LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಕ್ಕಳಿಗೆ ಅಪೌಷ್ಟಿಕತೆಯ ಸಮಸ್ಯೆ ಕಾಡದಿರಲಿ......

ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ ನೂರು ಮಕ್ಕಳಲ್ಲಿ 32 ಮಕ್ಕಳು (ಅಂದಾಜು ಮೂರರಲ್ಲಿ ಒಬ್ಬರು) ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಶೇ 36 ಮಕ್ಕಳು ಅಪೌಷ್ಟಿಕತೆಯಿಂದಾಗಿ ಕುಬ್ಬರಾಗಿದ್ದಾರೆ, ಮಗುವಿಗೆ ಸರಿಯಾಗಿ ಎದೆಹಾಲನ್ನು ಕುಡಿಸದೆ ಇರುವುದು, ಆರು ತಿಂಗಳ ನಂತರವೂ ಮಗುವಿಗೆ ಆಹಾರ ನೀಡುವುದನ್ನು ಪ್ರಾರಂಭಿಸದೇ ಇರುವುದು, ಬಾಟಲಿಯಲ್ಲಿ ಹಾಲು ಕುಡಿಸುವ ಅಭ್ಯಾಸ, ಆಗಾಗ ಮಗುವಿಗೆ ಆರೋಗ್ಯ ಕೈಕೊಡುತ್ತಿರುವುದು, ಬಡತನ ಮೊದಲಾದ ಕಾರಣಗಳಿಂದ ಅಪೌಷ್ಟಿಕತೆ ತಲೆದೋರುತ್ತದೆ. ದೀರ್ಘಕಾಲದಿಂದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಗುವಿನ ತೂಕ ಕಡಿಮೆಯಾಗುತ್ತದೆ ಮತ್ತು ಬೆಳವಣಿಗೆಯು ಕುಂಠಿತವಾಗಿಬಿಡುತ್ತದೆ.

ಅಪೌಷ್ಟಿಕತೆಯನ್ನು ಕಂಡುಹಿಡಿಯುವುದು ಹೇಗೆ? ಮಗುವಿನ ತೂಕ ಮತ್ತು ಎತ್ತರ. ಅವರ ವಯಸ್ಸಿನ ಇತರ ಆರೋಗ್ಯವಂತ ಮಕ್ಕಳಿಗೆ ಹೋಲಿಸಿ ನೋಡಿದಾಗ ಹೆಚ್ಚಿದೆಯೋ, ಸರಿಯಿದೆಯೇ ಅಥವಾ ಕಡಿಮೆ ಇದೆಯೇ ಎಂಬುದು ತಿಳಿಯುತ್ತದೆ. ವಯಸ್ಸಿಗೆ ತಕ್ಕ ತೂಕವಿಲ್ಲದಿದ್ದರೆ 'ಕಡಿಮೆ ತೂಕ' ಎಂದೂ, ವಯಸಿಗೆ ತಕ್ಕ ಉದ್ದವಿಲ್ಲದಿದ್ದರೆ 'ಕುಂಠಿತ ಬೆಳವಣಿಗೆ' ಎಂದೂ, ಉದ್ದಕ್ಕೆ ತಕ್ಕ ತೂಕವಿಲ್ಲದಿದ್ದರೆ 'ಕ್ಷೀಣ ಬೆಳವಣಿಗೆ' ಎಂದೂ ಕರೆಯುತ್ತಾರೆ. ಸಾಧಾರಣವಾಗಿ ಆಯಾ ವಯಸ್ಸಿನ ಮಕ್ಕಳ ತೂಕ ಮತ್ತು ಎತ್ತರ ಎಷ್ಟಿರುತ್ತದೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆಯವರು ಲೆಕ್ಕ ಹಾಕಿ ಸುಲಭವಾಗಿ ಅರ್ಥವಾಗುವ ಹಾಗೆ ರೇಖಾನಕ್ಷೆಯನ್ನು ಮಾಡಿದ್ದಾರೆ. ಅದು ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿದೆ. ಮಕ್ಕಳ ತಜ್ಞರ ಬಳಿಯೂ ಇರುತ್ತದೆ. ಅದರಲ್ಲಿ ಉದ್ದ ಮತ್ತು ಬೇಕಾಗುತ್ತದೆ. ಹಾಗಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ತೂಕವನ್ನು ನಮೂದಿಸಿದಾಗ ಅಪೌಷ್ಟಿಕತೆ ಇದೆಯೇ, ಇಲ್ಲವೇ ಎಂದು ಸುಲಭವಾಗಿ ಹೇಳಬಹುದು. ಇದ್ದರೆ ಅದರ ತೀವ್ರತೆ ಎಷ್ಟಿದೆ ಎಂಬುದೂ ತಿಳಿಯುತ್ತದೆ.ಆರು ತಿಂಗಳಿನಿಂದ ಐದು ವರ್ಷ ವಯಸ್ಸಿನ ಮಕ್ಕಳಲ್ಲಿ ತೋಳಿನ ಸುತ್ತಳತೆಯನ್ನು ಬಳಸಿಯೂ ಅಪೌಷ್ಟಿಕತೆಯನ್ನು ಕಂಡುಹಿಡಿಯಬಹುದು. ಅದು II.5 ಸೆಂ.ಮೀ.ಗಿಂತ ಕಡಿಮೆ ಇದ್ದರೆ ತೀವ್ರ ಮಟ್ಟದ ಅಪೌಷ್ಟಿಕತೆ ಎಂದೂ, II.5 ರಿಂದ 12.5 ಸೆಂ.ಮೀ. ಇದ್ದರೆ ಸಾಧಾರಣ ಮಟ್ಟದ ಅಪೌಷ್ಟಿಕತೆ ಎಂದೂ ಹಾಗೂ 13.5 ಸೆಂ.ಮೀ.ಗಿಂತ ಹೆಚ್ಚಿದ್ದರೆ ಅಪೌಷ್ಟಿಕತೆ ಇಲ್ಲದ ಆರೋಗ್ಯವಂತ ಮಗು ಎಂದೂ ಕರೆಯಲಾಗುತ್ತದೆ.

ಬಾಟಲಿ ಹಾಲು ಕುಡಿಸಬಹುದೇ? : ಎದೆಹಾಲಿನಲ್ಲಿರುವ ಸಂತುಲಿತ ಪೋಷಕಾಂಶಗಳು, ರೋಗನಿರೋಧಕಗಳು ಬಾಟಲಿ ಹಾಲಿನಲ್ಲಿರುವುದಿಲ್ಲ.ತೀವ್ರಅಪೌಷ್ಟಿಕತೆ ಐದು ಪರಿಹಾರವಾಗಲು ಸಾಧಾರಣ ಮೂರರಿಂದಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ದಾದಿಯರಿಂದ ಸಹಾಯ ಪಡೆದುಕೊಳ್ಳಬೇಕು.

ಅಪೌಷ್ಟಿಕತೆ ನಿವಾರಣೆಗೆ ಕೆಲವು ಟಿಪ್ಸ್

ಮೊದಲ ಆರು ತಿಂಗಳವರೆಗೆ ಮಗುವಿಗೆ ಎದೆಹಾಲು ಮಾತ್ರ ಕೊಡಿ ಹಾಗೂ ಕನಿಷ್ಠ ಎರಡು ವರ್ಷಗಳವರೆಗೆ ಎದೆಹಾಲು ಮುಂದುವರೆಸಿ, ಮಕ್ಕಳಿಗೆ ಬಾಟಲ್, ನಿಪ್ಪಲ್ ಅಭ್ಯಾಸ ಮಾಡಿಸದಿರಿ.

ಪ್ಯಾಕೆಟ್ ಅಥವಾ ಡಬ್ಬಗಳಲ್ಲಿ ಸಿಗುವ ಹುಡಿ ಅಥವಾ ಆಹಾರಗಳನ್ನು ಉಪಯೋಗಿಸಬೇಡಿ, ಮೂರು ವರ್ಷದವರೆಗೆ ಆರು ತಿಂಗಳಿಗೊಮ್ಮೆ 'ಎ' ಜೀವಸತ್ವದ ಬಿಂದುಗಳನ್ನು ಕೊಡಿಸಿ. ಸರಕಾರಿ ಆಸ್ಪತ್ರೆಗಳಲ್ಲಿ ಐದು ವರ್ಷಗಳವರೆಗೆ ಅದನ್ನು ಉಚಿತವಾಗಿ ನೀಡುತ್ತಾರೆ. ಮೊದಲ ಒಂದು ವರ್ಷದವರೆಗೆ ಪ್ರತಿದಿನ 'ಡಿ' ಜೀವಸತ್ವದ ಬಿಂದುಗಳನ್ನು ನೀಡಿರಿ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು