LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಚೆಕ್ ಬೌನ್ಸ್ ಪ್ರಕರಣ: ಮೂಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣಗೆ ಶಿಕ್ಷೆ..!

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಹಗರಣದ ದೂರುದಾರ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣಗೆ ಮೈಸೂರಿನ ಮೂರನೇ ಜೆಎಂಎಫ್ ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಕುಮಾರ್ ಎಂಬುವವರು ದಾಖಲಿಸಿದ್ದ ಚೆಕ್ ಬೌನ್ಸ್ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜನವರಿ 30ರಂದು ಶಿಕ್ಷೆ ವಿಧಿಸಿ ಆದೇಶಿಸಿದೆ. ಆರೋಪ ಸಾಬೀತಾಗಿದ ಹಿನ್ನೆಲೆ ಕೋರ್ಟ್ ಶಿಕ್ಷೆ ವಿಧಿಸಿದ್ದು, ಶಿಕ್ಷೆಯ ಪ್ರಮಾಣವಿನ್ನು ಪ್ರಕಟವಾಗಿಲ್ಲ.

ಪತ್ರಿಕೆ ನಡೆಸಲು ಹಾಗೂ ಗೃಹೋಪಯೋಗಕ್ಕಾಗಿ ಕುಮಾರ್ ಎಂಬುವವರಿಂದ ಕೃಷ್ಣ ಅವರು 2015ರಲ್ಲಿ 1.75 ಲಕ್ಷ ರೂ ಸಾಲ ಪಡೆದಿದ್ದರು. ಈ ಸಂಬಂಧ ಸ್ನೇಹಮಯಿ ಕೃಷ್ಣ ಅವರು ಕೋ ಆಪರೇಟಿವ್ ಬ್ಯಾಂಕ್ ಚೆಕ್ ನೀಡಿದ್ದರು. ಈ ಚೆಕ್‌ಅನ್ನು ಕುಮಾರ್ ಅವರು ಬ್ಯಾಂಕ್‌ಗೆ ಹಾಕಿದಾಗ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕುಮಾರ್ ಅವರು ಕೋರ್ಟ್ ಮೊರೆ ಹೋಗಿದ್ದರು.

ಕೋರ್ಟ್ ಶಿಕ್ಷೆ ವಿಧಿಸಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ ಅವರು, ನನಗೆ ಕುಮಾರ್ ಸಾಲವನ್ನೇ ನೀಡಿರಲಿಲ್ಲ. ನನಗೆ ಸಮಸ್ಯೆ ಇದ್ದ ಕಾರಣ ಸಾಲ ಕೇಳಿದ್ದೆ. ಸಾಲ ಕೊಡುವುದಾಗಿ ಹೇಳಿ ದಿನಾಂಕ ನಮೂದಿಸದ ಚೆಕ್ ಪಡೆದಿದ್ದ. ನಂತರ ಸಾಲವನ್ನು ಕೊಡದೆ ಚೆಕ್‌ನ್ನು ಬ್ಯಾಂಕ್‌ಗೆ ಪ್ರೆಸೆಂಟ್ ಮಾಡಿದ್ದ. ನಂತರ ಚೆಕ್ ಬೌನ್ಸ್ ಮಾಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದ. ಈ ಸಂಬಂಧ ನನ್ನ ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಣ್ಣಿಗೆ ಕಾಣದಂತಹ  ಗಾಳಿ ಮುಖಾಂತರ ನಕಾರಾತ್ಮಕ ಮಾಟ ಮಂತ್ರದ ದೋಷಗಳಿಗೆ ವಿಶೇಷ ಪರಿಹಾರ ತಿಳಿದುಕೊಳ್ಳಿ-ಹಡಪದ ಅಪ್ಪಣ್ಣ  ಅವರ ವಚನ.!ಚಳ್ಳಕೆರೆ: ಆನ್ ಲೈನ್ ಬೆಟ್ಟಿಂಗ್ : ಮತ್ತೆ ಇಡಿ ಅಧಿಕಾರಿಗಳ ದಾಳಿ.!ಹೊಸಕೋಟೆ , ದೇವನಹಳ್ಳಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ತಾತ್ಕಲಿಕ ಆಯ್ಕೆ ಪಟ್ಟಿ ಪ್ರಕಟ.!ಬುಧವಾರ ನಿನ್ನೆ ಚಿತ್ರದುರ್ಗ ಜಿಲ್ಲೆಯ ಯಾವ ಭಾಗಗಳಲ್ಲಿ ಎಷ್ಟು ಮಳೆ ಆಗಿದೆ.?ಶ್ವಾನಗಳು 24 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ.!ಕಾಂತಾರ ಚಾಪ್ಟರ್ 1 ಚಿತ್ರದ ವಿರುದ್ಧ ಗಂಭೀರ ಆರೋಪ ಏನು.?540 ಗಸ್ತು ಅರಣ್ಯ ಪಾಲಕ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ.!ವಿಪಕ್ಷನಾಯಕ ಆರ್ ಅಶೋಕ್ ಬೆಂಗಾವಲು ವಾಹನ ಚಾಲಕ ಆತ್ಮಹತ್ಯೆ.!ಕೆಮ್ಮಿನ ಸಿರಪ್ ಸೇವಿಸಿ ಹಲವಾರು ಮಕ್ಕಳು ಸಾವುಗೆ ಕಾರಣರಾದ ಕಂಪನಿಯ ಮಾಲೀಕ ಅರೆಸ್ಟ್..!