K2kannadanews.in
https://youtu.be/uPZom1h-7kg?si=OJ_6KzR5VUjZQCRD
Crime News ಚಿತ್ತಾಪುರ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಗೀಣ ನದಿಯಲ್ಲಿ ಬಿದ್ದ ಪರಿಣಾಮ, ಸ್ಥಳದಲ್ಲೇ ಚಾಲಕ ಮೃತ ಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿರುವ ಘಟನೆ ದಂಡೋತಿ ಸಮೀಪದ ಕಾಗಿಣಾ ನದಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡೋತಿ ಸಮೀಪದ ಕಾಗಿಣಾ ನದಿಯಲ್ಲಿ ಕಾರೊಂದು ಬಿದ್ದು ಬಹಾರಪೇಠ್ ನಿವಾಸಿ ನಿಂಗಪ್ಪ ಪೂಜಾರಿ (50) ಮೃತಪಟ್ಟ ದುರ್ದೈವಿ. ಕೃಷ್ಣಾ ಮತ್ತು ಉಮೇಶ ಎನ್ನುವವರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಗಾಯಳುಗಳಿಗೆ ಚಿತ್ತಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
https://youtu.be/Cx8-MMn7zT0?si=k44Rrr7CTdA7UHJA
ಸೇಡಂನಿಂದ ಚಿತ್ತಾಪುರಕ್ಕೆ ಬರುವಾಗ ಈ ಘಟನೆ ಜರುಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್'ಐ ಚೇತನ್, ಸಿಬ್ಬಂದಿಗಳಾದ ಕಮಲಾಕರ್, ಪ್ರಶಾಂತ, ಮಾಳಗೊಂಡ, ರಮೇಶ ಅವರು ಭೇಟಿ ನೀಡಿ ಪರೀಶಿಲನೆ ನಡೆಸಿದರು.
ಈ ಕುರಿತು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.