನು ಅಡವಿಟ್ಟುಅಣಕಟ್ಟು ನಿರ್ಮಾಣ 45 ಲಕ್ಷಖರ್ಚು ಮಾಡಿಅಣೆಕಟ್ಟು ನಿರ್ಮಾಣ ಇಂದು ಸಾವಿರಾರು ಕೋಟಿಬೆಲೆ ಕಟ್ಟಬೇಕಿತ್ತು ಅಂದು ಬ್ರಿಟಿಷರು,ರಾಜರ ಕಾಲದಲ್ಲಿಜಲಾಶಯ ನಿರ್ಮಾಣ ಮಳೆ ಕಡಿಮೆ ಬೀಳುವ ಪ್ರದೇಶದಲ್ಲಿ ಜಲಾಶಯ ನಿರ್ಮಿಸಿಇಲ್ಲಿನ ರೈತರಿಗೆ ಅನುಕೂಲ ಕೆಂಪರಾಜಮ್ಮಣ್ಣಿ ಕಾರ್ಯವನ್ನು ನಾವು ಸ್ಮರಿಸುತ್ತೇವೆಇದು ಬಿಸಿಲನಾಡು,ಬರದನಾಡು ಈ ಭಾಗಕ್ಕೆನೀರು ಒದಗಿಸಲು ಈ ಅಣೆಕಟ್ಟು ನಿರ್ಮಾಣ ನೀರಾವರಿಗೆ ನಮ್ಮ ಸರ್ಕಾರ ಒತ್ತು ನೀಡಿದೆ ಎಂದರು.

ವಿವಿಸಾಗರ ಹಿನ್ನೀರಿನಿಂದತೊಂದರೆ ಗೀಡಾದ ಹೊಸದುರ್ಗ ರೈತರಿಗೆ ಅನುಕೂಲಕ್ಕೆ ಗೇಟ್ ಅಳವಡಿಸುತ್ತೇವೆ ರೈತರ ಅನುಕೂಲಕ್ಕೆ120 ಕೋಟಿಯೋಜನೆ ಸಿದ್ದ ಪಡಿಸಿದ್ದೇವೆ ಸಿಎಂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದಿನಗಳನ್ನು ನೆನೆಸಿಕೊಂಡ ಸಿಎಂ 56000 ಕೋಟಿ ರೂಪಾಯಿಗಳನ್ನುರಾಜ್ಯದ ಜನವರಿಗೆ ಖರ್ಚು ಮಾಡಲಾಗ್ತಿದೆ 1 ಲಕ್ಷದ21 ಸಾವಿರ ಜನಮಹಿಳೆಯರಿಗೆ  ಗೃಹ ಲಕ್ಷ್ಮಿ ಹಣ ನೀಡ್ತಿದ್ದೇವೆ ಎಲ್ಲಾ ಬಡವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿತುಂಬುವ ಕಾರ್ಯ ಬಡವರು ಕೂಡ ಮುಖ್ಯ ವಾಹಿನಿಗೆ ಬರಬೇಕು ನಮ್ಮ ಸರ್ಕಾರಕ್ಕೆ 136 ಸ್ಥಾನನೀಡಿದ್ದೀರ ಉಪಚುನಾವಣೆಯಲ್ಲಿ 3 ಕ್ಕೆ 3 ಸ್ಥಾನಗೆದ್ದಿದ್ದೇವೆ ಬಿಜೆಪಿಯವರು ಸುಳ್ಳುಆರೋಪಲೆಕ್ಕಿಸದೇ ನಾವು ಗೆದ್ದಿದ್ದೇವೆಜನ ನಮ್ಮ ಪರವಾಗಿದ್ದಾರೆ ಇದನ್ನು ನೋಡಿ ಸಹಿಸಲಾಗದೆ  ಬಿಜೆಪಿಯವರು ಸುಳ್ಳು ಅಪಪ್ರಚಾರ ಮಾಡ್ತಿದ್ದೀರೆ ನಿಮ್ಮಆಶೀರ್ವಾದ ಸದಾ ಇರಲೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್  ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್, ಶಾಸಕರಾದ ರಘುಮೂರ್ತಿ, ಕೆ.ಸಿ.ವಿರೇಂದ್ರ (ಪಪ್ಪಿ), ಅದಿ ಜಾಂಭವ ಅಭೀವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್,

ಮಾಜಿ ಸಂಸದ ಬಿ.ಎನ್ ಚಂದ್ರಪ್ಪ, ಮಾಜಿ ಸಚಿವರಾಧ ಎಚ್,ಅಂಜನೇಯ, ಜಿ.ಪಂ,ಮಾಜಿ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಸುರೇಶ್ ಬಾಬು, ಮಾಜಿ ಸದಸ್ಯ ನಾಗೇಂದ್ರ ನಾಯ್ಕ, ಡಿಸಿಸಿ ಅಧ್ಯಕ್ಷರಾದ ಎಂ.ಕೆ.ತಾಜ್ಪೀರ್, ಕಾರ್ಯಧ್ಯಕ್ಷರಾದ ಹಾಲಸ್ವಾಮಿ, ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಅಭಿಮಾನಿಗಳು ಭಾಗವಹಿಸಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST